
ಇಬ್ಬನಿ ತಬ್ಬಿದ ಇಳೆಯಲಿ' ಬಿಡುಗಡೆಗೆ ಸಜ್ಜಾಗಿರುವ ಹೊಸ ಸಿನಿಮಾ. ಸುಂದರ ಶೀರ್ಷಿಕೆಯಿಂದಲೇ ಗಮನ ಸೆಳೆಯುತ್ತಿರುವ ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ವಾಗಿದೆ.
ಸ್ಯಾಂಡಲ್ವುಡ್ನ ಖ್ಯಾತ ನಟ-ನಿರ್ಮಾಪಕ ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿರುವ ಈ ಚಿತ್ರ ಮುಂದಿನ ತಿಂಗಳು ಬಿಡುಗಡೆಯಾಗಲಿದ್ದು, ಪ್ರಚಾರ ಕಾರ್ಯ ನಡೆಯುತ್ತಿದೆ. ಸಿನಿಮಾ ಪ್ರಮೋಶನ್ ಭಾಗವಾಗಿ 'ಹೇಳು ಗೆಳತಿ' ಎಂಬ ಹಾಡು ಅನಾವರಣಗೊಂಡಿದೆ. ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶಿಸಿದ ಈ ರೊಮ್ಯಾಂಟಿಕ್ ಚಿತ್ರದಲ್ಲಿ ವಿಹಾನ್ ಮತ್ತು ಅಂಕಿತಾ ಅಮರ್ ನಟಿಸಿದ್ದಾರೆ. ಹೇಳು ಗೆಳತಿ ಹಾಡಿಗೆ ಚರಣ್ ರಾಜ್ ಸಂಗೀತ ಸಂಯೋಜನೆ ಜೊತೆಗೆ ಹಿನ್ನೆಲೆ ಧ್ವನಿ ಕೂಡ ನೀಡಿದ್ದಾರೆ.
ಕಿರಿಕ್ ಪಾರ್ಟಿ ಮತ್ತು ಶ್ರೀಮನ್ನಾರಾಯಣದಂತಹ ಹಿಟ್ ಚಿತ್ರಗಳಿಗೆ ಬರಹಗಾರರಾಗಿ ಕೊಡುಗೆ ನೀಡಿರುವ ಚಂದ್ರಜಿತ್, ಇಬ್ಬನಿ ತಬ್ಬಿದ ಇಳೆಯಲಿ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ್ದಾರೆ, ಇದರಲ್ಲಿ ಮಯೂರಿ ನಟರಾಜ್, ಅನಿರುದ್ಧ್ ಭಟ್ ಮತ್ತು ದಾಮಿನಿ ಧನರಾಜ್ ಮುಂತಾದವರು ನಟಿಸಿದ್ದಾರೆ.
Advertisement