ಖ್ಯಾತ ಸಂಗೀತಗಾರ ಎಆರ್ ರೆಹಮಾನ್ ಅವರು ನಿನ್ನೆ ಪತ್ನಿ ಸಾಯಿರಾ ಬಾನು ಅವರಿಂದ ಬೇರ್ಪಡುವುದಾಗಿ ಘೋಷಿಸುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ರೆಹಮಾನ್ ಮತ್ತು ಸೈರಾ ತಮ್ಮ 29 ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸಿದರು. ಇದರ ಬೆನ್ನಲ್ಲೇ ರೆಹಮಾನ್ ತಂಡದಲ್ಲಿದ್ದ ಮೋಹಿನಿ ಡೇ ಕೂಡ ಡಿವೋರ್ಸ್ ಘೋಷಣೆ ಮಾಡಿದ್ದು ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಜಂಟಿ ಪೋಸ್ಟ್‌ನಲ್ಲಿ ಮೋಹಿನಿ ಡೇ ತನ್ನ ಪತಿ ಮಾರ್ಕ್ ಹಾರ್ಟ್ಸ್‌ಚ್‌ನಿಂದ ಬೇರ್ಪಡುವುದಾಗಿ ಘೋಷಿಸಿದ್ದಾರೆ. ಎಆರ್ ರೆಹಮಾನ್ ಮತ್ತು ಅವರ ಪತ್ನಿ ಸಾಯಿರಾ ಬಾನು ಬೇರ್ಪಟ್ಟ ಕೆಲವೇ ಗಂಟೆಗಳ ನಂತರ ಮೋಹಿನಿ ಅವರ ಘೋಷಣೆ ಬಂದಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಮೋಹಿನಿ ಮತ್ತು ಮಾರ್ಕ್ ತಮ್ಮ ಮದುವೆಯನ್ನು ಕೊನೆಗೊಳಿಸುತ್ತಿರುವುದನ್ನು ಹಂಚಿಕೊಂಡಿದ್ದಾರೆ. ಇಬ್ಬರೂ ಗೌಪ್ಯತೆಯನ್ನು ಕೋರಿದ್ದಾರೆ.
ಮೋಹಿನಿ ಮತ್ತು ಮಾರ್ಕ್ ತಮ್ಮ ಜಂಟಿ ಪೋಸ್ಟ್‌ನಲ್ಲಿ, 'ಭಾರವಾದ ಹೃದಯದಿಂದ, ಮಾರ್ಕ್ ಮತ್ತು ನಾನು ಬೇರ್ಪಟ್ಟಿದ್ದೇವೆ ಎಂದು ಘೋಷಿಸುತ್ತೇವೆ. ಮೊದಲನೆಯದಾಗಿ, ನಮ್ಮ ಸ್ನೇಹಿತರು ಮತ್ತು ಕುಟುಂಬಕ್ಕೆ ಬದ್ಧರಾಗಿ, ನಾವು ಪರಸ್ಪರ ಒಪ್ಪಿಗೆಯೊಂದಿಗೆ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ನಮ್ಮ ನಡುವೆ ಪರಸ್ಪರ ತಿಳುವಳಿಕೆ ಇದೆ. ಆದರೂ ನಾವು ಒಳ್ಳೆಯ ಸ್ನೇಹಿತರಾಗಿ ಉಳಿದಿದ್ದೇವೆ. ನಾವು ಜೀವನದಿಂದ ವಿಭಿನ್ನ ವಿಷಯಗಳನ್ನು ಬಯಸುತ್ತೇವೆ. ಪರಸ್ಪರ ಪ್ರತ್ಯೇಕತೆಯು ಮುಂದುವರೆಯಲು ಇದು ಉತ್ತಮ ಮಾರ್ಗವಾಗಿದೆ ಎಂದರು.
ಮೋಹಿನಿ ಡೇ ಯಾರು?
'ನೀವು ನಮಗೆ ನೀಡಿದ ಎಲ್ಲಾ ಬೆಂಬಲವನ್ನು ನಾವು ಪ್ರಶಂಸಿಸುತ್ತೇವೆ. ದಯವಿಟ್ಟು ಈ ಸಮಯದಲ್ಲಿ ನಾವು ಮಾಡಿದ ನಿರ್ಧಾರವನ್ನು ಧನಾತ್ಮಕವಾಗಿ ಮತ್ತು ನಮ್ಮ ಗೌಪ್ಯತೆಯನ್ನು ಗೌರವಿಸುವ ಮೂಲಕ ಗೌರವಿಸಿ. ಕೋಲ್ಕತ್ತಾ ಮೂಲದ 29 ವರ್ಷದ ಮೋಹಿನಿ ಡೇ ಓರ್ವ ಗಿಟಾರ್ ವಾದಕಿ ಮತ್ತು ಪ್ರಪಂಚದಾದ್ಯಂತ 40ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಎಆರ್ ರೆಹಮಾನ್ ಅವರೊಂದಿಗೆ ಪ್ರದರ್ಶನ ನೀಡಿದ್ದಾರೆ.
ಎಆರ್ ರೆಹಮಾನ್ ವೈಯಕ್ತಿಕ ಜೀವನ
ಎಆರ್ ರೆಹಮಾನ್ 1995ರಲ್ಲಿ ಸಾಯಿರಾ ಬಾನು ಅವರನ್ನು ವಿವಾಹವಾಗಿದ್ದರು. ದಂಪತಿಗೆ ಖತೀಜಾ, ರಹೀಮಾ ಮತ್ತು ಅಮೀನ್ ಎಂಬ ಮೂವರು ಮಕ್ಕಳಿದ್ದಾರೆ. ಮೂವರಿಗೂ ಮದುವೆಯಾಗಿದೆ. ಆದಾಗ್ಯೂ, ಬಿಜಿ ಶೆಡ್ಯೂಲ್ ಗಳಿಂದ ಸಂಬಂಧದಲ್ಲಿ ಹೆಚ್ಚುತ್ತಿರುವ ಒತ್ತಡದಿಂದಾಗಿ ವಿಚ್ಛೇದನದಂತ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
Advertisement