ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾಕ್ಕೆ ಹಾಲಿವುಡ್‌ನ ಖ್ಯಾತ ಆ್ಯಕ್ಷನ್ ಡೈರೆಕ್ಟರ್ ಜೆಜೆ ಪೆರಿ ಎಂಟ್ರಿ ಕೊಟ್ಟಿದ್ದಾರೆ. ಹಾಲಿವುಡ್‌ನ ಬ್ಲಾಕ್ ಬಸ್ಟರ್ ಸಿನಿಮಾಗಳಾದ 'ಐರನ್ ಮ್ಯಾನ್', 'ಎಕ್ಸ್ ಮ್ಯಾನ್', 'ಜಾನ್ ವಿಕ್ 2' ಸೇರಿದಂತೆ ಹಲವಾರು ಕ್ಲಾಸಿಕ್ ಆ್ಯಕ್ಷನ್ ಸಿನಿಮಾಗಳಿಗೆ ಸಾಹಸ ನಿರ್ದೇಶನ ಮಾಡಿರುವ ಈ ಜನಪ್ರಿಯ ಆ್ಯಕ್ಷನ್ ಡೈರೆಕ್ಟರ್ ಇದೀಗ 'ಟಾಕ್ಸಿಕ್' ಚಿತ್ರೀಕರಣಕ್ಕಾಗಿ ಮುಂಬೈಗೆ ಬಂದಿಳಿದಿದ್ದಾರೆ.
ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಗೀತು ಮೋಹನ್‌ದಾಸ್ ನಿರ್ದೇಶಿಸುತ್ತಿರುವ ಚಿತ್ರದ ಮಹತ್ವದ ಭಾಗವನ್ನು ಇಲ್ಲಿ ಚಿತ್ರೀಕರಿಸಲಾಗುತ್ತದೆ. 45 ದಿನಗಳ ಅವಧಿಯ ಈ ವೇಳಾಪಟ್ಟಿಯಲ್ಲಿ ಹಾಡಿನ ಚಿತ್ರೀಕರಣವು ಸೇರಿದೆ. ಟಾಕ್ಸಿಕ್ ತಂಡದಿಂದ ಇತ್ತೀಚಿನ ಅಪ್‌ಡೇಟ್‌ನಲ್ಲಿ, ಹೈ-ಆಕ್ಟೇನ್ ಆಕ್ಷನ್ ಸೀಕ್ವೆನ್ಸ್‌ಗಳನ್ನು ನಿರ್ದೇಶಿಸಲು ಚಲನಚಿತ್ರವನ್ನು ಹಾಲಿವುಡ್ ಸಾಹಸ ನಿರ್ದೇಶಕ ಜೆಜೆ ಪೆರ್ರಿ ಕೊರಿಯೋಗ್ರಫಿ ಮಾಡಿದ್ದಾರೆ.
ಪೆರ್ರಿ ಈಗಾಗಲೇ ಮುಂಬೈಗೆ ಆಗಮಿಸಿದ್ದು, ಈಗಾಗಲೇ ಚಿತ್ರದ ಕೆಲಸ ಆರಂಭಿಸಿದ್ದಾರೆ. ಚಿತ್ರದಲ್ಲಿ ತನ್ನ ಭಾಗವಹಿಸುವಿಕೆ ಬಗ್ಗೆ ಮಾತನಾಡುತ್ತಾ, ಪೆರ್ರಿ, “ನಾನು ಇಲ್ಲಿ ಭಾರತದಲ್ಲಿರಲು ಮತ್ತು ಯಶ್ ಜೊತೆ ಟಾಕ್ಸಿಕ್‌ನಲ್ಲಿ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಮತ್ತು ಅದ್ಭುತವಾಗಿರುತ್ತದೆ ಎಂದು ಹೇಳಿದ್ದಾರೆ. ಯಶ್ ಒಬ್ಬ ಅದ್ಭುತ ನಟ ಮತ್ತು ಅಭೂತ ಪೂರ್ವ ಆಕ್ಷನ್ ಪರ್ಫಾರ್ಮರ್, ನಾನು ಆತನನ್ನು ಸಹೋದರ ಎಂದು ಪರಿಗಣಿಸುತ್ತೇನೆ ಮತ್ತು ಅವನನ್ನು ನನ್ನ ಸ್ನೇಹಿತ ಎಂದು ಕರೆಯಲು ಮತ್ತು ಅವನೊಂದಿಗೆ ಕೆಲಸ ಮಾಡಲು ನಾನು ಹೆಮ್ಮೆಪಡುತ್ತೇನೆ. ನಾನು ಗೀತು ಜೊತೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ. ನಾವು ವಿಶೇಷವಾದದ್ದನ್ನು ತೆರೆಯ ಮೇಲೆ ತರಲಿದ್ದೇವೆ ಎಂದು ನನಗೆ ಖಾತ್ರಿಯಿದೆ ಎಂದಿದ್ದಾರೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಚಿತ್ರೀಕರಣದಲ್ಲಿ ನಯನತಾರಾ ಮತ್ತು ಹುಮಾ ಖುರೇಷಿ ಸೇರಿದಂತೆ ಹಲವರು ಭಾಗವಹಿಸಿದ್ದರು. ಬ್ರಿಟಿಷ್ ನಟರಾದ ಡಾರೆಲ್ ಡಿ'ಸಿಲ್ವಾ ಮತ್ತು ಬೆನೆಡಿಕ್ಟ್ ಗ್ಯಾರೆಟ್ ಕೂಡ ಟೀಮ್ ನಲ್ಲಿದ್ದಾರೆ. ನಿರ್ದೇಶಕರು ಪೂರ್ಣ ಪಾತ್ರವರ್ಗವನ್ನು ಅಧಿಕೃತವಾಗಿ ಘೋಷಿಸಬೇಕಾಗಿದೆ. ಬಹು ಭಾಷೆಗಳಲ್ಲಿ ತಯಾರಾಗಿರುವ ಟಾಕ್ಸಿಕ್ ಚಿತ್ರಕ್ಕೆ ರಾಜೀವ್ ರವಿ ಛಾಯಾಗ್ರಹಣವನ್ನು ನಿಭಾಯಿಸುತ್ತಿದ್ದಾರೆ.
Advertisement