
ಹೋಟೆಲ್ ನಲ್ಲಿ ಕೆಲಸ ಮಾಡುವ ಐವರು ಹುಡುಗರ ಸುತ್ತ ನಡೆಯುವ ಕಥೆ ಇಟ್ಟುಕೊಂಡು ಪ್ರತೀಕ್ ಪ್ರಜೋಷ್ ನಿರ್ದೇಶಿಸಿರುವ ಚಿತ್ರ ಚಿಲ್ಲಿ ಚಿಕನ್. ಇತ್ತೀಚೆಗಷ್ಟೇ ಈ ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ. ಆನಂದ್ ಆಡಿಯೋ ಚಾನೆಲ್‌ನಲ್ಲಿ ಟ್ರೈಲರ್ ಅನಾವರಣಗೊಂಡಿದೆ.
ಈ ಹಿಂದೆ ಪದ್ಮಾವತಿ ಮತ್ತು ಅಂಧಾಧುನ್‌ನಂತಹ ಬಾಲಿವುಡ್ ಸೂಪರ್ ಹಿಟ್ ಸಿನಿಮಾಗಳಲ್ಲಿ ಪ್ರತೀಕ್ ಪ್ರಜೋಶ್ ಕೆಲಸ ಮಾಡಿದ್ದಾರೆ. ಪ್ರತೀಕ್ ಪ್ರಜೋಶ್ ನಿರ್ದೇಶಿಸಿರುವ ಈ ಚಿತ್ರವನ್ನು ದೀಪ್ ಭೀಮಜಿಯಾನಿ ಮತ್ತು ಸುಧಾ ನಂಬಿಯಾರ್ ಅವರ ಮೆಟಾನೋಯಾ ಸ್ಟುಡಿಯೋಸ್ ನಿರ್ಮಿಸಿದೆ.
ಮನ್ಸೋರೆ ನಿರ್ದೇಶನದ 19.20.21 ರಲ್ಲಿನ ಪಾತ್ರಕ್ಕೆ ಹೆಸರುವಾಸಿಯಾದ ಬಿ ವಿ ಶೃಂಗ ಅವರು ನಟಿಸಿದ್ದಾರೆ, ಚಿಲ್ಲಿ ಚಿಕನ್ ಬೆಂಗಳೂರಿನ ಹೋಟೆಲ್‌ನಲ್ಲಿ ಉದ್ಯೋಗಿಯಾಗಿರುವ ಐದು ಯುವಕರ ಕಥೆಯಾಗಿದೆ. ಬೆಂಗಳೂರಿನ ಹೋಟೆಲೊಂದರಲ್ಲಿ ದುಡಿಯುತ್ತಾ ಚೈನೀಸ್ ರೆಸ್ಟೋರೆಂಟ್ ಒಂದನ್ನು ಪ್ರಾರಂಭಿಸಬೇಕೆಂಬ ಕನಸು ಕಾಣುವ ಈ ಹುಡುಗರ ಕನಸಿಗೆ ಏನೆಲ್ಲಾ ಅಡೆ ತಡೆಗಳು ಬರುತ್ತವೆ ಎಂಬ ಒನ್ ಲೈನ್ ಕಥೆ ಇಟ್ಟುಕೊಂಡು ಚಿಲ್ಲಿ ಚಿಕನ್ ಸಿನಿಮಾ ಮಾಡಲಾಗಿದೆ.
ರೆಸ್ಟೋರೆಂಟ್‌ವೊಂದರಲ್ಲಿ ಕುಳಿತಾಗ ಸಂಗೀತ ನಿರ್ದೇಶಕ ಸಿದ್ಧಾಂತ ಸುಂದರ್ ಅವರಿಗೆ ಈ ಕಾನ್ಸೆಪ್ಟ್ ಹೊಳೆದಿದೆ. ಅದನ್ನು ನಿರ್ದೇಶಕ ಪ್ರತೀಕ್ ಪ್ರಜೋಶ್ ಅವರಿಗೆ ಹೇಳಿದ್ದಾರೆ. ಅವರು ಆ ಒಂದು ಲೈನ್ ಕಥೆಯ ಮೇಲೆ ಸಾಕಷ್ಟು ವರ್ಕ್ ಮಾಡಿ ಈಗ ಸಿನಿಮಾ ಮಾಡಿ ಬಿಡುಗಡೆಯ ಹಂತಕ್ಕೆ ತಂದಿದ್ದಾರೆ ಎಂದು ಕಥೆಯ ಪರಿಕಲ್ಪನೆಯ ಬಗ್ಗೆ ವಿವರಿಸಿದ್ದಾರೆ.
ನೈಜ ಘಟನೆಗಳನ್ನು ತೆರೆಗೆ ಅಳವಡಿಸುವಲ್ಲಿ ಅಂತರ್ಗತವಾಗಿರುವ ಸವಾಲುಗಳ ಹೊರತಾಗಿಯೂ, ಚಿಲ್ಲಿ ಚಿಕನ್‌ನ ಹಿಂದಿನ ತಂಡವು ಉತ್ತಮ ನಿರೂಪಣೆಯನ್ನು ರೂಪಿಸುವಲ್ಲಿ ಯಶಸ್ವಿಯಾಗಿದೆ. ರಾಪರ್ ಮಾರ್ಟಿನ್ ಐದು ಹಾಡುಗಳನ್ನು ಬರೆದಿದ್ದಾರೆ. ಹ್ಯೂಮರ್ ಜೊತೆಗೆ ಕೌಟುಂಬಿಕ ಮನರಂಜನೆಯನ್ನು ನೀಡಲು ಯೋಜಿಸಿದೆ. ನಾನಿಲ್ಲಿ ರೆಸ್ಟೋರೆಂಟ್ ಮಾಲಿಕನ ಪಾತ್ರ ಮಾಡಿದ್ದೇನೆ. ಕಥೆ ಕೇಳಿದಾಗ ಇಂದಿನ ಜನರೇಷನ್‌ಗೆ ಹೇಳಬೇಕಾದ ವಿಷಯವಿದೆ ಅನಿಸಿತು. ಇದರಲ್ಲಿ ಹ್ಯೂಮರ್, ಫ್ಯಾಮಿಲಿ ಡ್ರಾಮಾವನ್ನು ನಿರ್ದೇಶಕರು ಚೆನ್ನಾಗಿ ಬಳಸಿದ್ದಾರೆ" ಎಂದು ಬಿ.ವಿ. ಶೃಂಗ ತಿಳಿಸಿದ್ದಾರೆ.
ಈ ಚಿತ್ರವು ಮಣಿಪುರದಂತಹ ಈಶಾನ್ಯ ಪ್ರದೇಶಗಳು ಮತ್ತು ಟಿಬೆಟ್‌ನ ತಂತ್ರಜ್ಞರು ಸೇರಿದಂತೆ ಭಾರತದ ವಿವಿಧ ಭಾಗಗಳ ಪ್ರತಿಭೆಗಳನ್ನು ಒಳಗೊಂಡಿದೆ, ಅವರು ಚಿತ್ರದ ರಚನೆಗೆ ಕೊಡುಗೆ ನೀಡಿದ್ದಾರೆ. ಬಿಜೌ ತಂಗ್ಜಮ್, ಜಿಂಪಾ ಸಾಂಗ್ಪೋ ಭುಟಿಯಾ, ಹರಿಣಿ ಸುಂದರರಾಜನ್, ವಿಕ್ಟರ್ ತೌಡಮ್ ನಿತ್ಯಶ್ರೀ, ಪದ್ಮಜಾ ರಾವ್, ಹಿರಾಕ್ ಸೋನೊವಾಲ್ ಮತ್ತು ಟಾಮ್‌ಥಿನ್ ತೊಕ್ಚೋಮ್ ಚಿಲ್ಲಿ ಚಿಕನ್ ಸಿನಿಮಾದಲ್ಲಿ ನಟಿಸಿದ್ದಾರೆ.
Advertisement