15 ವರ್ಷದ ಲವ್: ಬಹುಭಾಷಾ ನಟಿ ಕೀರ್ತಿ ಸುರೇಶ್ ಅವರ ಭಾವೀ ಪತಿ ಇವರೇ ನೋಡಿ!

ಇನ್ಸಾಟಗ್ರಾಂನಲ್ಲಿ ಭಾವಿ ಪತಿಯೊಂದಿಗಿರುವ ಫೋಟೋವನ್ನು ಫೋಸ್ಟ್ ಮಾಡಿ ಸಂಬಂಧವನ್ನು ಅಧಿಕೃತಗೊಳಿಸಿದ್ದಾರೆ.
Keerthy Suresh,  Antony Thattil
ಕೀರ್ತಿ ಸುರೇಶ್
Updated on

ಬಹುಭಾಷಾ ನಟಿ ಕೀರ್ತಿ ಸುರೇಶ್ ಅವರ ಮದುವೆ ಬಗ್ಗೆ ಸಾಕಷ್ಟು ವದಂತಿಗಳು ಹಲವು ದಿನಗಳಿಂದ ಕೇಳಿಬರುತ್ತಲೇ ಇದ್ದವು. ಇದೀಗ ಅದೆಲ್ಲದ್ದಕ್ಕೂ ಪೂರ್ಣ ವಿರಾಮ ಇಡುವಂತಹ ಸಮಯ ಬಂದಿದೆ. ಮಹಾನಟಿ ಕೊನೆಗೂ ತನ್ನ ಭಾವಿ ಪತಿಯನ್ನು ಪರಿಚಯಿಸಿದ್ದಾರೆ.

ಇನ್ಸಾಟಗ್ರಾಂನಲ್ಲಿ ಭಾವಿ ಪತಿಯೊಂದಿಗಿರುವ ಫೋಟೋವನ್ನು ಫೋಸ್ಟ್ ಮಾಡಿ ಸಂಬಂಧವನ್ನು ಅಧಿಕೃತಗೊಳಿಸಿದ್ದಾರೆ.

ದೀಪಾವಳಿ ಆಚರಣೆ ಸಂದರ್ಭದಲ್ಲಿ ಇಬ್ಬರು ಕ್ಯಾಮರಾಗೆ ಬೆನ್ನು ಮಾಡಿ ಆಕಾಶದತ್ತ ಬೆಳಕು ನೋಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಆದರೆ, ಭಾವಿ ಪತಿಯ ಮುಖವನ್ನು ಬಹಿರಂಗಪಡಿಸಿಲ್ಲ.

Keerthy Suresh,  Antony Thattil
ದೇಶವೇ ಆತಂಕದ ಸ್ಥಿತಿಯಲ್ಲಿದೆ. ಇಂತಹ ಸಂದರ್ಭದಲ್ಲಿ ನನ್ನ ಮದುವೆ ಬಗ್ಗೆ ಗಾಸಿಪ್ ಬೇಕಾ: ಕೀರ್ತಿ ಸುರೇಶ್ ಗರಂ

ಆಂಟೋನಿ ಜೊತೆಗಿನ ಕಳೆದ 15 ವರ್ಷಗಳ ಸ್ನೇಹ ಜೀವನಪೂರ್ತಿ ಇರುತ್ತದೆ. ಎಂದೆಂದಿಗೂ ಆಂಟೋನಿ-ಕೀರ್ತಿ ಒಂದೇ ಎಂದು ಕೀರ್ತಿ ಸುರೇಶ್ ಬರೆಂದುಕೊಂಡಿದ್ದಾರೆ. ಕೀರ್ತಿ ಸುರೇಶ್ ಅವರ ಈ ಫೋಸ್ಟ್ ವೈರಲ್ ಆಗಿದ್ದು, ಅನೇಕ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಫೋಸ್ಟ್ ಗೆ ಪ್ರತಿಕ್ರಿಯಿಸುತ್ತಿದ್ದು,ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com