'ಮುಧೋಳ್' ನನ್ನ ವೃತ್ತಿ ಜೀವನದ ಅತ್ಯದ್ಭುತ ಚಿತ್ರ: ವಿಕ್ರಮ್ ಮನೋರಂಜನ್

ಭುಜದ ಗಾಯಕ್ಕೆ ಎರಡನೇ ಸುತ್ತಿನ ಫಿಸಿಯೋಥೆರಪಿಗೆ ಒಳಗಾಗಿರುವ ನಟ ವಿಕ್ರಮ್ ರವಿಚಂದ್ರನ್ ಸದ್ಯ ಚೇತರಿಸಿಕೊಂಡಿದ್ದಾರೆ. ವಿಕ್ರಮ ನಟನೆಯ ಮುಧೋಳ್ ಕ್ಲೈಮ್ಯಾಕ್ಸ್ ಚಿತ್ರೀಕರಣದ ಸಮಯದಲ್ಲಿ ಆರು ದಿನಗಳ ಸಾಹಸ ದೃಶ್ಯದಲ್ಲಿ ಗಾಯಗೊಂಡಿದ್ದರು.
ಮುಧೋಳ್ ಸಿನಿಮಾ ಸ್ಟಿಲ್
ಮುಧೋಳ್ ಸಿನಿಮಾ ಸ್ಟಿಲ್
Updated on

ಭುಜದ ಗಾಯಕ್ಕೆ ಎರಡನೇ ಸುತ್ತಿನ ಫಿಸಿಯೋಥೆರಪಿಗೆ ಒಳಗಾಗಿರುವ ನಟ ವಿಕ್ರಮ್ ರವಿಚಂದ್ರನ್ ಸದ್ಯ ಚೇತರಿಸಿಕೊಂಡಿದ್ದಾರೆ. ವಿಕ್ರಮ ನಟನೆಯ ಮುಧೋಳ್ ಕ್ಲೈಮ್ಯಾಕ್ಸ್ ಚಿತ್ರೀಕರಣದ ಸಮಯದಲ್ಲಿ ಆರು ದಿನಗಳ ಸಾಹಸ ದೃಶ್ಯದಲ್ಲಿ ಗಾಯಗೊಂಡಿದ್ದರು.

ಏಪ್ರಿಲ್ 30 ರಂದು ಅನುಭವಿಸಿದ ನೋವನ್ನು ನೆನಪಿಸಿಕೊಳ್ಳುವ ನಟ ವಿಕ್ರಮ್ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಇನ್ನೂ ಒಂದು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು ಎಂದು ಹೇಳಿದ್ದಾರೆ. ಸಾಹಸ ದೃಶ್ಯಗಳ ಕೊರಿಯೋಗ್ರಫಿ ವೇಳೆ ಸ್ಟಂಟ್ ಮಾಸ್ಟರ್ ರವಿವರ್ಮ ಗಾಯಗೊಂಡಿದ್ದರು.

ಈ ಎಲ್ಲಾ ಹಿನ್ನಡೆಗಳ ಹೊರತಾಗಿಯೂ, ಕಾರ್ತಿಕ್ ರಾಜನ್ ನಿರ್ದೇಶನದ ಮುಧೋಳ ಸಿನಿಮಾ ಬಗ್ಗೆ ವಿಕ್ರಮ್ ಉತ್ಸಾಹ ಭರಿತ ಮಾತನ್ನಾಡಿದ್ದಾರೆ. ಸಿನಿಮಾ ಮುಕ್ತಾಯದ ಹಂತದಲ್ಲಿದೆ. "ಮುಧೋಳ್ ನಿರೀಕ್ಷೆಗಿಂತ ದೊಡ್ಡದಾಗಿದೆ" ಎಂದು ಬಹಿರಂಗಪಡಿಸಿದ್ದಾರೆ. ಈ ಮಹತ್ವಾಕಾಂಕ್ಷೆಯ ಯೋಜನೆಗೆ ನಿರ್ಮಾಪಕರಾಗಿದ್ದಾರೆ, ಅವರ ಹೋಮ್ ಬ್ಯಾನರ್, ಈಶ್ವರಿ ಪ್ರೊಡಕ್ಷನ್ಸ್ ಮರುಪ್ರಾರಂಭಿಸಿದ್ದಾರೆ. “ಮುಧೋಳ ಕೇವಲ ಒಂದು ಚಿತ್ರವಲ್ಲ, ಇದು ನನ್ನ ವೃತ್ತಿಜೀವನವನ್ನು ಮುನ್ನಡೆಸಲಿದೆ. ನನ್ನ ವಯೋಮಾನದ ನಟರು ಈ ಕಥೆಯನ್ನು ಆಯ್ಕೆ ಮಾಡಿಕೊಳ್ಳಲು ಹಿಂಜರಿಯುತ್ತಾರೆ, ಆದರೆ ನಾನು ಈ ಸಿನಿಮಾ ಕಥೆ ಮಾಡಿದ್ದೇನೆ. ಇದು ನಾನು ನಿರ್ಮಿಸುತ್ತಿರುವ ಸಿನಿಮೀಯ ಅರಮನೆಯಾಗಿದೆ-ಅನನ್ಯ, ಅದ್ಭುತವಾಗಲಿದೆ ಎಂದಿದ್ದಾರೆ.

ಮುಧೋಳ್ ಸಿನಿಮಾ ಸ್ಟಿಲ್
ಗ್ಯಾಂಗ್'ಸ್ಟರ್ ಡ್ರಾಮಾ 'ಮುಧೋಳ್'ನಲ್ಲಿ ವಿಕ್ರಮ್‌ ರವಿಚಂದ್ರನ್‌ ನಟನೆ

ಕೇವಲ ಎರಡು ಹಾಡುಗಳು ಮತ್ತು ಐದು ದಿನಗಳ ಟಾಕಿ ಭಾಗಗಳ ಶೂಟಿಂಗ್ ಬಾಕಿಯಿದೆ. ವಿಕ್ರಮ್ ಅವರು ತಮ್ಮ ಪಾತ್ರದ ಯಂಗರ್ ವರ್ಶನ್ ಬಗ್ಗೆ ವಿಕ್ರಮ್ ಹೆಚ್ಚಿನ ಮಾಹಿತಿ ಬಹಿರಂಗ ಪಡಿಸಿಲ್ಲ. ಅದರಲ್ಲಿ ಸ್ವಲ್ಪ ಸಸ್ಪೆನ್ಸ್ ಇದೆ ಎಂದಿದ್ದಾರೆ. ತೆರೆಮರೆಯಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದ್ದು, ಮುಂದಿನ ವಾರದಲ್ಲಿ ಚಿತ್ರದ ಡಬ್ಬಿಂಗ್ ಆರಂಭವಾಗಲಿದೆ. "ನಾವು ಈ ವರ್ಷ ಬಿಡುಗಡೆ ಮಾಡುವ ಪ್ಲಾನ್ ಹೊಂದಿದ್ದೇವೆ" ಎಂದು ವಿಕ್ರಮ್ ವಿಶ್ವಾಸದಿಂದ ಹೇಳುತ್ತಾರೆ.

ತಮ್ಮ ಭವಿಷ್ಯದ ಹಲವು ಯೋಜನೆಗಳ ಬಗ್ ವಿಕ್ರಮ್ ಮಾತನಾಡಿದ್ದಾರೆ. 2024 ರ ದ್ವಿತೀಯಾರ್ಧದಿಂದ, ನೀವು ನನ್ನನ್ನು ವೈವಿಧ್ಯಮಯ ಪಾತ್ರಗಳಲ್ಲಿ ನೋಡುತ್ತೀರಿ ಎಂದು ಅವರು ಭರವಸೆ ನೀಡಿದ್ದಾರೆ. ಉತ್ತಮ ಕಥೆಗಳ ಮೂಲಕ ಪ್ರೇಕ್ಷಕರನ್ನು ನು ರೋಮಾಂಚನಗೊಳಿಸಲು ನಾನು ತಾಜಾ ನಿರ್ದೇಶಕರೊಂದಿಗೆ ಸಹಕರಿಸುತ್ತಿದ್ದೇನೆ ಎಂದಿದ್ದಾರೆ. ಮುಧೋಳ್ ಈ ಹಿಂದೆ ತಮಿಳಿನ ವೆಬ್ ಸೀರೀಸ್‌ನಲ್ಲಿ ಕೆಲಸ ಮಾಡಿದ್ದ ಕಾರ್ತಿಕ್ ರಾಜನ್ ಅವರ ಮೊದಲ ಕನ್ನಡ ಚಿತ್ರವಾಗಿದೆ. ಚಿತ್ರದಲ್ಲಿ ಸಂಜನಾ ಆನಂದ್ ನಾಯಕಿಯಾಗಿ ನಟಿಸಿದ್ದಾರೆ.ಗೆ ವಿಕ್ರಮ್ ಸಿನಿಮಾಗೆ ಯುವರಾಜ್ ಸಂಗೀತ ಮತ್ತು ಪಿಕೆ ಸಂಕಲನವಿದೆ.

ತಂದೆ ರವಿಚಂದ್ರನ್ ನಿರ್ದೇಶಿಸಲಿರುವ ಮಹತ್ವಾಕಾಂಕ್ಷೆಯ ಯೋಜನೆಯಾದ ಪ್ರೇಮಲೋಕ 2 ಬರುತ್ತಿದ್ದು, ಸಹೋದರ ಮನೋರಂಜನ್ ಆ ಸಿನಿಮಾದಲ್ಲಿ ನಟಿಸಲಿದ್ದಾರೆ. "ಇದೀಗ, ನನ್ನ ಗಮನವೆಲ್ಲ ಮುಧೋಳದ ಮೇಲಿದೆ" ಎಂದು ಅವರು ಹೇಳುತ್ತಾರೆ, ಪ್ರೇಮಲೋಕ 2 ಒಂದು ದೊಡ್ಡ ಚಿತ್ರವಾಗಿ ರೂಪುಗೊಳ್ಳುತ್ತಿದೆ ಎಂದು ನನಗೆ ತಿಳಿದಿದೆ, ಆದರೆ ನನ್ನ ತಂದೆ ವಿಷಯಗಳನ್ನು ಹೇಗೆ ಜೋಡಿಸುತ್ತಿದ್ದಾರೆ ಎಂಬುದರ ಬಗ್ಗೆ ನನಗೆ ಕಡಿಮೆ ಜ್ಞಾನವಿದೆ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com