
ಕೆಜಿಎಫ್, ಸಾಲಾರ್ ಚಿತ್ರ ನಿರ್ದೇಶಕ ಪ್ರಶಾಂತ್ ನೀಲ್ 44ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಅವರಿಗೆ ಸೂಪರ್ ಸ್ಟಾರ್ ಪ್ರಭಾಸ್ ಸೇರಿದಂತೆ ಸಿನಿರಂಗದ ಹಲವು ಗಣ್ಯರು ಶುಭಾಶಯ ಕೋರಿದ್ದಾರೆ. ಪ್ರಭಾಸ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸಾಲಾರ್ ಚಿತ್ರದ ಸೆಟ್ ವೊಂದರ ಫೋಟೋವೊಂದನ್ನು ಹಂಚಿಕೊಳ್ಳುವ ಮೂಲಕ ಪ್ರಶಾಂತ್ ನೀಲ್ ಗೆ ಶುಭ ಹಾರೈಸಿದ್ದಾರೆ.
ಚಿತ್ರದ ಜೊತೆಗೆ "ಲವ್ ಯು ಸರ್! ಹ್ಯಾವ್ ಎ ಬ್ಯೂಟಿಫುಲ್ ಬರ್ತ್ ಡೇ!" ಎಂದು ಬರೆದಿದ್ದಾರೆ. ನಂತರ ನಗುತ್ತಿರುವ ಎಮೋಜಿಯೊಂದನ್ನು ಫೋಸ್ಟ್ ಮಾಡಿದ್ದಾರೆ.ಪ್ರಶಾಂತ್ ನೀಲ್ ನಿರ್ದೇಶನದ, 'ಸಲಾರ್: ಭಾಗ 1- ಚಿತ್ರದಲ್ಲಿ ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್ ಮತ್ತು ಶ್ರುತಿ ಹಾಸನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
Advertisement