ಕೇನ್ಸ್‌ನಲ್ಲಿ ಪಿಯರೆ ಆಂಜಿನಿಯಕ್ಸ್ ಟ್ರಿಬ್ಯೂಟ್ ಪ್ರಶಸ್ತಿ ಪಡೆದ ಮೊದಲ ಏಷ್ಯನ್ ಸಂತೋಷ್ ಶಿವನ್!
2024ರ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರತಿಷ್ಠಿತ ಪಿಯರೆ ಆಂಜಿನಿಯಕ್ಸ್ ಟ್ರಿಬ್ಯೂಟ್ ಪ್ರಶಸ್ತಿಯನ್ನು ಪಡೆದ ಮೊದಲ ಏಷ್ಯನ್ ಎಂಬ ಹೆಗ್ಗಳಿಕೆಗೆ ಖ್ಯಾತ ಛಾಯಾಗ್ರಾಹಕ ಸಂತೋಷ್ ಶಿವನ್ ಪಾತ್ರರಾಗಿದ್ದಾರೆ.
ಸಂತೋಷ್ ಶಿವನ್ ಅವರ 'ವೃತ್ತಿ ಮತ್ತು ಅಸಾಧಾರಣ ಗುಣಮಟ್ಟದ ಕೆಲಸಕ್ಕಾಗಿ' ಈ ಗೌರವವನ್ನು ನೀಡಲಾಗಿದೆ. ಸಂತೋಷ್ ಶಿವನ್ ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಪ್ರಶಸ್ತಿ ಸ್ವೀಕರಿಸಿದ ಬಗ್ಗೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಬಾಲಿವುಡ್ ನಟಿ ಪ್ರೀತಿ ಜಿಂಟಾ ಈ ಪ್ರಶಸ್ತಿ ಹಸ್ತಾಂತರಿಸಿದರು.
ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅವರು ಕ್ಯಾಮರಾಮನ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ. ಕೇನ್ಸ್ ಚಲನಚಿತ್ರೋತ್ಸವ 2024ರಲ್ಲಿ ಐತಿಹಾಸಿಕ ಕ್ಷಣವನ್ನು ವೀಕ್ಷಿಸಲು ಉತ್ಸುಕನಾಗಿದ್ದೇನೆ. ಪಿಯರೆ ಆಂಜಿನಿಯಕ್ಸ್ ಪ್ರಶಸ್ತಿಗೆ ಆಯ್ಕೆಯಾದ ನಮ್ಮ ಸಂತೋಷ್ ಶಿವನ್ ಅವರಿಗೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ.
ಈ ಹಿಂದೆ, ಪ್ರಶಸ್ತಿಯನ್ನು ಫಿಲಿಪ್ ರೌಸೆಲಾಟ್, ವಿಲ್ಮೊಸ್ ಝಿಗ್ಮಂಡ್, ರೋಜರ್ ಡೀಕಿನ್ಸ್, ಪೀಟರ್ ಸುಸ್ಚಿಟ್ಜ್ಕಿ, ಕ್ರಿಸ್ಟೋಫರ್ ಡಾಯ್ಲ್, ಎಡ್ವರ್ಡ್ ಲಾಚ್ಮನ್, ಬ್ರೂನೋ ಡೆಲ್ಬೊನೆಲ್, ಆಗ್ನೆಸ್ ಗೊಡ್ಡಾರ್ಡ್, ಡೇರಿಯಸ್ ಖೋಂಡ್ಜಿ ಮತ್ತು ಬ್ಯಾರಿ ಅಕ್ರಾಯ್ಡ್ ಮುಂತಾದ ದಿಗ್ಗಜರಿಗೆ ನೀಡಲಾಗಿತ್ತು.
ಅಂತಾರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕ ಸಂತೋಷ್ ಶಿವನ್ ಅವರು ದಿಲ್ ಸೆ, ರೋಜಾ, ಇರುವರ್ ಮತ್ತು ಕಾಲಾಪಾನಿ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. 2013ರಲ್ಲಿ ಕೇನ್ಸ್ ಸಿನಿಮಾಟೋಗ್ರಾಫರ್‌ಗಳಿಗಾಗಿ ಪಿಯರೆ ಆಂಜಿನಿಯಕ್ಸ್ ಟ್ರಿಬ್ಯೂಟ್ ಅನ್ನು ಸ್ಥಾಪಿಸಲಾಯಿತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ