ಸಾಯಿ ಪಲ್ಲವಿ ಫ್ಯಾನ್ಸ್ ಗಳಿಂದ ನಿರಂತರ ಕರೆ; Amaran ನಿರ್ಮಾಪಕರಿಗೆ 1.1 ಕೋಟಿ ರೂ ಲೀಗಲ್ ನೋಟಿಸ್ ಕಳುಹಿಸಿದ ವಿದ್ಯಾರ್ಥಿ!

ಸಿನಿಮಾದ ದೃಶ್ಯವೊಂದರಲ್ಲಿ ಸಾಯಿ ಪಲ್ಲವಿ ತನ್ನ ಮೊಬೈಲ್ ನಂಬರ್ ಬರೆದಿರುವ ಕಾಗದವನ್ನು ನಾಯಕ ಶಿವಕಾರ್ತಿಕೇಯನ್ ಅವರತ್ತ ಎಸೆದಿದ್ದಾರೆ. ವಾಸ್ತವದಲ್ಲಿ ಈ ನಂಬರ್ ನನ್ನದಾಗಿದ್ದು, ಆಧಾರ್‌ ಕಾರ್ಡ್ ನಿಂದ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳವರೆಗೆ ಎಲ್ಲದಕ್ಕೂ ಲಿಂಕ್ ಆಗಿದೆ.
Amaran Poster
Amaran ಫೋಸ್ಟರ್
Updated on

ವಿಚಿತ್ರ ರೀತಿಯ ಪ್ರಕರಣವೊಂದರಲ್ಲಿ ಸಿನಿಮಾದಲ್ಲಿ ಫೋನ್ ನಂಬರ್ ಬಳಸಿದ್ದಕ್ಕಾಗಿ Amaran ನಿರ್ಮಾಪಕರಿಗೆ ಚೆನ್ನೈನ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಲೀಗಲ್ ನೋಟಿಸ್ ಕಳುಹಿಸಿದ್ದಾನೆ. ನಟಿ ಸಾಯಿ ಪಲ್ಲವಿ ಅಭಿಮಾನಿಗಳಿಂದ ಫೋನ್ ಕರೆಗಳು ಹೆಚ್ಚಾದ ನಂತರ ವಿದ್ಯಾರ್ಥಿ ವಿವಿ ವಾಗೀಸನ್ ಚಿತ್ರ ನಿರ್ಮಾಪಕರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾನೆ. ಚಿತ್ರದಲ್ಲಿ ಆತನ ಫೋನ್ ನಂಬರ್ ತೋರಿಸಿದ್ದಕ್ಕಾಗಿ ರೂ. 1.1 ಕೋಟಿ ಲೀಗಲ್ ನೋಟಿಸ್ ಕಳುಹಿಸಿರುವುದಾಗಿ ದಿ ಹಿಂದೂ ವರದಿ ಮಾಡಿದೆ.

ಸಿನಿಮಾದ ದೃಶ್ಯವೊಂದರಲ್ಲಿ ಸಾಯಿ ಪಲ್ಲವಿ ತನ್ನ ಮೊಬೈಲ್ ನಂಬರ್ ಬರೆದಿರುವ ಕಾಗದವನ್ನು ನಾಯಕ ಶಿವಕಾರ್ತಿಕೇಯನ್ ಅವರತ್ತ ಎಸೆದಿದ್ದಾರೆ. ವಾಸ್ತವದಲ್ಲಿ ಈ ನಂಬರ್ ನನ್ನದಾಗಿದ್ದು, ಆಧಾರ್‌ ಕಾರ್ಡ್ ನಿಂದ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳವರೆಗೆ ಎಲ್ಲದಕ್ಕೂ ಲಿಂಕ್ ಆಗಿದ್ದು, ಬದಲಾಯಿಸಲು ಕಷ್ಟವಾಗುತ್ತದೆ ಎಂದು ವಾಗೀಸನ್ ಹೇಳಿಕೊಂಡಿದ್ದಾರೆ.

ಅಕ್ಟೋಬರ್ 31 ರಂದು ಚಿತ್ರ ಬಿಡುಗಡೆಯಾದ ನಂತರ, ಸಾಯಿ ಅವರೊಂದಿಗೆ ಮಾತನಾಡಬೇಕೆಂದು ಕರೆಗಳು ವಿದ್ಯಾರ್ಥಿಗೆ ಬರಲು ಆರಂಭಿಸಿವೆ. ಆರಂಭದಲ್ಲಿ ಯಾಕೆ ಈ ರೀತಿಯ ಕರೆ ಬರುತ್ತಿವೆ ಎಂಬುದು ಆತನಿಗೆ ಗೊತ್ತಾಗಿಲ್ಲ. ಆದರೆ ಕರೆಗಳು ಹೆಚ್ಚಾದ ನಂತರ ಸಿನಿಮಾದಲ್ಲಿ ತನ್ನ ಮೊಬೈಲ್ ಸಂಖ್ಯೆ ತೋರಿಸಲಾಗಿದೆ ಎಂಬುದು ಅರಿವಿಗೆ ಬಂದಿದೆ. ಇದೀಗ ಹೇಳಲಾಗದ ಮಾನಸಿಕ ಯಾತನೆಯಿಂದ ರೂ. 1.1 ಕೋಟಿ ರೂ ಪರಿಹಾರ ಕೇಳಿದ್ದು, ಕೂಡಲೇ ಸಿನಿಮಾದಿಂದ ತನ್ನ ನಂಬರ್ ತೆಗೆಯುವಂತೆಯೂ ಕೇಳಿಕೊಂಡಿದ್ದಾರೆ.

Amaran Poster
'ಪಾಕ್‌ನಲ್ಲಿ ಭಾರತೀಯ ಸೇನೆ ಭಯೋತ್ಪಾದಕ ಗುಂಪು': ಸಾಯಿ ಪಲ್ಲವಿ ಹೇಳಿಕೆಗೆ ನೆಟ್ಟಿಗರ ಆಕ್ರೋಶ, ವಿಡಿಯೋ ನೋಡಿ!

Amaran ಚಿತ್ರ ಬಿಡುಗಡೆಯಾದಾಗಿನಿಂದಲೂ ನಿದ್ರೆ, ಅಧ್ಯಯನ ಮಾಡಲು ಆಗುತ್ತಿಲ್ಲ. ದಿನನಿತ್ಯದ ಯಾವುದೇ ಚಟುವಟಿಕೆ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಆರಂಭದಲ್ಲಿ ಸೋಶಿಯಲ್ ಮೀಡಿಯಾ ಎಕ್ಸ್ ನಲ್ಲಿ ಫೋಸ್ಟ್ ಮಾಡುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದೆ. ಅದನ್ನು ನಿರ್ದೇಶಕ ರಾಜಕುಮಾರ್ ಪೆರಿಯಾಸ್ವಾಮಿ ಮತ್ತು ನಾಯಕ ಶಿವಕಾರ್ತಿಕೇಯನ್ ಅವರಿಗೆ ಟ್ಯಾಗ್ ಮಾಡಿದ್ದೆ. ಆದರೆ, ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ವಿದ್ಯಾರ್ಥಿ ಹೇಳಿಕೊಂಡಿರುವುದಾಗಿ ವರದಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com