ನಾಗರಾಜ್ ಸೋಮಯಾಜಿ ನಿರ್ದೇಶನದ ಮರ್ಯಾದೆ ಪ್ರಶ್ನೆ, ಬೆಂಗಳೂರಿನ ಮಧ್ಯಮ ವರ್ಗದ ಜೀವನದ ನೈಜತೆಯನ್ನು ಪ್ರತೀಕಾರದ ತಿರುವುಗಳೊಂದಿಗೆ ಅನ್ವೇಷಿಸುತ್ತದೆ. ಇದೊಂದು ರಿಯಲಿಸ್ಟಿಕ್ ರಿವೇಂಜ್ ಡ್ರಾಮಾ.
ಆರ್ ಜೆ ಪ್ರದೀಪ ಅವರ ಸಕ್ಕತ್ ಸ್ಟುಡಿಯೋದ ಚೊಚ್ಚಲ ನಿರ್ಮಾಣದ 'ಮರ್ಯಾದೆ ಪ್ರಶ್ನೆ' ನವೆಂಬರ್ 22 ರಂದು ಬಿಡುಗಡೆಯಾಗಲಿದೆ.
ಈ ಚಿತ್ರವು ಸಾಮಾನ್ಯವಾಗಿ ಕಡೆಗಣಿಸಲ್ಪಟ್ಟ ಜೀವನದ ಅಂಶಗಳನ್ನು ಕೇಂದ್ರೀಕರಿಸುತ್ತದೆ. ಮರ್ಯಾದೆ ಪ್ರಶ್ನೆ ಚಿತ್ರದ ಪ್ರಮುಖ ಪಾತ್ರಗಳಲ್ಲಿ ರಾಕೇಶ್ ಅಡಿಗ, ಪೂರ್ಣಚಂದ್ರ ಮೈಸೂರು, ತೇಜು ಬೆಳವಾಡಿ ಅವರು ಅಭಿನಯಿಸಿದ್ದಾರೆ.
ಮರ್ಯಾದೆ ಪ್ರಶ್ನೆ ಚಿತ್ರ ಮಧ್ಯಮ ವರ್ಗದ ಹೋರಾಟವನ್ನು ಪ್ರತಿನಿಧಿಸುತ್ತದೆ. ಅವರ ಬದುಕು, ಅಭಿರುಚಿಯಲ್ಲಿ ಒಂದು ಬ್ಯೂಟಿ ಇದೆ. ಅದನ್ನು ಬಹಳ ಸಹಜವಾಗಿ ನಮ್ಮ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದೇವೆ ಎಂದು ನಿರ್ದೇಶಕ ನಾಗರಾಜ ಸೋಮಯಾಜಿ ಅವರು ಹೇಳಿದ್ದಾರೆ.
ಮಧ್ಯಮ ವರ್ಗದ ರಿಯಾಲಿಟಿಗಳನ್ನು ತೆರೆ ಮೇಲೆ ನೋಡುವ ಪ್ರತಿಯೊಬ್ಬರೂ ಅದಕ್ಕೆ ಒಂದಲ್ಲ ಒಂದು ರೀತಿ ಕನೆಕ್ಟ್ ಆಗುತ್ತಾ ಹೋಗುತ್ತಾರೆ ಎನ್ನುತ್ತಾರೆ ನಾಗರಾಜ್.
ಆರ್ ಜೆ ಪ್ರದೀಪ್ ಕಥೆ ಬರೆಯುವ ಜೊತೆಗೆ ಈ ಸಿನಿಮಾ ನಿರ್ಮಿಸಿದ್ದಾರೆ. ಶೈನ್ ಶೆಟ್ಟಿ, ಪೂರ್ಣಚಂದ್ರ ಮೈಸೂರು, ಸುನೀಲ್ ರಾವ್, ರಾಕೇಶ್ ಅಡಿಗ, ತೇಜು ಬೆಳವಾಡಿ, ರೇಖಾ ಕೂಡ್ಲಗಿ, ನಾಗೇಂದ್ರ ಶಾ, ಪ್ರಭು ಮುಂಡ್ಕೂರ್, ಹರಿಹರನ್ ವಿ ತಾರಾಗಣದಲ್ಲಿದ್ದಾರೆ.
“ನಾನು ಮರ್ಯಾದೆ ಪ್ರಶ್ನೆಯ ಬಗ್ಗೆ ಆಶಾವಾದಿಯಾಗಿದ್ದೇನೆ. ಚಿತ್ರವು ಎಲ್ಲಾ ವಯಸ್ಸಿನ ವರ್ಗದ ಪ್ರೇಕ್ಷಕರನ್ನು ರಂಜಿಸುತ್ತದೆ ಮತ್ತು ಸಂಗೀತವು ನಿಜವಾಗಿಯೂ ವಿಶೇಷವಾಗಿದೆ ” ಎಂದು ಪೂರ್ಣಚಂದ್ರ ಮೈಸೂರು ಅವರು ಹೇಳಿದ್ದಾರೆ.
Advertisement