ವಸಿಷ್ಠ ಸಿಂಹ ನಟನೆಯ Love Li ಸಿನಿಮಾ ದುಬೈ ನಲ್ಲಿ ಬಿಡುಗಡೆ

vasistha simha-Dinesh gundurao
ವಸಿಷ್ಠ ಸಿಂಹ- ದಿನೇಶ್ ಗುಂಡೂರಾವ್online desk

ವಸಿಷ್ಠ ಸಿಂಹ ನಟನೆಯ love li ಸಿನಿಮಾ ದುಬೈ ನಲ್ಲಿ ಬಿಡುಗಡೆಯಾಗಿದ್ದು, ಅತ್ಯುತ್ತಮ ಪ್ರದರ್ಶನ ಕಾಣುತ್ತಿದೆ.

ಜೂ.09 ರಂದು ಬಿಡುಗಡೆಯಾದ ಸಿನಿಮಾದಲ್ಲಿನ ಸಂದೇಶದ ಬಗ್ಗೆ ಪ್ರೇಕ್ಷಕರು ಹಾಗೂ ಕಲಾವಿದರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನೈಜ ಘಟನೆಯನ್ನು ಆಧರಿಸಿದ ಲವ್ ಲಿ, ಏಡ್ಸ್ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶಿಷ್ಟವಾದ ಕಥಾಹಂದರವನ್ನು ಹೊಂದಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಮಹತ್ವದ ಸಾಮಾಜಿಕ ಸಮಸ್ಯೆಗಳ ನೈಜ ಚಿತ್ರಣಕ್ಕಾಗಿ ಚಲನಚಿತ್ರವನ್ನು ಶ್ಲಾಘಿಸಿದರು. ಅವರು ಏಡ್ಸ್ ತೀವ್ರತೆಯನ್ನು ಒತ್ತಿ ಹೇಳಿದರು ಮತ್ತು ರೋಗದ ವಿರುದ್ಧ ಹೋರಾಡಲು ಸರ್ಕಾರದ ನಿರಂತರ ಪ್ರಯತ್ನಗಳನ್ನು ವಿವರಿಸಿದರು. ಚಲನಚಿತ್ರದ ಮೂಲಕ ಸಾರ್ವಜನಿಕರಿಗೆ ಶಿಕ್ಷಣ ನೀಡುವುದರೆಡೆಗೆ ಚಿತ್ರ ತಂಡದ ಪ್ರಯತ್ನವನ್ನು ದಿನೇಶ್ ಗುಂಡೂರಾವ್ ಶ್ಲಾಘಿಸಿದ್ದಾರೆ ಮತ್ತು ಪ್ರಮುಖ ಸಾಮಾಜಿಕ ವಿಷಯಗಳನ್ನು ನಿಭಾಯಿಸುವ ಇಂತಹ ಚಲನಚಿತ್ರಗಳು ಇನ್ನಷ್ಟು ಬರಲಿ ಎಂದು ಆಶಿಸಿದರು.

vasistha simha-Dinesh gundurao
ವಸಿಷ್ಠ ಸಿಂಹ ನಟನೆಯ 'Love... ಲಿ' ಚಿತ್ರದ ಹಾಡಿಗೆ ನಂದು, ಕಾವ್ಯ ಶೆಟ್ಟಿ ಹೆಜ್ಜೆ

ವಿಶೇಷ ಪ್ರದರ್ಶನದಲ್ಲಿ ನಟರಾದ ಶ್ರೀನಗರ ಕಿಟ್ಟಿ, ಚಂದನ್ ಮತ್ತು ಕವಿತಾ ಗೌಡ ಸೇರಿದಂತೆ ಇತರ ಗಣ್ಯರು ಭಾಗವಹಿಸಿದ್ದರು. ಅನುವಾದ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ರವೀಂದ್ರ ಕುಮಾರ್ ಅವರು ನಿರ್ಮಿಸಿರುವ ಲವ್ ಲಿ ಈಗ ಸಾಗರೋತ್ತರ ಮಾರುಕಟ್ಟೆಯನ್ನು ಪ್ರವೇಶಿಸಿದ್ದು, ಈ ವಾರ ದುಬೈನಲ್ಲಿ ಬಿಡುಗಡೆಯಾಗಿದೆ. ಪ್ರೀಮಿಯರ್ ಶೋಗಾಗಿ ಪ್ರಮುಖ ಪಾತ್ರವರ್ಗವು ಪ್ರಸ್ತುತ ದುಬೈನಲ್ಲಿದೆ. ಏತನ್ಮಧ್ಯೆ, ಯುಎಸ್ಎ ಮತ್ತು ದೇಶದ ಇತರ ಭಾಗಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಚರ್ಚೆ ನಡೆಸುತ್ತಿದೆ.

ಲವ್ ಲಿ ಸಿನಿಮಾದಲ್ಲಿ ವಸಿಷ್ಟ ಸಿಂಹ ಅವರ ನಾಯಕಿಯಾಗಿ ಅಭಿನಯಿಸಿರುವ ಸ್ಟೆಫಿ ಪಟೇಲ್ ಗೆ ಇದು ಚೊಚ್ಚಲ ಚಿತ್ರವಾಗಿದೆ. ಚಿತ್ರದಲ್ಲಿ ದತ್ತಣ್ಣ, ಮಾಳವಿಕಾ, ಸಾಧು ಕೋಕಿಲ, ಅಚ್ಯುತ್ ಕುಮಾರ್ ಮತ್ತು ವಂಶಿಕಾ ನಟಿಸಿದ್ದಾರೆ. ಚಿತ್ರಕ್ಕೆ ಅಶ್ವಿನ್ ಕೆನಡಿ ಛಾಯಾಗ್ರಹಣ ಮತ್ತು ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com