ಕೋರ್ಟ್ ಮೆಟ್ಟಿಲೇರಿದ ರಾಧಿಕಾ ಪಂಡಿತ್; ಅಬ್ಬರಿಸಿ ವಾದಿಸಿದ ಯಶ್: ಯಾಕೆ? ವಿಡಿಯೊ ನೋಡಿ...

ಸದ್ಯ ರಾಧಿಕಾ ಪಂಡಿತ್‌ ಬಣ್ಣ ಹಚ್ಚಿದ್ದು ಜಾಹೀರಾತಿಗಾದರೂ ಅಭಿಮಾನಿಗಳು ಖುಷಿಯಾಗಿದ್ದಾರೆ. ಈ ರೂಪದಲ್ಲಿಯಾದರೂ ತಮ್ಮ ಮೆಚ್ಚಿನ ನಟಿಯನ್ನು ನೋಡಿದೆವಲ್ಲಾ ಎಂದು ಸಂತೋಷಪಡುತ್ತಿದ್ದಾರೆ.
ಕೋರ್ಟ್ ಮೆಟ್ಟಿಲೇರಿದ ರಾಧಿಕಾ ಪಂಡಿತ್; ಅಬ್ಬರಿಸಿ ವಾದಿಸಿದ ಯಶ್: ಯಾಕೆ? ವಿಡಿಯೊ ನೋಡಿ...
Updated on

ಬೆಂಗಳೂರು: ಕನ್ನಡದ ಸ್ಟಾರ್ ಜೋಡಿಯಾದ ಯಶ್ -ರಾಧಿಕಾ ಕೋರ್ಟ್ ಮೆಟ್ಟಿಲೇರಿದ್ದಾರೆ. ಅರೆ...ಇಷ್ಟು ದಿನ ಚೆನ್ನಾಗಿದ್ದರು, ಆದರ್ಶ ದಂಪತಿಯಂತೆ ಮೆರೆಯುತ್ತಿದ್ದರಲ್ಲ ಎಂದು ಸಂಶಯ ಬರಬಹುದು.

ಇವರು ಕೋರ್ಟ್ ಕಟೆಕಟೆಗೆ ಏರಿದ್ದು ಫ್ರೀಡಂ ಸನ್ ಫ್ಲವರ್ ಆಯಿಲ್ ನ ಜಾಹೀರಾತಿನಲ್ಲಿ. ಈ ಹಿಂದೆ ದಂಪತಿ ಫ್ರೀಡಂ ಆಯಿಲ್ ಜಾಹೀರಾತಿನಲ್ಲಿ ಒಟ್ಟಿಗೆ ನಟಿಸಿದ್ದರು. ಇದೀಗ ಮತ್ತೊಂದು ಕೋರ್ಟ್ ದೃಶ್ಯವನ್ನು ಚಿತ್ರೀಕರಿಸಲಾಗಿದ್ದು, ಸ್ಟಾರ್ ಜೋಡಿ ಜೊತೆಯಾಗಿ ನಟಿಸಿದ್ದಾರೆ.

ಕನ್ನಡದ ಪ್ರತಿಭಾನ್ವಿತ ನಟಿ ರಾಧಿಕಾ ಪಂಡಿತ್‌ ಅವರನ್ನು ತೆರೆಮೇಲೆ ನೋಡದೆ ಸಾಕಷ್ಟು ಸಮಯವಾಗಿದೆ. ಯಶ್‌ ಜತೆ ಸಪ್ತಪದಿ ತುಳಿದು ಮದುವೆಯಾದ ಬಳಿಕ ನಟನೆಯಿಂದ ದೂರವುಳಿದಿದ್ದಾರೆ. ಯಶ್‌ ಯಶಸ್ಸು ಮುಗಿಲೆತ್ತರಕ್ಕೆ ವ್ಯಾಪಿಸುತ್ತಿದ್ದರೆ, ರಾಧಿಕಾ ಪಂಡಿತ್‌ ತನ್ನ ಮಕ್ಕಳು, ಪತಿ ಜತೆ ಹ್ಯಾಪಿಯಾಗಿ ಇದ್ದಾರೆ.

ಜಾಹೀರಾತಿನಲ್ಲಿ ನಟನೆ

ಯಶ್ , ರಾಧಿಕಾ ಜಾಹೀರಾತಿನಲ್ಲಿ ಒಟ್ಟಿಗೆ ನಟಿಸುವ ಮೂಲಕ ಅಭಿಮಾನಿಗಳ ನಿರಾಸೆಗೆ ಕೊಂಚ ಸಮಾಧಾನ ನೀಡುತ್ತಿದ್ದಾರೆ. ಈ ಬಾರಿ ಕೋರ್ಟ್‌ ದೃಶ್ಯ. ರಾಧಿಕಾ ಪಂಡಿತ್ ಕಳಪೆ ಪ್ರಾಡಕ್ಟ್‌ವೊಂದರ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಇವರ ಪರವಾಗಿ ವಾದ ರಾಕಿಂಗ್‌ ಸ್ಟಾರ್‌ ಯಶ್‌ ವಕೀಲ ವೇಷ ತೊಟ್ಟು ಬಂದಿದ್ದಾರೆ. ಕೋರ್ಟ್‌ನಲ್ಲಿ "ಆಬ್ಜೆಕ್ಷನ್‌ ಯುವರ್‌ ಆನರ್‌" ಎಂದು ಯಶ್‌ ಅಬ್ಬರಿಸುತ್ತಾರೆ.

"ಇವರು ಸೂರ್ಯಕಾಂತಿಯ ಉತ್ಪನ್ನ ಕೇಳಿದ್ರು, ಈ ಕಂಪನಿಯವರು ಅದನ್ನೇ ಕೊಟ್ಟಿದ್ದಾರೆ" ಎಂದು ನ್ಯಾಯಾಧೀಶರು ಹೇಳುತ್ತಾರೆ. "ಮೈ ಲಾರ್ಡ್‌ ನನ್ನ ಕ್ಲಯೆಂಟ್‌ ಕೇಳಿದ್ದು ಪ್ಯೂರ್‌ ಸೂರ್ಯಕಾಂತಿ ಪ್ರಾಡಕ್ಟ್‌. ಆದರೆ, ಇವರು ನೀಡಿದ್ದು" ಎಂದು ಯಶ್‌ ಹೇಳಿದಾಗ ರಾಧಿಕಾ ಪಂಡಿತ್‌ ಡಬ್ಬಾ ಡಕೋಟಾ ಪ್ರಾಡಕ್ಟ್‌" ಎನ್ನುತ್ತಾರೆ. "ನಮ್ಮ ಪ್ರಾಡಕ್ಟ್‌ ಕವರ್‌ನಲ್ಲೂ ಸೂರ್ಯಕಾಂತಿ ಚಿತ್ರ ಇದೆ, ಅದಕ್ಕೂ ಇದಕ್ಕೂ ಏನಿದೆ ವ್ಯತ್ಯಾಸ" ಎಂದು ಮತ್ತೊಬ್ಬರು ವಾದಿಸುತ್ತಾರೆ. "ವ್ಯತ್ಯಾಸ ಇದೆ ಯುವರ್‌ ಆನರ್‌, ಸತ್ಯಕ್ಕೂ ಸುಳ್ಳಿಗೂ ಇರುವ ವ್ಯತ್ಯಾಸ. ಕಳ್ಳನಿಗೂ ಪೊಲೀಸ್‌ಗೂ ಇರುವ ವ್ಯತ್ಯಾಸ, ತಗಡಿಗೂ ಚಿನ್ನಕ್ಕೂ ಇರುವ ವ್ಯತ್ಯಾಸ" ಎಂದು ಯಶ್‌ ಹೇಳುತ್ತಾರೆ. ರಾಧಿಕಾ ಪಂಡಿತ್‌ ಕೂಡ "ಡೂಪ್ಲಿಕೇಟ್‌ಗೂ.. ಹೀರೋಗೂ ಇರುವ ವ್ಯತ್ಯಾಸ" ಎಂದು ಹೇಳುತ್ತಾರೆ.

ಸದ್ಯ ರಾಧಿಕಾ ಪಂಡಿತ್‌ ಬಣ್ಣ ಹಚ್ಚಿದ್ದು ಜಾಹೀರಾತಿಗಾದರೂ ಅಭಿಮಾನಿಗಳು ಖುಷಿಯಾಗಿದ್ದಾರೆ. ಈ ರೂಪದಲ್ಲಿಯಾದರೂ ತಮ್ಮ ಮೆಚ್ಚಿನ ನಟಿಯನ್ನು ನೋಡಿದೆವಲ್ಲಾ ಎಂದು ಸಂತೋಷಪಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com