ಇತ್ತೀಚಿನ ಸಿನಿಮಾಗಳಲ್ಲಿ ಹಾಸ್ಯ ಅಪರೂಪವಾಗಿದೆ: ಜಗ್ಗೇಶ್

ಜಗ್ಗೇಶ್ ನಟನೆಯ ಬಹುನಿರೀಕ್ಷಿತ ಸಿನಿಮಾ ರಂಗನಾಯಕ ಈ ವಾರ ತೆರೆ ಕಾಣಲಿದೆ. ಈ ಸಿನಿಮಾ ಬಗ್ಗೆ ಸಿನಿಮಾ ಎಕ್ಸ್ ಪ್ರೆಸ್ ನೊಂದಿಗೆ ಜಗ್ಗೇಶ್ ಮಾತನಾಡಿದ್ದು, ತಮ್ಮ ಬಾಲ್ಯದ ದಿನಗಳನ್ನೂ ನೆನಪಿಸಿಕೊಂಡಿದ್ದಾರೆ.
ಜಗ್ಗೇಶ್
ಜಗ್ಗೇಶ್ online desk

ಜಗ್ಗೇಶ್ ನಟನೆಯ ಬಹುನಿರೀಕ್ಷಿತ ಸಿನಿಮಾ ರಂಗನಾಯಕ ಈ ವಾರ ತೆರೆ ಕಾಣಲಿದೆ. ಈ ಸಿನಿಮಾ ಬಗ್ಗೆ ಸಿನಿಮಾ ಎಕ್ಸ್ ಪ್ರೆಸ್ ನೊಂದಿಗೆ ಜಗ್ಗೇಶ್ ಮಾತನಾಡಿದ್ದು, ತಮ್ಮ ಬಾಲ್ಯದ ದಿನಗಳನ್ನೂ ನೆನಪಿಸಿಕೊಂಡಿದ್ದಾರೆ.

ಆಧುನಿಕ ಕಾಲಘಟ್ಟದ ಸಿನಿಮಾಗಳಿಗಿಂತ ವಿಭಿನ್ನವಾಗಿರುವ ರಂಗನಾಯಕ ಸಿನಿಮಾ ಕಾಮಿಡಿ ಹಾಗೂ ಒಂದು ಕಾಲಘಟ್ಟದ ಕಥೆಯನ್ನು ಹೊಂದಿರುವುದಕ್ಕಿಂತಲೂ ಹೆಚ್ಚಾಗಿ ಓರ್ವ ಜನಸಾಮಾನ್ಯನ ಕನಸಿನ ಲೋಕಕ್ಕೆ ಕೊಂಡೊಯ್ಯುವ ಸಿನಿಮಾ ಆಗಿದೆ ಎನ್ನುತ್ತಾರೆ ಜಗ್ಗೇಶ್, ನಡೆ, ನುಡಿಯ ಪರಿಭಾಷೆಯಲ್ಲಿ ಕನಸುಗಳಿಗೆ, ನೀವು ಏನು ವ್ಯಕ್ತಪಡಿಸಲು ಬಯಸುತ್ತೀರಿ ಅದಕ್ಕೆ ಯಾವುದೇ ಮಿತಿಯಿಲ್ಲ, ಈ ಕನಸುಗಳಿಗೆ ನಾನು ನಟಿಸಿರುವ ಪಾತ್ರದ ಮೂಲಕ ನಿರ್ದೇಶಕ ಗುರುಪ್ರಸಾದ್ ಜೀವ ತುಂಬಿದ್ದು ನಮ್ಮನ್ನು 1911 ಕಾಲಘಟ್ಟಕ್ಕೆ ಕೊಂಡೊಯ್ದಿದ್ದಾರೆ ಎಂದು ಜಗ್ಗೇಶ್ ಹೇಳಿದ್ದಾರೆ.

ನನ್ನ ಹಾಗೂ ಗುರುಪ್ರಸಾದ್ ಜೋಡಿಯಲ್ಲಿ ಮಠ, ಎದ್ದೇಳು ಮಂಜುನಾಥ ಸಿನಿಮಾಗಳ ಬಳಿಕ ರಂಗನಾಯಕ ಸಿನಿಮಾ ಹೆಚ್ಚು ನಿರೀಕ್ಷೆ ಉಂಟುಮಾಡಿದೆ ಎಂದು ಜಗ್ಗೇಶ್ ಹೇಳಿದ್ದಾರೆ. ಇದೇ ವೇಳೆ ತಮ್ಮ ಬಾಲ್ಯದ ದಿನಗಳನ್ನೂ ಜಗ್ಗೇಶ್ ನೆನಪಿಸಿಕೊಂಡಿದ್ದು, ಬಾಲ್ಯದಲ್ಲಿ ನಾನು ಕಂಡ ದಿನಗಳಲ್ಲಿ ಜನರು ಮಾನವೀಯತೆ ಮತ್ತು ಶ್ರದ್ಧೆಯಿಂದ ಬದುಕುತ್ತಿದ್ದರು. ಹಿರಿಯರಿಗೆ ಗೌರವ ನೀಡುತ್ತಿದ್ದರು ಹಾಗೂ ದೇಶದ ಬಗ್ಗೆ ಹೆಮ್ಮೆ ಇತ್ತು, ಮೌಲ್ಯಗಳಿಗೆ ಬದ್ಧರಾಗಿರುತ್ತಿದ್ದರು ಈಗಿನ ಕಾಲದಲ್ಲಿ ಅವು ಕಣ್ಮರೆಯಾಗುತ್ತಿವೆ.

ಜಗ್ಗೇಶ್
ರಂಗನಾಯಕ ಚಿತ್ರದ ಟ್ರೈಲರ್

55 ವರ್ಶಗಳ ಹಿಂದೆ ನನಗೆ 7 ವರ್ಷ ವಯಸ್ಸು. ನನ್ನ ತಾಯಿ, ಅಜ್ಜಿ 7 ಗಜದ ಸಾಂಪ್ರದಾಯಿಕ ಸೀರೆ ಉಡುತ್ತಿದ್ದರು. ಹಬ್ಬ ಬಂತೆಂದರೆ ಇಡೀ ಗ್ರಾಮ ಆಚರಣೆಗಳಲ್ಲಿ ತೊಡಗುತ್ತಿತ್ತು, ರಸ್ತೆಯಲ್ಲಿ ಸಾಗುವವರಿಗೆ ನನ್ನ ಅಜ್ಜಿ ಮಜ್ಜಿಗೆ ನೀಡುತ್ತಿದ್ದದ್ದು ಇಂದಿಗೂ ನೆನಪಿದೆ. ಹಲವು ಮಂದಿ ಕಾಲ್ನಡಿಗೆಯಲ್ಲಿ ಸಂಚರಿಸುತ್ತಿದ್ದರು ಕೆಲವರಷ್ಟೇ ಕುದುರೆ ಅಥವಾ ಎತ್ತಿನ ಬಂಡಿಗಳಲ್ಲಿ ಹೋಗುತ್ತಿದ್ದರು. ಬಾಲ್ಯದ ನನ್ನ ಈ ಎಲ್ಲಾ ನೆನಪುಗಳು ಇಂದಿಗೆ ಯಾವುದೋ ದೂರದ ಸ್ವಪ್ನದಂತೆ ಭಾಸವಾಗುತ್ತದೆ. ಹಾಗಾಗಿ ರಂಗನಾಯಕ ಚಿತ್ರದಲ್ಲಿ ತೋರಿಸಲಾಗಿರುವ ಕಾಲಘಟ್ಟವನ್ನು ಹಾಸ್ಯ ಮತ್ತು ಸಂತೋಷದಿಂದ ತುಂಬಿದ ಉತ್ತಮ ಕಾಲಘಟ್ಟ ಎಂದು ಚಿತ್ರಿಸಲಾಗಿದೆ ಎನ್ನುತ್ತಾರೆ ಜಗ್ಗೇಶ್.

ಇದೇ ವೇಳೆ ತಮ್ಮ ರಾಜಕೀಯ-ಸಿನಿಮಾ ಚಟುವಟಿಕೆಗಳ ಬಗ್ಗೆಯೂ ಜಗ್ಗೇಶ್ ಮಾತನಾಡಿದ್ದು, "ಇಂದು, ನಾನು 60 ವರ್ಷ ದಾಟಿದ್ದೇನೆ. ಆದರೆ ಇನ್ನೂ, ನಟನೆ ಮತ್ತು ರಾಜಕೀಯ ನನ್ನನ್ನು ಉತ್ಸಾಹಭರಿತ, ಯೌವನದಲ್ಲಿ ಇರಿಸಿದೆ." ವಿನಮ್ರ ಗ್ರಾಮೀಣ ಹಿನ್ನೆಲೆಯಿಂದ ಇಲ್ಲಿಯವರೆಗೆ ನಟ/ರಾಜಕಾರಣಿಯಾಗಿ, ಪ್ರಧಾನ ಮಂತ್ರಿ ಕಚೇರಿಯೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿರುವ ತಮ್ಮ ಪ್ರಯಾಣವನ್ನು ನೆನಪಿಸಿಕೊಂಡಿರುವ ಜಗ್ಗೇಶ್ ಇಷ್ಟೆಲ್ಲವೂ ಆದದ್ದು ದೇವರ ದಯೆ ಎನ್ನುತ್ತಾರೆ. ತಮ್ಮ ಸಾಧನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ಸಂಬಂಧಿಕರನ್ನು ಇತ್ತೀಚೆಗೆ ಭೇಟಿಯಾದ ಬಗ್ಗೆ ನೆನಪುಗಳನ್ನು ಹಂಚಿಕೊಂಡಿರುವ ಅವರು ಇಂದು ನಾನು ನಟನೆಯನ್ನು ಬಿಡಬೇಕೆ ಎಂದು ಸ್ನೇಹಿತರು, ಆಪ್ತರನ್ನು ಕೇಳಿದರೆ 'ಎಲ್ಲವನ್ನೂ ಬಿಟ್ಟುಬಿಡಿ, ಆದರೆ ನಟನೆಯನ್ನಲ್ಲ ಎಂಬ ಸಲಹೆ ಬರುತ್ತದೆ ಎಂದು ಹೇಳಿದ್ದಾರೆ.

ಜಗ್ಗೇಶ್
'ರಂಗನಾಯಕ' ಚಿತ್ರಕ್ಕೆ ಗುರುಪ್ರಸಾದ್‌ ನಿರ್ದೇಶನ; ಜಗ್ಗೇಶ್‌ ಜೊತೆ ನಟಿಸುತ್ತಿರುವ ರಚಿತಾ ಮಹಾಲಕ್ಷ್ಮಿ ಹೇಳಿದ್ದಿಷ್ಟು...

ನಾನು ನಗು ತರಿಸಲು ಪ್ರಾಮುಖ್ಯತೆ ನೀಡುತ್ತೇನೆ ಎಂದು ನನ್ನ ಸ್ನೇಹಿತರು ಭಾವಿಸುತ್ತಾರೆ. ಈ ಹಾಸ್ಯದ ಪರಿಕಲ್ಪನೆ ಇಂದಿನ ಚಿತ್ರರಂಗದಲ್ಲಿ ಅಪರೂಪ. ಅವರ ಸ್ನೇಹಪರ ಸಲಹೆಯನ್ನು ಪರಿಗಣಿಸಿ, ನಾನು ನಟನೆಯನ್ನು ಮುಂದುವರಿಸಲು ನಿರ್ಧರಿಸಿದ್ದೇನೆ. ಉತ್ತಮ ಅವಕಾಶಗಳು ಸಿಕ್ಕಾಗ ಮಾತ್ರ ನಟಿಸುತ್ತೇನೆ ಎಂದು ಹೇಳಿದ್ದಾರೆ ಜಗ್ಗೇಶ್.

ನಟನೆ ಮತ್ತು ರಾಜಕೀಯದ ನಡುವಿನ ಜಗ್ಗಾಟವನ್ನು ಆನಂದಿಸುವ ಜಗ್ಗೇಶ್, “ನಾನು ಬದ್ಧತೆಯ ರಾಜಕಾರಣಿ ಮತ್ತು ದೇಶಕ್ಕಾಗಿ ಸೇವೆ ಸಲ್ಲಿಸಲು ಹೆಮ್ಮೆಪಡುತ್ತೇನೆ. ಆದರೆ, ನಟನೆ ನನ್ನ ಜೀವನಾಧಾರವಾಗಿದೆ. ರಾಜಕೀಯ ಮತ್ತು ನಟನೆಯ ನಡುವೆ, ಆಳವಾದ ಆಧ್ಯಾತ್ಮಿಕತೆಯಲ್ಲಿ ನಾನು ಸಾಂತ್ವನವನ್ನು ಕಂಡುಕೊಳ್ಳುತ್ತೇನೆ, ಅದು ನನಗೆ ಶುದ್ಧವಾದ ಮನಸ್ಸನ್ನು ನೀಡುತ್ತದೆ, ”ಎನ್ನುತ್ತಾರೆ ಜಗ್ಗೇಶ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com