20 ವರ್ಷಗಳ ನಂತರ ಕಿರುತೆರೆ ಧಾರಾವಾಹಿ ಮೂಲಕ ಕನ್ನಡಕ್ಕೆ ಮರಳಿದ ನಟಿ ಶ್ವೇತಾ!

ಕರ್ಪೂರದ ಗೊಂಬೆ, ಲಕ್ಷ್ಮಿ ಮಹಾಲಕ್ಷ್ಮಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಮನ ಗೆದ್ದಿದ್ದ ನಟಿ ಶ್ವೇತಾ ಬರೋಬ್ಬರಿ 20 ವರ್ಷಗಳ ನಂತರ ಕಿರುತೆರೆ ಮೂಲಕ ಕನ್ನಡ ಚಿತ್ರರಂಗದತ್ತ ಮುಖ ಮಾಡಿದ್ದಾರೆ.
ನಟಿ ಶ್ವೇತಾ
ನಟಿ ಶ್ವೇತಾ
Updated on

ಕರ್ಪೂರದ ಗೊಂಬೆ, ಲಕ್ಷ್ಮಿ ಮಹಾಲಕ್ಷ್ಮಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಮನ ಗೆದ್ದಿದ್ದ ನಟಿ ಶ್ವೇತಾ ಬರೋಬ್ಬರಿ 20 ವರ್ಷಗಳ ನಂತರ ಕನ್ನಡ ಚಿತ್ರರಂಗದತ್ತ ಮುಖ ಮಾಡಿದ್ದಾರೆ.

ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ವಿನೋದಿನಿ ಎಂದೂ ಕರೆಯಲ್ಪಡುವ ನಟಿ ಶ್ವೇತಾ, ಕನ್ನಡದಲ್ಲಿ ಜನಪ್ರಿಯ ಮುಖವಾಗಿದ್ದು, 'ಲಕ್ಷ್ಮಿ ನಿವಾಸ' ಎಂಬ ಕಿರುತೆರೆ ದಾರಾವಾಹಿ ಮೂಲಕ ನಟನೆಗೆ ಮರಳುತ್ತಿದ್ದಾರೆ.

ವಿವಿಧ ಭಾಷೆಗಳಲ್ಲಿ ಸುಮಾರು 75 ಚಲನಚಿತ್ರಗಳಲ್ಲಿ ನಟಿಸಿದ್ದ ಶ್ವೇತಾ 2003 ರಲ್ಲಿ ತೆರೆಕಂಡ 'ಕುಟುಂಬ' ಸಿನಿಮಾದಲ್ಲಿ ಕೊನೆಯ ಬಾರಿಗೆ ಅಭಿನಯಿಸಿದ್ದರು. 20 ವರ್ಷಗಳ ವಿರಾಮದ ನಂತರ ನಟನೆಗೆ ಮರಳಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಹೊಸ ಅಧ್ಯಾಯವನ್ನು ಸಣ್ಣ ಪರದೆಯ ಮೂಲಕ ಮತ್ತೆ ಆರಂಭಿಸುತ್ತಿದ್ದಾರೆ.

ನಟಿ ಶ್ವೇತಾ
30 ವರ್ಷಗಳ ನಂತರ ಕನ್ನಡಕ್ಕೆ ಮರಳಿದ ಹಿರಿಯ ನಟಿ ಮಹಾಲಕ್ಷ್ಮಿ: ಪರಶುರಾಮನ ನಾಯಕಿ ಮೊದಲ ಧಾರಾವಾಹಿ!

ಸದ್ಯ ಶ್ವೇತಾ ಚೆನ್ನೈ ಮತ್ತು ಬೆಂಗಳೂರು ನಡುವೆ ಶೂಟಿಂಗ್ ಗಾಗಿ ಓಡಾಡುತ್ದಿದ್ದಾರೆ. ನಟನೆಗೆ ಮರಳುವ ತನ್ನ ನಿರ್ಧಾರದ ಬಗ್ಗೆ ಮಾತನಾಡಿದ ಅವರು, ನನ್ನ ಕುಟುಂಬದ ಮೇಲೆ ಗಮನ ಕೇಂದ್ರೀಕರಿಸಲು ನಾನು ಸುದೀರ್ಘ ವಿರಾಮವನ್ನು ತೆಗೆದುಕೊಂಡೆ, ಆದರೆ ನಟನೆಯು ಯಾವಾಗಲೂ ನನ್ನ ಮನಸ್ಸಿನಲ್ಲಿ ಉಳಿದಿದೆ. ಕನ್ನಡ ಧಾರಾವಾಹಿಗಾಗಿ ನನ್ನನ್ನು ಸಂಪರ್ಕಿಸಿದಾಗ, ಸಣ್ಣ ಪರದೆಯ ಸಾಮರ್ಥ್ಯ ಮತ್ತು ಅದರ ವ್ಯಾಪಕ ವ್ಯಾಪ್ತಿಯನ್ನು ನಾನು ತಿಳಿದುಕೊಂಡೆ, ಅದಕ್ಕಾಗಿಯೇ ನಾನು ಈ ಅವಕಾಶವನ್ನು ಸ್ವೀಕರಿಸಲು ನಿರ್ಧರಿಸಿದೆ ಎಂದಿದ್ದಾರೆ.

'ಕರ್ಪೂರದ ಗೊಂಬೆ' ಮತ್ತು 'ಲಕ್ಷ್ಮಿ ಮಹಾಲಕ್ಷ್ಮಿ'ಯಂತಹ ನನ್ನ ಪಾತ್ರಗಳೊಂದಿಗೆ ಜನರು ಈಗಲೂ ನನ್ನನ್ನು ಗುರುತಿಸುತ್ತಾರೆ. ಜನರ ಮನ್ನಣೆ ಮತ್ತು ಮೆಚ್ಚುಗೆಯನ್ನು ಗಳಿಸಿದ್ದಕ್ಕೆ ನಾನು ಆಭಾರಿಯಾಗಿದ್ದೇನೆ, ವಿಶೇಷವಾಗಿ ವಿಷ್ಣುವರ್ಧನ್ ಅವರೊಂದಿಗೆ ನಾನು ಮಾಡಿದ ಪಾತ್ರ ಬಹಳ ಮೆಚ್ಚುಗೆ ಗಳಿಸಿದೆ ಎಂದು ಹೇಳಿದ್ದಾರೆ.

ಶ್ವೇತಾ ಪ್ರಸ್ತುತ ಸಣ್ಣ ಪರದೆಯಲ್ಲಿ ಧಾರಾವಾಹಿಗಾಗಿ ನಟಿಸುತ್ತಿದ್ದಾರೆ ಆದರೆ, ಅವರ ಹೃದಯವು ಬೆಳ್ಳಿತೆರೆಗೆ ಮರಳಲು ಸಿದ್ಧವಾಗಿದೆ. ಸಿನಿಮಾಗಳಲ್ಲಿ ಪ್ರೇಕ್ಷಕರೊಂದಿಗೆ ಮರುಸಂಪರ್ಕಿಸಲು ಅನುವು ಮಾಡಿಕೊಡುವ ಬಲವಾದ ಸ್ಕ್ರಿಪ್ಟ್‌ಗಳಿಗಾಗಿ ನಾನು ಹುಡುಕುತ್ತಿದ್ದೇನೆ ಎಂದು ಶ್ವೇತಾ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com