ರೋಹಿತ್ ಕೀರ್ತಿ ನಿರ್ದೇಶನದ ಮತ್ತು ಪಿಬಿ ಪ್ರೇಮನಾಥ್ ನಿರ್ಮಾಣದ #ಪಾರು ಪಾರ್ವತಿ ಚಿತ್ರದ ಶೂಟಿಂಗ್ ಮುಕ್ತಾಯಗೊಂಡಿದೆ. ಈ ಚಿತ್ರದಲ್ಲಿ ಬಿಗ್ ಬಾಸ್ ಸ್ಪರ್ಧಿ ದೀಪಿಕಾ ದಾಸ್, ಪೂನಂ ನಾಯಕ್ ಮತ್ತು ಫವಾಜ್ ಅಶ್ರಫ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದ್ದು, ಶೀಘ್ರದಲ್ಲಿಯೇ ಬಿಡುಗಡೆಯಾಗುವ ನಿರೀಕ್ಷೆ ಇದೆ. ಇತ್ತೀಚೆಗೆ ಈ ಚಿತ್ರದ ಮೊದಲ ಪೋಸ್ಟರ್ ಬಹಳ ವಿಭಿನ್ನವಾಗಿ ಅನಾವರಣಗೊಂಡಿದೆ.
ಈ ಪೋಸ್ಟರ್ ಗೆ "ಇನ್ಫಿನಿಟಿ ರೋಡ್" ಎಂಬ ಹೆಸರಿಡಲಾಗಿದೆ. ಟ್ರಾವೆಲ್, ಅಡ್ವೆಂಚರ್ ಡ್ರಾಮಾ ಕಥಾಹಂದರ ಹೊಂದಿರುವ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಪ್ರಕೃತಿಯ ಮಡಿಲಲ್ಲೇ ಬಿಡುಗಡೆ ಮಾಡಿರುವುದು ವಿಶೇಷ.
ಥಾರ್ ಬೆಂಗಳೂರು ಸಂಸ್ಥೆಯ ಸಹಯೋಗದೊಂದಿಗೆ ಇತ್ತೀಚೆಗೆ ಈ ಪೋಸ್ಟರ್ ಬಿಡುಗಡೆ ಸಮಾರಂಭ ನಡೆಯಿತು. ಪ್ರಕೃತಿ ಸಂರಕ್ಷಣೆಯ ಸಂದೇಶ ನೀಡಲು ಗಿಡ ನೆಡುವುದರ ಮೂಲಕ ಸಮಾರಂಭವನ್ನು ಇನ್ನಷ್ಟು ಅರ್ಥಪೂರ್ಣವಾಗಿ ನಡೆಸಿದರು. ಗಿಡ ನೆಡುವುದು ಮಾತ್ರವಲ್ಲದೇ, ಅದರ ಪೋಷಣೆಗೆ ಬೇಕಾದ ಕ್ರಮಗಳ ಬಗ್ಗೆ ಕೂಡಾ ಚರ್ಚಿಸಲಾಯಿತು. ಇದೇ ಸಂದರ್ಭದಲ್ಲಿ ಸುಮಾರು ನೂರಕ್ಕೂ ಅಧಿಕ ಜನರಿಗೆ ಗಿಡಗಳನ್ನು ನೀಡಿದರು. ಎಮ್ಆರ್ಟಿ ಮ್ಯೂಸಿಕ್ ಯೂಟ್ಯೂಬ್ ಚಾನಲ್ ನಲ್ಲಿ ಫಸ್ಟ್ ಲುಕ್ ಪೋಸ್ಟರ್ ಲಾಂಚ್ ವಿಡಿಯೋ ಅನಾವರಣಗೊಂಡಿದ್ದು, ಸಖತ್ ವೈರಲ್ ಆಗುತ್ತಿದೆ.
ದೀಪಿಕಾ ದಾಸ್ ಹಾಗೂ ಪೂನಂ ಸರ್ ನಾಯಕ್ ಮತ್ತು ಫವಾಜ್ ಅಶ್ರಫ್ ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಚಿತ್ರದ ಬಗ್ಗೆ ನಿರ್ದೇಶಕ ರೋಹಿತ್ ಕೀರ್ತಿ ಮಾತನಾಡಿ ಇನ್ಫಿನಿಟಿ ರೋಡ್ ಪೋಸ್ಟರ್, ಎರಡು ಪಾತ್ರಗಳ ಪ್ರಯಾಣ ಹಾಗೂ ಅವರ ಸಾಹಸಗಳನ್ನು ತೋರಿಸುತ್ತದೆ. ಅಂತ್ಯವಿಲ್ಲದ ಅನ್ವೇಷಣೆ ಪ್ರತಿನಿಧಿಸುತ್ತದೆ. ಫಸ್ಟ್ ಲುಕ್ ಪೋಸ್ಟರ್ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಅಕ್ಟೋಬರ್ 3ರಂದು ಚಿತ್ರದ ಆಡಿಯೋ ರಿಲೀಸ್ ಆಗಲಿದೆ. #Paru Parvathy ಬಿಡುಗಡೆಗೆ ಎಲ್ಲಾ ಸಿದ್ಧತೆ ನಡೆಯುತ್ತಿದ್ದು ಶೀಘ್ರದಲ್ಲೇ ಟ್ರೇಲರ್ ಕೂಡ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ರೋಹಿತ್ ಕೀರ್ತಿ ತಿಳಿಸಿದ್ದಾರೆ.
Advertisement