ನಟ ಅಜಿತ್ ಕುಮಾರ್ ಗೆ ಬ್ರೈನ್ ಟ್ಯೂಮರ್? ಸರ್ಜರಿ ಬಗ್ಗೆ ಮ್ಯಾನೇಜರ್ ಹೇಳಿದ್ದೇನು?
ಚೆನ್ನೈ: ಅಜಿತ್ ಕುಮಾರ್ ಅವರ ಆರೋಗ್ಯದ ಬಗ್ಗೆ ಕೆಲವು ಸುದ್ದಿಗಳು ಹರಿದಾಡ್ತಿದೆ. ಈ ಸುದ್ದಿ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಅಜಿತ್ ಕುಮಾರ್ ಅವರನ್ನು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಜಿತ್ ಅವರು ಬ್ರೇನ್ ಟ್ಯೂಮರ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಬ್ರೇನ್ ಸಮಸ್ಯೆಯಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗುತ್ತಿತ್ತು . ಈ ಬಗ್ಗೆ ನಟನ ಮ್ಯಾನೇಜರ್ ಮೌನ ಮುರಿದಿದ್ದು, ಅಜಿತ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.
ತಮಿಳ ನಟ ಅಜಿತ್ ಕುಮಾರ್ ಬ್ರೈನ್ ಟ್ಯೂಮರ್ ಕಾರಣ ಮಿದುಳು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ ಎಂಬ ವಿಷಯದ ಬಗ್ಗೆ ಅವರ ಮ್ಯಾನೇಜರ್ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಅವರ ವಕ್ತಾರರು, ಅಜಿತ್‌ಗೆ ಸರ್ಜರಿ ಆಗಿರುವುದು ಹಾಗೂ ಮಿದುಳಿನಲ್ಲಿ ಗುಳ್ಳೆಗಳಾಗಿರುವುದು ಸುಳ್ಳು ಎಂದು ಹೇಳಿದ್ದಾರೆ.
ಅಜಿತ್ ಸಾಮಾನ್ಯ ಪರೀಕ್ಷೆಗಾಗಿ ಗುರುವಾರ ಆಸ್ಪತ್ರೆಗೆ ತೆರಳಿದ್ದರು. ಮಿದುಳು ಹಾಗೂ ಕಿವಿಗೆ ಕನೆಕ್ಟ್ ಆಗಿರುವ ಒಂದು ನರದಲ್ಲಿ ಸಣ್ಣ ಊತ ಇತ್ತು. ಅದನ್ನು ಸಾಮಾನ್ಯ ವೈದ್ಯಕೀಯ ಪ್ರಕ್ರಿಯೆ ಮೂಲಕ ಪರಿಹರಿಸಿದ್ದಾರೆ. ಯಾವುದೇ ಸರ್ಜರಿ ಮಾಡಿಲ್ಲ, ಅಜಿತ್ ಆರೋಗ್ಯವಾಗಿದ್ದಾರೆ ಎಂದು ವಕ್ತಾರರು ಸ್ಪಷ್ಟಪಡಿಸಿದ್ದಾರೆ.
ಸದ್ಯ ಅಜಿತ್ ‘ವಿದಾ ಮುಯರಾಚಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ವಿದೇಶದಲ್ಲಿ ನಡೆಯುತ್ತಿದೆ. ಕುಟುಂಬದ ಜೊತೆ ಸಮಯ ಕಳೆಯಲು ಭಾರತಕ್ಕೆ ಬಂದಿದ್ದಾರೆ. ಈ ವೇಳೆ ಸಾಮಾನ್ಯ ಆರೋಗ್ಯ ತಪಾಸಣೆಗೆ ಒಳಗಾಗಿದ್ದಾರೆ ಎಂದು ವಕ್ತಾರರು ಹೇಳಿದ ಮಾತುಗಳನ್ನು ಉಲ್ಲೇಖಿಸಿ ತಮಿಳು ಮಾಧ್ಯಮಗಳು ವರದಿ ಮಾಡಿವೆ.
ಅಜಿತ್ ಮಿದುಳಿನಲ್ಲಿ ಗುಳ್ಳೆಗಳಾಗಿದ್ದು ಅವರಿಗೆ ಸರ್ಜರಿ ಆಗಿದೆ. ಸದ್ಯ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಸುದ್ದಿಗಳು ಶುಕ್ರವಾರ ತಮಿಳು ಮತ್ತು ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದವು.
ಈಗ ಅಜಿತ್ ಕುಮಾರ್ ಅವರನ್ನು ಸಾಮಾನ್ಯ ವಾರ್ಡ್ ಗೆ ಸ್ಥಳಾಂತರಿಸಲಾಗಿದೆ. ಶೀಘ್ರದಲ್ಲೇ ಅವರನ್ನು ಡಿಸ್ಚಾರ್ಜ್ ಮಾಡಲಾಗುವುದು. ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ, ಇದ್ರಿಂದ ಅಜಿತ್ ಅಭಿಮಾನಿಗಳು ಆತಂಕಗೊಳ್ತಾರೆ ಎಂದು ಮ್ಯಾನೇಜರ್ ಸುರೇಶ್ ಸ್ಪಷ್ಟೀಕರಣ ನೀಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ