ನಟ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ತಂಡಕ್ಕೆ ಹುಮಾ ಖುರೇಶಿ ಸೇರ್ಪಡೆ!

ರಜನಿಕಾಂತ್‌ ನಟನಯ ಕಾಳ ಸಿನಿಮಾದಲ್ಲಿ ದಕ್ಷಿಣ ಭಾರತಕ್ಕೆ ಪಾದಾರ್ಪಣೆ ಮಾಡಿದ ಹಿಂದಿ ಚಿತ್ರರಂಗದ ಪ್ರಭಾವಶಾಲಿ ಪಾತ್ರಗಳಿಗೆ ಹೆಸರುವಾಸಿಯಾಗಿರುವ ಹುಮಾ ಖುರೇಷಿ ಟಾಕ್ಸಿಕ್‌ ತಂಡ ಸೇರಲು ಸಿದ್ಧರಾಗಿದ್ದಾರೆ.
ಹುಮಾ ಖುರೇಶಿ
ಹುಮಾ ಖುರೇಶಿ
Updated on

ನಿರ್ದೇಶಕಿ ಗೀತು ಮೋಹನ್‌ದಾಸ್ ಜೊತೆಗಿನ ಯಶ್ ಅವರ ಮಹತ್ವಾಕಾಂಕ್ಷೆಯ ಯೋಜನೆ 'ಟಾಕ್ಸಿಕ್' ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭಿಸಲು ಸಜ್ಜಾಗಿದೆ. ಆರಂಭದಲ್ಲಿ ಲಂಡನ್‌ನಲ್ಲಿ ಚಿತ್ರೀಕರಣಕ್ಕೆ ಯೋಜಿಸಲಾಗಿತ್ತು, ಆದರೆ ತಂಡವು ಬೆಂಗಳೂರು, ಮುಂಬೈ ಮತ್ತು ಭಾರತದಾದ್ಯಂತ ಚಿತ್ರೀಕರಣಕ್ಕಾಗಿ ವಿವಿಧ ಸ್ಥಳಗಳನ್ನು ಅಂತಿಮಗೊಳಿಸಿದೆ.

ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದ್ದು, ಇದಕ್ಕೆ ವ್ಯಾಪಕ ಸಿದ್ಧತೆ ಮತ್ತು ಸೆಟಪ್‌ಗಳನ್ನು ಮಾಡಿಕೊಳ್ಳಲಾಗುತ್ತಿದೆ. ಬಹುಭಾಷಾ ಚಿತ್ರವಾದ ಟಾಕ್ಸಿಕ್ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚುತ್ತಿದ್ದಂತೆ, ನಿರ್ದೇಶಕರು ತಾರಾ ಬಳಗವನ್ನು ಒಟ್ಟುಗೂಡಿಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಜೊತೆಯಲ್ಲಿ ಕಿಯಾರಾ ಅಡ್ವಾಣಿ ನಟಿಸುವುದು ಖಚಿತವಾಗಿದೆ ಮತ್ತು ಚಿತ್ರದಲ್ಲಿ ನಯನತಾರಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ರಜನಿಕಾಂತ್‌ ನಟನಯ ಕಾಳ ಸಿನಿಮಾದಲ್ಲಿ ದಕ್ಷಿಣ ಭಾರತಕ್ಕೆ ಪಾದಾರ್ಪಣೆ ಮಾಡಿದ ಹಿಂದಿ ಚಿತ್ರರಂಗದ ಪ್ರಭಾವಶಾಲಿ ಪಾತ್ರಗಳಿಗೆ ಹೆಸರುವಾಸಿಯಾಗಿರುವ ಹುಮಾ ಖುರೇಷಿ ಟಾಕ್ಸಿಕ್‌ ತಂಡ ಸೇರಲು ಸಿದ್ಧರಾಗಿದ್ದಾರೆ. 2023 ರ ತರ್ಲಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡ ಹುಮಾ, ಪೂಜಾ ಮೇರಿ ಜಾನ್ ಚಿತ್ರೀಕರಣವನ್ನು ಮುಗಿಸಿದ್ದಾರೆ. ಅವರು ಸದ್ಯ ಜಾಲಿ ಎಲ್‌ಎಲ್‌ಬಿ 3 ಮತ್ತು ಗುಲಾಬಿ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

Huma Qureshi
ಹುಮಾ ಖುರೇಷಿ

ಚಿತ್ರೀಕರಣದ ಸಿದ್ಧತೆಗಳ ನಡುವೆ, ತಾರಾಗಣದೊಂದಿಗೆ ಸಿನಿಮಾ ಮತ್ತಷ್ಟು ಬಝ್ ಸೃಷ್ಟಿಸುತ್ತಿದೆ. ಹುಮಾ ಅವರ ಪಾತ್ರ ಮತ್ತು ಇತರ ಪಾತ್ರವರ್ಗದ ಸದಸ್ಯರ ಬಗ್ಗೆ ಅಧಿಕೃತ ಪ್ರಕಟಣೆ ಶೀಘ್ರದಲ್ಲೇ ಬರಲಿದೆ. ಈ ಹಿಂದೆ, ಕರೀನಾ ಕಪೂರ್ ಖಾನ್ ಅವರು ಯೋಜನೆಯ ಭಾಗವಾಗಲು ನಿರ್ಧರಿಸಿದ್ದರು ಆದರೆ ಡೇಟ್ಸ್ ಘರ್ಷಣೆಯಿಂದಾಗಿ ಹಿಂತೆಗೆದುಕೊಳ್ಳಬೇಕಾಯಿತು.

ಹುಮಾ ಖುರೇಶಿ
ಯಶ್ 'ಟಾಕ್ಸಿಕ್' ಚಿತ್ರದಲ್ಲಿ ಕರೀನಾ ಕಪೂರ್ ಜಾಗಕ್ಕೆ ನಯನತಾರಾ ಆಯ್ಕೆ!

ತಮ್ಮ ಸಿನಿಮಾವನ್ನು ಏಪ್ರಿಲ್ 10, 2025 ರಂದು ಜಾಗತಿಕವಾಗಿ ಬಿಡುಗಡೆ ಮಾಡಲು ನಿರ್ದೇಶರು ದಿನಾಂಕ ನಿಗದಿಪಡಿಸಿದ್ದಾರೆ. ಈ ಸಂಬಂಧ ಬಿಡುಗಡೆ ದಿನಾಂಕದ ಬಗ್ಗೆ ಅಧಿಕೃತ ಪ್ರಕಟಣೆಯನ್ನು ಮಾಡಲಾಗಿದೆ. ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹಯೋಗದೊಂದಿಗೆ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಬಹು ನಿರೀಕ್ಷಿತ ಆಕ್ಷನ್ ಥ್ರಿಲ್ಲರ್‌ನ ತಾವು ನಿರ್ಧರಿಸಿರುನ ದಿನಾಂಕದೊಳಗೆ ಸಿನಿಮಾ ಶೂಟಿಂಗ್ ಮುಗಿಸಲಿದ್ದಾರೆಯೇ ಎಂಬುದು ಕುತೂಹಲಕಾರಿಯಾಗಿದೆ. ಖ್ಯಾತ DOP ರಾಜೀವ್ ರವಿ ಛಾಯಾಗ್ರಹಣವಿದೆ. ಮತ್ತು ಜೆರೆಮಿ ಸ್ಟಾಕ್ ಸಂಗೀತ ಸಂಯೋಜಿಸಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com