ಹೈದರಾಬಾದ್: ಚೆನ್ನೈ ಪೊಲೀಸರ ವಿಶೇಷ ತಂಡ ಶನಿವಾರ ಸಂಜೆ ಹೈದರಾಬಾದ್‌ನ ಮನೆಯೊಂದರಿಂದ ನಟಿ ಕಸ್ತೂರಿ ಶಂಕರ್ ಅವರನ್ನು ಬಂಧಿಸಿದೆ.
ಹೈದರಾಬಾದ್‌ನಲ್ಲಿರುವ ಸ್ನೇಹಿತನ ಮನೆಯಲ್ಲಿ ಆಶ್ರಯ ಪಡೆದು ಬಂಧನದಿಂದ ತಪ್ಪಿಸಿಕೊಳ್ಳಲು ಆಕೆ ಯತ್ನಿಸುತ್ತಿದ್ದರು, ಈಗ ಬಂಧನಕ್ಕೊಳಗಾಗಿರುವ ಆಕೆಯನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲು ಚೆನ್ನೈಗೆ ಕರೆತರಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಸಮುದಾಯದ ವಿರುದ್ಧದ ಹಿಂಸಾಚಾರದ ವಿರುದ್ಧ ನವೆಂಬರ್ 3 ರಂದು ನಗರದಲ್ಲಿ ಬ್ರಾಹ್ಮಣರು ನಡೆಸಿದ ಪ್ರತಿಭಟನೆಯಲ್ಲಿ ಕಸ್ತೂರಿ ಭಾಗಿಯಾಗಿದ್ದರು.
ಈ ಪ್ರತಿಭಟನೆ ವೇಳೆ ತೆಲುಗು ಸಮುದಾಯದ ಕೆಲವು ವರ್ಗಗಳನ್ನು ನೋಯಿಸುವ ಹೇಳಿಕೆಗಳನ್ನು ನೀಡಿದ್ದರು. ಕಸ್ತೂರಿ ತಮ್ಮ ಭಾಷಣದಲ್ಲಿ ತೆಲುಗು ಮಹಿಳೆಯರ ಒಂದು ಗುಂಪು ತಮಿಳುನಾಡಿಗೆ ರಾಜರಿಗೆ ವೇಶ್ಯೆಯರು ಮತ್ತು ಉಪಪತ್ನಿಯರಾಗಿ ಸೇವೆ ಸಲ್ಲಿಸಲು ಆಗಮಿಸಿದ್ದರು, ನಂತರ ಅವರು ತಮಿಳು ಗುರುತನ್ನು ತೆಗೆದುಕೊಂಡು ಬ್ರಾಹ್ಮಣರನ್ನು ದೂಷಿಸುವ ಕಡೆಗೆ ತಿರುಗಿದರು ಎಂದು ಹೇಳಿದ್ದರು.
ತನ್ನ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಡಿಎಂಕೆ ಬೆಂಬಲಿಗರು ತಮ್ಮ ಹೇಳಿಕೆಯನ್ನು ತಿರುಚಿದ್ದಾರೆ ಮತ್ತು ಒಟ್ಟಾರೆ ತೆಲುಗು ಸಮುದಾಯವನ್ನು ಕೀಳಾಗಿ ಕಾಣುವ ಉದ್ದೇಶವನ್ನು ತಾವು ಹೊಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.
ಆಕೆಯ ಹೇಳಿಕೆಗಳು ಮತ್ತು ನಂತರದ ಸಾಮಾಜಿಕ ಮಾಧ್ಯಮ ಮತ್ತು ಇತರ ವೇದಿಕೆಗಳಲ್ಲಿ ಆಕ್ರೋಶದ ನಂತರ, ನಾಯ್ಡು ಮಹಾಜನ ಸಂಗಮ್ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯ ಸೇರಿದಂತೆ ಹಲವು ಮಂದಿ ಪೊಲೀಸ್ ಠಾಣೆಗಳಲ್ಲಿ ಸರಣಿ ದೂರುಗಳನ್ನು ದಾಖಲಿಸಿದ್ದರು. ಕಸ್ತೂರಿ ಅವರ ಮೊಬೈಲ್ ಫೋನ್‌ನಲ್ಲಿ ಸಂಪರ್ಕಕ್ಕೆ ಸಿಗದ ಕಾರಣ ಮತ್ತು ಚೆನ್ನೈನಲ್ಲಿರುವ ಅವರ ನಿವಾಸದಿಂದ ನಾಪತ್ತೆಯಾಗಿರುವ ಕಾರಣ, ವಿಶೇಷ ತಂಡವು ಆಂಧ್ರಪ್ರದೇಶದಲ್ಲಿ ಆಕೆಯನ್ನು ಪತ್ತೆಹಚ್ಚಲು ಕಾರ್ಯಾಚರಣೆ ನಡೆಸಿತ್ತು.
ಕಸ್ತೂರಿಯವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ಈ ವಾರದ ಆರಂಭದಲ್ಲಿ ವಜಾಗೊಳಿಸಿತ್ತು. ಮುಕ್ತವಾಗಿ ಮಾತನಾಡುವ ಸಾಮರ್ಥ್ಯವನ್ನು ದ್ವೇಷವನ್ನು ಹರಡಲು ಅಥವಾ ಕೋಮು ಸೌಹಾರ್ದತೆಯನ್ನು ಉಂಟುಮಾಡಲು ದುರುಪಯೋಗಪಡಿಸಿಕೊಳ್ಳಬಾರದು ಎಂದು ನ್ಯಾಯಮೂರ್ತಿ ಎನ್.ಆನಂದ್ ವೆಂಕಟೇಶ್ ಹೇಳಿದ್ದರು.
Advertisement