ಚೆನ್ನೈ: ತಮಿಳು ನಟ ಧನುಷ್ ಮತ್ತು ಐಶ್ವರ್ಯ ರಜನಿಕಾಂತ್ ಅವರಿಗೆ ಚೆನ್ನೈನ ಕೌಟುಂಬಿಕ ನ್ಯಾಯಾಲಯವು ಅಧಿಕೃತವಾಗಿ ವಿಚ್ಛೇದನ ಮಂಜೂರು ಮಾಡಿದೆ.
ಧನುಷ್ ಅವರು ನಿರ್ದೇಶಕ ಕಸ್ತೂರಿರಾಜಾ ಅವರ ಮಗನಾಗಿದ್ದು, ಐಶ್ವರ್ಯ ಅವರು ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ. 2004ರ ನವೆಂಬರ್ 18ರಂದು ವಿವಾಹವಾಗಿದ್ದ ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ. 18 ವರ್ಷಗಳ ದಾಂಪತ್ಯ ಜೀವನವನ್ನು ಅಂತ್ಯಗೊಳಿಸುತ್ತಿರುವುದಾಗಿ 2022ರ ಸೆಪ್ಟೆಂಬರ್‌ನಲ್ಲಿ ಘೋಷಿಸಿದ್ದರು. ಬಳಿಕ, ಕಾನೂನಾತ್ಮಕವಾಗಿ ಬೇರೆಯಾಗಲು, ವಿಚ್ಛೇದನ ಪಡೆಯಲು ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು.
ಕಳೆದ ನವೆಂಬರ್ 21ರಂದು ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶೆ ಸುಭಾದೇವಿ ಮುಂದೆ ಹಾಜರಾಗಿದ್ದ ದಂಪತಿ ನಾವಿಬ್ಬರು ಒಟ್ಟಿಗೆ ಬದುಕುವುದು ಸಾಧ್ಯವಿಲ್ಲ, ವಿಚ್ಛೇದನ ನಿರ್ಧಾರ ಅಚಲವಾಗಿದೆ ಎಂದು ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ವಿಚ್ಛೇದನ ಮಂಜೂರು ಮಾಡಿದೆ. ಐಶ್ವರ್ಯಾ ಮತ್ತು ಧನುಷ್ 2004 ರಲ್ಲಿ ಚೆನ್ನೈನಲ್ಲಿ ಅದ್ಧೂರಿ ವಿವಾಹ ಸಮಾರಂಭದಲ್ಲಿ ವಿವಾಹವಾಗಿದರು. 2022 ರಲ್ಲಿ ಬೇರೆಯಾಗಲು ನಿರ್ಧರಿಸಿರುವುದಾಗಿ ಘೋಷಿಸಿದ್ದರು. ದಯವಿಟ್ಟು ನಮ್ಮ ನಿರ್ಧಾರವನ್ನು ಗೌರವಿಸಿ ಎಂದು ಹೇಳಿದ್ದರು.
Advertisement