
ಗೀತು ಮೋಹನ್ ದಾಸ್ ನಿರ್ದೇಶನದ ನಟ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಶೂಟಿಂಗ್ ಗಾಗಿ ಸಿದ್ಧತೆ ಪೂರ್ಣಗೊಂಡಿದೆ. ನಟ ಯಶ್ ಈ ಸಿನಿಮಾಗಾಗಿ ತಮ್ಮ ಕೇಶ ವಿನ್ಯಾಸ ಬದಲಾಯಿಸಿಕೊಂಡಿದ್ದಾರೆ. ಇದೊಂದು ಆ್ಯಕ್ಷನ್ ಪ್ಯಾಕ್ಡ್ ಸಿನಿಮಾವಾಗಿದೆ.
ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಚಿತ್ರೀಕರಣಕ್ಕೆ ಯೋಜಿಸಲಾಗಿತ್ತು, ಆದರೆ ಸಾಧ್ಯವಾಗಲಿಲ್ಲ, ಈಗ ತಮ್ಮ ಪ್ರಾಥಮಿಕ ಚಿತ್ರೀಕರಣದ ಕೇಂದ್ರವಾಗಿ ಬೆಂಗಳೂರನ್ನು ಆಯ್ಕೆ ಮಾಡಿಕೊಂಡಿರುವ ನಿರ್ಮಾಣದ ಶೂಟಿಂಗ್ ತಯಾರಿ ಅಂತಿಮ ಹಂತದಲ್ಲಿದೆ ಎಂದು ವರದಿಯಾಗಿದೆ.
ಸೆಟ್ ನಿರ್ಮಾಣವು ಬಹುತೇಕ ಮುಕ್ತಾಯದ ಹಂತದಲ್ಲಿದೆ ಎಂದು ಮೂಲಗಳು ತಿಳಿಸಿವೆ, ಆಗಸ್ಟ್ ಮಧ್ಯದ ವೇಳೆಗೆ ಶೂಟಿಂಗ್ ಪ್ರಾರಂಭವಾಗುವ ಸಾಧ್ಯತೆಯಿದೆ. ವೆಂಕಟ್ ಕೆ ನಾರಾಯಣ ಅವರ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಿಸುತ್ತಿರುವ ಟಾಕ್ಸಿಕ್, ಜಾಗತಿಕ ಬಹುಭಾಷಾ ಬಿಡುಗಡೆಗೆ ಉದ್ದೇಶಿಸಲಾಗಿದೆ.
ಹಾಲಿವುಡ್‌ನಲ್ಲಿ ವ್ಯಾಪಕವಾಗಿ ಬಳಸಲಾಗುವ ವರ್ಚುವಲ್ ಪ್ರೊಡಕ್ಷನ್ ಟೂಲ್ ಸ್ಟಂಟ್‌ವಿಸ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. ಯಶ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ, ಆದರೆ ಇದನ್ನೂ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ. ಚಿತ್ರದಲ್ಲಿ ನಯನತಾರಾ, ಹುಮಾ ಖುರೇಷಿ, ಕಿಯಾರಾ ಅಡ್ವಾಣಿ, ಶೈನ್ ಟಾಮ್ ಚಾಕೊ ಮತ್ತು ನವಾಜುದ್ದೀನ್ ಸಿದ್ದಿಕಿ ಸೇರಿದಂತೆ ಹಲವು ಕಲಾವಿದರು ನಟಿಸುತ್ತಿದ್ದಾರೆ. ತಾಂತ್ರಿಕವಾಗಿ, ಸಿನಿಮಾಟೋಗ್ರಾಫರ್ ರಾಜೀವ್ ರವಿ ಯೋಜನೆಯ ಭಾಗವಾಗಲಿದ್ದಾರೆ.
ಟಾಕ್ಸಿಕ್ ತಂಡವು ಏಪ್ರಿಲ್ 10, 2025 ರಂದು ತಮ್ಮ ಚಿತ್ರದ ಬಿಡುಗಡೆಯ ದಿನಾಂಕವನ್ನು ಘೋಷಿಸಿತು. ಇತ್ತೀಚೆಗೆ, ಪ್ರಭಾಸ್ ಅವರ ಮುಂಬರುವ ಚಿತ್ರ ರಾಜಾ ಸಾಬ್ ಕೂಡ ಅದೇ ದಿನಾಂಕದಂದು ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ. ಎರಡು ದೊಡ್ಡ ಚಿತ್ರಗಳ ಈ ಘರ್ಷಣೆಯೊಂದಿಗೆ, ಯಶ್ ಮತ್ತು ಪ್ರಭಾಸ್ ನಡುವಿನ ಈ ಬಾಕ್ಸ್ ಆಫೀಸ್ ಹಣಾಹಣಿಯು ಹೇಗೆ ತೆರೆದುಕೊಳ್ಳುತ್ತದೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿದೆ.
Advertisement