ಬಹುನಿರೀಕ್ಷಿತ ಟಾಕ್ಸಿಕ್, ಕೆಡಿ ಸಿನಿಮಾವನ್ನು ನಿರ್ಮಿಸುತ್ತಿರುವ ಜನಪ್ರಿಯ KPN ಪ್ರೊಢಕ್ಷನ್ ಸಂಸ್ಥೆ ಕಾಲಿವುಡ್ ಗೂ ಕಾಲಿಟ್ಟಿದ್ದು, ವಿಜಯ್ ದಳಪತಿಯ 69ನೇ ಚಿತ್ರ ನಿರ್ಮಾಣ ಮಾಡುತ್ತಿದೆ. ಇದೀಗ ಈ ಚಿತ್ರಕ್ಕೆ ಅನಿಮಲ್ ಸ್ಟಾರ್ ಬಾಬಿ ಡಿಯೋಲ್ ಸೇರ್ಪಡೆಯಾಗಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ KVN ಪ್ರೊಢಕ್ಷನ್ ಮಾಹಿತಿ ಹಂಚಿಕೊಂಡಿದೆ. ವಿಜಯ್ ದಳಪತಿಯ 69ನೇ ಚಿತ್ರದಲ್ಲಿ ಬಾಬಿ ಡಿಯೋಲ್ ಸೇರುತ್ತಿರುವುದನ್ನು ಘೋಷಿಸುವುದಕ್ಕೆ ಅತೀವ ಸಂತೋಷ ಹಾಗೂ ಎಕ್ಸೈಟ್ ಆಗಿರುವುದಾಗಿ ಫೋಸ್ಟ್ ಮಾಡಲಾಗಿದೆ.
ಸಂದೀಪ್ ರೆಡ್ಡಿ ವಂಗಾ ಅವರ ಅನಿಮಲ್‌ನಲ್ಲಿನ ಪಾತ್ರಕ್ಕಾಗಿ ಡಿಯೋಲ್ ವೃತ್ತಿಜೀವನದ ಉತ್ತುಂಗದಲ್ಲಿದ್ದು, ಇತ್ತೀಚೆಗೆ IIFA ಅತ್ಯುತ್ತಮ ವಿಲನ್ ಪ್ರಶಸ್ತಿ ಪಡೆದಿದ್ದರು. ಸೂರ್ಯ ಅಭಿನಯದ ಕಂಗುವ ಚಿತ್ರದಲ್ಲಿ ಅವರು ನಟಿಸಲಿದ್ದಾರೆ.
ಇನ್ನೂ ಹೆಸರಿಡದ ವಿಜಯ್ ದಳಪತಿಯ ಕೊನೆಯ ಚತ್ರವನ್ನು ಅಕ್ಚೋಬರ್ 2025ರಲ್ಲಿ ತಮಿಳು, ತೆಲುಗು ಮತ್ತು ಹಿಂದಿಯ ಬಿಡುಗಡೆ ಮಾಡಲು ಚಿತ್ರ ತಂಡ ಯೋಚಿಸಿದೆ.
ಲಿಯೋ, ಮೆರ್ಸಲ್, ಮಾಸ್ಟರ್ ಮತ್ತು ಬಿಗಿಲ್‌ನಂತಹ ಚಿತ್ರಗಳಿಗೆ ಹೆಸರಾದ ವಿಜಯ್ ದಳಪತಿ ತಮಿಳಗ ವೆಟ್ರಿ ಕಳಗಂ ರಾಜಕೀಯ ಪಕ್ಷ ಸ್ಥಾಪಿಸಿದ್ದು, 2026 ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
Advertisement