'ಪ್ರೀತಿ ಹರಡಿ ಸಾರ್..': ಧನುಷ್ ಲೀಗಲ್ ನೋಟಿಸ್ ವಿರುದ್ಧ Nayanthara ಬಳಿಕ ಇದೀಗ ವಿಘ್ನೇಶ್ ಶಿವನ್ ಆಕ್ರೋಶ!

ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ವಿಘ್ನೇಶ್ ಶಿವನ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿವಾದಾತ್ಮಕ ಮೂರು ಸೆಕೆಂಡುಗಳ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು ಅದನ್ನು ತೆಗೆದುಹಾಕಲು ಧನುಷ್ ಒತ್ತಾಯಿಸಿದ್ದಾರೆ.
Vignesh Shivan-Nayanthara-Dhanush
ವಿಘ್ನೇಶ್ ಶಿವನ್-ನಯನತಾರಾ-ಧನುಷ್TNIE
Updated on

ತಮಿಳು ಚಿತ್ರರಂಗದ ಲೇಡಿ ಸೂಪರಸ್ಟಾರ್ ನಯನತಾರಾ ಮತ್ತು ಅವರ ಪತಿ, ನಿರ್ದೇಶಕ ವಿಘ್ನೇಶ್ ಶಿವನ್ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ನಯನತಾರಾ ಅವರ ವೈಯಕ್ತಿಕ ಮತ್ತು ವೃತ್ತಿಪರ ಜೀವನವನ್ನು ಆಧರಿಸಿದ 'ನಯನತಾರಾ: ಬಿಯಾಂಡ್ ದಿ ಫೇರಿಟೇಲ್' ಸಾಕ್ಷ್ಯಚಿತ್ರದಲ್ಲಿ ನಾನುಮ್ ರೌಡಿ ಧಾನ್ ಚಿತ್ರದ ಹಾಡು ಬಳಕೆಗಾಗಿ ನಟ, ನಿರ್ದೇಶಕ ಧನುಷ್ ಸಾಕ್ಷ್ಯಚಿತ್ರದ ಮೇಲೆ 10 ಕೋಟಿ ಕಾಪಿರೈಟ್ ಕೇಸ್ ಹಾಕಿದ್ದು ಇದಕ್ಕೆ ನಟಿ ಖಾರವಾಗಿ ಪ್ರತಿಕ್ರಿಯಿಸಿದ್ದರು. ಇದೀಗ ವಿಘ್ನೇಶ್ ಶಿವನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮ ಸಾಕ್ಷ್ಯಚಿತ್ರದಲ್ಲಿ ನಾನುಮ್ ರೌಡಿ ಧಾನ್ ಚಿತ್ರದ ಹಾಡುಗಳ ಬಳಕೆಗಾಗಿ NOC (ನಿರಾಕ್ಷೇಪಣಾ ಪ್ರಮಾಣಪತ್ರ) ನೀಡಲು ನಿರಾಕರಿಸಿದ್ದಾರೆ ಎಂದು ಆರೋಪಿಸಿದ್ದರು. ಎರಡು ವರ್ಷಗಳ ಕಾಲ ಹಾಡುಗಳು ಮತ್ತು ವೀಡಿಯೊಗಳನ್ನು ಬಳಸಲು ತಾನು ಧನುಷ್‌ಗೆ ಅನುಮತಿ ನೀಡುವಂತೆ ಕೇಳಿದ್ದೆ ಎಂದು ನಯನತಾರಾ ತನ್ನ ಪತ್ರದಲ್ಲಿ ಬರೆದಿದ್ದಾರೆ. ಆದರೆ ಧನುಷ್ ಅವರ ಯಾವುದೇ ಮನವಿಗೆ ಸ್ಪಂದಿಸಲಿಲ್ಲ. ಇದಾದ ನಂತರ, ಧನುಷ್ ಇದ್ದಕ್ಕಿದ್ದಂತೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಈ ಕಿರು ವೀಡಿಯೊವನ್ನು ಬಳಸಿದ್ದಕ್ಕಾಗಿ 10 ಕೋಟಿ ರೂಪಾಯಿ ಪರಿಹಾರವನ್ನು ನೀಡಬೇಕೆಂದು ಒತ್ತಾಯಿಸಿದ್ದಾರೆ ಎಂದು ನಯನತಾರಾ ಆಕ್ರೋಶ ವ್ಯಕ್ತಪಡಿಸಿದ್ದು ಇದೀಗ ವಿಘ್ನೇಶ್ ಸಾರ್ವಜನಿಕವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ವಿಘ್ನೇಶ್ ಶಿವನ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿವಾದಾತ್ಮಕ ಮೂರು ಸೆಕೆಂಡುಗಳ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು ಅದನ್ನು ತೆಗೆದುಹಾಕಲು ಧನುಷ್ ಒತ್ತಾಯಿಸಿದ್ದಾರೆ. ವಿಘ್ನೇಶ್ ಅವರು ವಿಡಿಯೋ ಜೊತೆಗೆ ಬರೆದುಕೊಂಡಿದ್ದು 'ಇದು 10 ಕೋಟಿ ರೂಪಾಯಿ ಮೌಲ್ಯದ ವೀಡಿಯೊವಾಗಿದ್ದು, ನಮ್ಮ ನೆಟ್‌ಫ್ಲಿಕ್ಸ್ ಸಾಕ್ಷ್ಯಚಿತ್ರದಿಂದ ತೆಗೆದುಹಾಕಲು ಕೇಳಲಾಗಿದೆ. ದಯವಿಟ್ಟು ಇಲ್ಲಿ ಉಚಿತವಾಗಿ ವೀಕ್ಷಿಸಿ. ಇದರೊಂದಿಗೆ, ಸಾಕ್ಷ್ಯಚಿತ್ರದ ಟ್ರೇಲರ್‌ನಲ್ಲಿ ಈ ವೀಡಿಯೊವನ್ನು ಬಳಸಿದ ನಂತರ ಧನುಷ್ ಕಳುಹಿಸಿದ್ದ ಲೀಗಲ್ ನೋಟಿಸ್‌ನ ಮೂರು ಪುಟಗಳ ಪ್ರತಿಯನ್ನು ಸಹ ಅವರು ಹಂಚಿಕೊಂಡಿದ್ದಾರೆ. ಜೊತೆಗೆ ಪ್ರೀತಿ ಹರಡಿ ಸಾರ್ ಎಂದು ಹೇಳಿದ್ದಾರೆ.

Vignesh Shivan-Nayanthara-Dhanush
'ನೀಚ', ಆತ ತುಂಬಾ ಕೀಳುಮಟ್ಟಕ್ಕೆ ಇಳಿದಿದ್ದಾರೆ: ಬಹಿರಂಗ ಪತ್ರದ ಮೂಲಕ ಧನುಷ್ ವಿರುದ್ಧ ನಯನತಾರಾ ಕಿಡಿ!

ನಯನತಾರಾ ಅವರ ಸಾಕ್ಷ್ಯಚಿತ್ರ Nayanthara: Beyond The Fairytale ನವೆಂಬರ್ 18ರಂದು ಬಿಡುಗಡೆಯಾಗಲಿದೆ. ಈ ವಿವಾದವು ಪ್ರಸ್ತುತ ಮುಖ್ಯಾಂಶಗಳಲ್ಲಿದ್ದು ಮನರಂಜನಾ ಉದ್ಯಮದಲ್ಲಿಯೂ ಸಹ ಕೆಲವೊಮ್ಮೆ ಸಣ್ಣ ವಿವಾದಗಳು ದೊಡ್ಡ ಕಾನೂನು ಪ್ರಕರಣಗಳಾಗಿ ಬದಲಾಗುತ್ತವೆ. ಈಗ ಈ ವಿಷಯಕ್ಕೆ ಯಾವ ಪರಿಹಾರವನ್ನು ಕಂಡುಹಿಡಿಯಲಾಗುತ್ತದೆ ಮತ್ತು ಯಾವುದೇ ವಿವಾದಗಳಿಲ್ಲದೆ ಈ ಸಾಕ್ಷ್ಯಚಿತ್ರವನ್ನು ಅದರ ನಿಗದಿತ ದಿನಾಂಕದ ನವೆಂಬರ್ 18 ರಂದು ಬಿಡುಗಡೆ ಮಾಡಲಾಗುತ್ತದೆಯೇ ಅಥವಾ ಇಲ್ಲವೇ ಎಂದು ನೋಡಬೇಕಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com