ಚಿತ್ರತಂಡ
ಚಿತ್ರತಂಡ

ಪ್ರವೀಣ್ ತೇಜ್ ಅಭಿನಯದ ಮೊದಲ ಕಮರ್ಷಿಯಲ್ ಚಿತ್ರ 'ಜಿಗರ್' ಜುಲೈ 5 ರಂದು ಬಿಡುಗಡೆ

ಈ ಚಿತ್ರದಲ್ಲಿ ಜೀವ ಎಂಬ ಪಾತ್ರದಲ್ಲಿ ಪ್ರವೀಣ್ ತೇಜ್ ಅಭಿನಯಿಸಿದ್ದು, ಚಿತ್ರದ ಮುಖ್ಯ ಕಥಾಹಂದರವು ಪ್ರೀತಿ, ಆಕ್ಷನ್ ಮತ್ತು ಹಾಸ್ಯ ಒಳಗೊಂಡಿದೆ.
Published on

ಸೂರಿ ಕುಂದರ್ ಅವರ ಚೊಚ್ಚಲ ನಿರ್ದೇಶನದ ಜಿಗರ್ ಬಿಡುಗಡೆಯ ದಿನಾಂಕವನ್ನು ಲಾಕ್ ಮಾಡಿದೆ. ಪ್ರವೀಣ್ ತೇಜ್ ಅಭಿನಯದ ಮೊದಲ ಪೂರ್ಣ ಪ್ರಮಾಣದ ಕಮರ್ಷಿಯಲ್ ಚಿತ್ರ ಜುಲೈ 5 ರಂದು ದೊಡ್ಡ ಪರದೆಯ ಮೇಲೆ ಬರಲು ಸಿದ್ಧವಾಗಿದೆ.

ಚಿತ್ರದ ನಿರ್ಮಾಪಕರು ಟ್ರೇಲರ್ ಜೊತೆಗೆ ಬಿಡುಗಡೆ ದಿನಾಂಕವನ್ನು ಘೋಷಿಸಿದರು. ಈಗಾಗಲೇ ಟ್ರೈಲರ್ ಮೂಲಕ ಕುತೂಹಲ ಕೆರಳಿಸಿರುವ ಚಿತ್ರ, ನಿರ್ದೇಶಕ ಸೂರಿ ಅವರು ಪ್ರವೀಣ್ ತೇಜ್ ಅವರನ್ನು ರೊಮ್ಯಾಂಟಿಕ್ ಹೀರೋನಿಂದ ಆಕ್ಷನ್ ಹೀರೋ ಆಗಿ ಪರಿವರ್ತಿಸಿದ್ದಾರೆ.

ಈ ಚಿತ್ರದಲ್ಲಿ ಜೀವ ಎಂಬ ಪಾತ್ರದಲ್ಲಿ ಪ್ರವೀಣ್ ತೇಜ್ ಅಭಿನಯಿಸಿದ್ದು, ಮೀನು ಟೆಂಡರ್ ಹಡಗಿನಲ್ಲಿ ತೊಡಗಿಸಿಕೊಂಡ ಉತ್ಸಾಯಿ ಯುವಕ ನಂತರ ಭೂಗತ ಜಗತ್ತಿಗೆ ಕಾಲಿಡುತ್ತಾನೆ. ಅಲ್ಲಿ ಮೂರ್ನಾಲ್ಕು ಗುಂಪಿನ ನಡುವೆ ಘರ್ಷಣೆ ಎದುರಿಸುತ್ತಾನೆ. ಚಿತ್ರದ ಮುಖ್ಯ ಕಥಾಹಂದರವು ಪ್ರೀತಿ, ಆಕ್ಷನ್ ಮತ್ತು ಹಾಸ್ಯ ಒಳಗೊಂಡಿದೆ.

ಚಿತ್ರತಂಡ
ಜಿಗರ್ ಕನ್ನಡ ಚಿತ್ರದ ಟ್ರೈಲರ್

ಸುಮಾರು ಹದಿನೈದು ವರ್ಷಗಳಿಂದ ಚಿತ್ರರಂಗದಲ್ಲಿರುವ ನಿರ್ದೇಶಕ ಸೂರಿ ಕುಂದರ್ ಅವರು ಜಿಗರ್ ಚಿತ್ರದ ಮೂಲಕ ಸ್ವತಂತ್ರವಾಗಿ ಮೊದಲ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಜಿಗರ್ ಎಂದರೆ ಧೈರ್ಯವಿರುವ ಮತ್ತು ಯಾವುದಕ್ಕೂ ಹೆದರದ ವ್ಯಕ್ತಿ ಎಂದು ಅವರು ವಿವರಿಸುತ್ತಾರೆ.

ಮಲ್ಪೆ, ಉಡುಪಿ, ಕುಂದಾಪುರ ಮುಂತಾದ ಸ್ಥಳಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿದೆ.

ಯುಕೆ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಪೂಜಾ ವಸಂತಕುಮಾರ್ ನಿರ್ಮಿಸಿರುವ ಜಿಗರ್ ಚಿತ್ರದಲ್ಲಿ ವಿಜಯಶ್ರೀ ಕಲ್ಬುರ್ಗಿ ನಾಯಕಿಯಾಗಿ ನಟಿಸಿದ್ದಾರೆ. ಜೊತೆಗೆ ವಿನಯಾ ಪ್ರಸಾದ್, ಯಶ್ ಶೆಟ್ಟಿ, ಬಾಲ ರಾಜವಾಡಿ ಮತ್ತು ಇತರರು ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಚಿತ್ರಕ್ಕೆ ರಿತ್ವಿಕ್ ಮುರಳೀಧರ್ ಅವರ ಸಂಗೀತ ಸಂಯೋಜನೆ, ಶಿವಸೀನಾ ಅವರ ಛಾಯಾಗ್ರಹಣ ಮತ್ತು ಇನಾನೇಶ್ ಬಿ ಮಾತಾಡ್ ಅವರ ಸಂಕಲನವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com