
ರಿಷಬ್ ಶೆಟ್ಟಿ ಕಾಂತಾರ ಚಿತ್ರವು ಕನ್ನಡ ಪ್ರೇಕ್ಷಕರನ್ನು ಮೋಡಿಮಾಡಿದ್ದು ಮಾತ್ರವಲ್ಲದೆ ಬಹು ಭಾಷೆಗಳಲ್ಲಿ ಸಿನಿಮಾ ಪ್ರಿಯರನ್ನು ರಂಜಿಸುವುದರ ಜೊತೆಗೆ ಬ್ಲಾಕ್ ಬಸ್ಟರ್ ಸಿನಿಮಾವಾಗಿ ಹೊರಹೊಮ್ಮಿದೆ. ಕೇವಲ 16 ಕೋಟಿಗಳ ಸಾಧಾರಣ ಬಜೆಟ್‌ನಲ್ಲಿ ತಯಾರಾದ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 460 ಕೋಟಿ ಕಲೆಕ್ಷನ್ ಮಾಡಿದೆ.
ಕಾಂತಾರ ಸಿನಿಮಾ ಬಿಡುಗಡೆಯಾಗಿ ಸೆಪ್ಟೆಂಬರ್ 30 ರಂದು ತನ್ನ ಎರಡನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ, ಇದೇ ವೇಳೆ ಹೊಂಬಾಳೆ ಫಿಲಂಸ್ ನಿರ್ಮಾಪಕ ವಿಜಯ್ ಕಿರಗಂದೂರು ಈ ಅಸಾಮಾನ್ಯ ಪ್ರಯಾಣದ ಬಗ್ಗೆ ಹಂಚಿಕೊಂಡಿದ್ದಾರೆ. ನಮ್ಮ ಹೃದಯಕ್ಕೆ ಹತ್ತಿರವಾದ ವಿಶೇಷ ಚಲನಚಿತ್ರ. ಅದನ್ನು ದೈವಿಕ ವಿದ್ಯಮಾನವಾಗಿ ಪರಿವರ್ತಿಸಿದ ಅದ್ಭುತ ಪ್ರೇಕ್ಷಕರಿಗೆ ನಮ್ಮ ತುಂಬು ಹೃದಯದ ಕೃತಜ್ಞತೆಗಳು ಎಂದಿದ್ದಾರೆ. ಚಿತ್ರದ ಯಶಸ್ಸನ್ನು ಅಂಕಿಅಂಶಗಳು ಮಾತ್ರವಲ್ಲದೆ ಅದು ಪಡೆದ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಯಲ್ಲಿ ಅಳೆಯಲಾಗುತ್ತದೆ, ಪ್ರಶಸ್ತಿಗಳು ಅದರ ಸಾಧನೆಗಳಿಗೆ ಕಿರೀಟವನ್ನು ನೀಡುತ್ತದೆ. ಕಾಂತಾರ ಸಿನಿಮಾಗೆ ಪುರಸ್ಕಾರಗಳ ಮಹಾಪೂರವೇ ಹರಿದುಬರುತ್ತಿದ್ದು, ಅಕ್ಟೋಬರ್ 8ರಂದು ರಾಷ್ಟ್ರ ಪ್ರಶಸ್ತಿ ಸ್ವೀಕರಿಸಲು ತಂಡ ಸಜ್ಜಾಗಿದೆ.
ಆದರೆ ಉತ್ಸಾಹ ಅಲ್ಲಿಗೆ ಮುಗಿಯುವುದಿಲ್ಲ. ಈ ಮಹಾಕಾವ್ಯದ ಮುಂದಿನ ಅಧ್ಯಾಯದ ತಯಾರಿಕೆಯಲ್ಲಿ ಅರ್ಧದಾರಿಯಲ್ಲೇ ಇದ್ದೇವೆ ಎಂದು ಹಂಚಿಕೊಳ್ಳಲು ನಿರ್ಮಾಣ ಸಂಸ್ಥೆ ಥ್ರಿಲ್ ಆಗಿದೆ. "ಈ ದಂತಕತೆಯ ಮುಂದಿನ ಅಧ್ಯಾಯವನ್ನು ಪ್ರಾರಂಭಿಸಲು ನಾವು ಉತ್ಸುಕರಾಗಿದ್ದೇವೆ, ಕಾಂತಾರ ಅಧ್ಯಾಯ 1 ಶೀಘ್ರದಲ್ಲೇ ನಿಮ್ಮೆಲ್ಲರ ಮುಂದೆ ತರುತ್ತೇವೆ ಎಂದಿದ್ದಾರೆ. ಕಾಂತಾರ ಚಿತ್ರವನ್ನು ನಿರ್ದೇಶಿಸಿದ, ಸಹ-ಕಥೆಗಾರ ಮತ್ತು ನಟಿಸಿದ ರಿಷಬ್ ಶೆಟ್ಟಿ ಪ್ರಸ್ತುತ ಚಿತ್ರದ ಪೂರ್ವಭಾಗದ ಮೇಲೆ ಕೇಂದ್ರೀಕರಿಸಿದ್ದಾರೆ. 2025 ರಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ, ರಿಷಬ್ ಬಿಗಿಯಾದದ ಕಥೆ ಬೆಯಲು ಸಮಯವನ್ನು ತೆಗೆದುಕೊಳ್ಳುತ್ತಿದ್ದಾರೆ. ಕಾಂತಾರ ಯಶಸ್ಸಿನಿಂದಾಗಿ ಪ್ರೀಕ್ವೆಲ್ ಗಾಗಿ ಅಭಿಮಾನಿಗಳು ತೀವ್ರ ಕುತೂಹದಿಂದ ಕಾಯುತ್ತಿದ್ದಾರೆ.
Advertisement