BBK: ದೊಡ್ಮನೆಯಿಂದ ಆಚೆ ಬಾ ನೋಡಿಕೊಳ್ತೀನಿ... ಅಂತಿದ್ದ ಜಗದೀಶ್‌ಗೆ ಸಂಕಷ್ಟ; ಕಲರ್ಸ್ ವಾಹಿನಿಗೆ ವಕೀಲರ ಸಂಘ ಪತ್ರ!

ಕೆ.ಎನ್ ಜಗದೀಶ್​ ಅವರನ್ನು ಲಾಯರ್​ ಎಂದು ಕರೆಯಬಾರದು ಎಂದು ವಕೀಲರ ಸಂಘವು ತಾಕೀತು ಮಾಡಿದೆ.
ಜಗದೀಶ್
ಜಗದೀಶ್
Updated on

ಬಿಗ್​ ಬಾಸ್​ ಕನ್ನಡ 11ನೇ ಆವೃತ್ತಿಯಲ್ಲಿ ಜಗದೀಶ್ ಆಟಾಟೋಪ ಮೀತಿ ಮೀರಿ ನಡೆಯುತ್ತಿದ್ದು ಬಿಗ್ ಬಾಸ್ ಸ್ಪರ್ಧಿಗಳಿಗೆ ಹೆಚ್ಚು ಪೀಕಲಾಟಕ್ಕೆ ಕಾರಣವಾಗಿದೆ. ಅಲ್ಲದೆ ಪದೇ ಪದೇ ಮನೆಯಿಂದ ಆಚೆ ನೋಡಿಕೊಳ್ಳುತ್ತಿದ್ದೇನೆ ಎಂದು ಹೇಳುವ ಮೂಲಕ ಪ್ರತಿಸ್ಪರ್ಧಿಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಕಾರಣ ತಾನು ವಕೀಲ ಎಂಬ ಮನೋ ಧೈರ್ಯ. ಆದರೆ ಜಗದೀಶ್​ ಅವರು ನಿಜಕ್ಕೂ ಲಾಯರ್​ ಹೌದೋ ಅಲ್ಲವೋ ಎಂಬ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿವೆ.

ಇದಕ್ಕೆ ಕಾರಣವಾಗಿರುವುದು ಬೆಂಗಳೂರು ವಕೀಲರ ಸಂಘ, ಕಲರ್ಸ್​ ಕನ್ನಡ ವಾಹಿನಿಗೆ ಬರೆದಿರುವ ಪತ್ರ. ಹೌದು ಕೆ.ಎನ್ ಜಗದೀಶ್​ ಅವರನ್ನು ಲಾಯರ್​ ಎಂದು ಕರೆಯಬಾರದು ಎಂದು ವಕೀಲರ ಸಂಘವು ತಾಕೀತು ಮಾಡಿದೆ. ಬೆಂಗಳೂರು ವಕೀಲರ ಸಂಘವು ಏಷ್ಯಾದಲ್ಲಿಯೇ ಅತಿ ದೊಡ್ಡ ಸಂಘವಾಗಿದ್ದು, ಸಮಾಜದಲ್ಲಿ ಅದರ ಘನತೆ ಮತ್ತು ಗೌರವವನ್ನು ಕಾಪಾಡಿಕೊಂಡು ಬಂದಿದೆ. ನಮ್ಮ ಸಂಘವು ಸುಮಾರು 25 ಸಾವಿರಕ್ಕೂ ಹೆಚ್ಚು ವಕೀಲ ಸದಸ್ಯರನ್ನು ಹೊಂದಿದೆ. ವಕೀಲರ ಸಮುದಾಯವು ದಿನನಿತ್ಯದ ನ್ಯಾಯಾಲಯ ಕಲಾಪಗಳಲ್ಲಿ ಭಾಗವಹಿಸಿ ಸಮಾಜದಲ್ಲಿ ಅತ್ಯಂತ ಗೌರವಪೂರ್ವಕವಾಗಿ ವೃತ್ತಿಯನ್ನು ನಡೆಸಿಕೊಂಡು ಬರುತ್ತಿದ್ದು, ಸಮಾಜಕ್ಕೆ ಮಾದರಿಯಾಗಿದೆ. ಇಂತಹ ಸಂಸ್ಥೆಗೆ ಯಾವುದೇ ವ್ಯಕ್ತಿಗಳು ಮಸಿ ಬಳಿಯಲು ಪ್ರಯತ್ನಪಟ್ಟರೆ ಅದನ್ನು ಸಹಿಸಲು ಆಗುವುದಿಲ್ಲ.

ತಮ್ಮ ಚಾನಲ್‌ನಲ್ಲಿ ಇತ್ತೀಚಿಗೆ ಪ್ರಸಾರವಾಗುತ್ತಿರುವ ಬಿಗ್​ ಬಾಸ್​ ಕನ್ನಡ ಸೀಸನ್ 11ರಲ್ಲಿ ಭಾಗವಹಿಸಿರುವ ಕೆ.ಎನ್ ಜಗದೀಶ್‌ ಅವರು ವಕೀಲರಲ್ಲದಿದ್ದರೂ ಸಹ ಬಿಗ್ ಬಾಸ್-11ರ ಪ್ರಸಾರ ಕಾರ್ಯಕ್ರಮದಲ್ಲಿ ಅವರನ್ನು ವಕೀಲರು ಮತ್ತು ವಕೀಲ್ ಸಾಹೇಬ್ ಎಂದು ಬಿಂಬಿಸುತ್ತಿರುವುದು ನಮ್ಮ ವಕೀಲರ ಸಂಘದ ಸದಸ್ಯರಿಗೆ ನೋವುಂಟು ಮಾಡಿರುತ್ತದೆ ಮತ್ತು ಅನೇಕ ವಕೀಲರು ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ್ದಾರೆ.

ಈ ಹಿಂದಿಯೇ ಕರ್ನಾಟಕ ರಾಜ್ಯದ ವಕೀಲರ ಪರಿಷತ್ತು ಕರ್ನಾಟಕ ರಾಜ್ಯದಲ್ಲಿ ಕಾನೂನು ವೃತ್ತಿ ನಡೆಸದಂತೆ ಕೆ.ಎನ್. ಜಗದೀಶ್‌ ಅವರಿಗೆ ಆದೇಶ ಹೊರಡಿಸಿದೆ. ದೆಹಲಿ ಬಾರ್ ಕೌನ್ಸಿಲ್‌ ಕೆ.ಎನ್‌ ಜಗದೀಶ್‌ ದೆಹಲಿ ಕೌನ್ಸಿಲ್‌ನಲ್ಲಿ ನೋಂದಣಿಯಾಗಿರುವ ದಾಖಲಾತಿಗಳನ್ನು ಪರಿಶೀಲಿಸಿ, ದಾಖಲೆಗಳು ನಕಲಿ ಎಂದು ದೃಢಪಟ್ಟ ನಂತರ ಅವರ ನೋಂದಣಿಯನ್ನು ರದ್ದುಗೊಳಿಸಿ ಎಲ್ಲಾ ಪ್ರಮಾಣ ಪತ್ರಗಳನ್ನು ಹಿಂತಿರುಗಿಸುವಂತೆ ಆದೇಶ ಹೊರಡಿಸಿದೆ.

ಜಗದೀಶ್
Biggboss ಮನೆಯಲ್ಲಿರುವ ಜಗದೀಶ್ ಇನ್ನುಂದೆ ಲಾಯರ್ ಅಲ್ಲ: ವಕೀಲಿ ಪರವಾನಗಿ ರದ್ದು ಮಾಡಿದ ಬಾರ್ ಕೌನ್ಸಿಲ್!

ಇಂಥ ಸಂದರ್ಭದಲ್ಲಿ ತಾವು ವಕೀಲರಲ್ಲದ ವ್ಯಕ್ತಿಯ ಹಿನ್ನೆಲೆಯನ್ನು ಪರಿಶೀಲಿಸದೆ ತಮ್ಮ ಟಿವಿ ಚಾನಲ್‌ನಲ್ಲಿ ಅವರನ್ನು ವಕೀಲರೆಂದು ಬಿಂಬಿಸುತ್ತಿರುವುದು ನಮ್ಮ ವಕೀಲ ವೃಂದಕ್ಕೆ ಬಹಳ ನೋವುಂಟು ಮಾಡಿರುತ್ತದೆ ಹಾಗೂ ಇದು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡುತ್ತದೆ. ಆದ ಕಾರಣ ನೀವು ಇನ್ನು ಮುಂದೆ ಕೆ.ಎನ್. ಜಗದೀಶ್ ಅವರನ್ನು ತಮ್ಮ ಚಾನಲ್‌ನಲ್ಲಿ ಪ್ರಸಾರವಾಗುವ ಬಿಗ್‌ಬಾಸ್-11ರ ಕಾರ್ಯಕ್ರಮದಲ್ಲಿ ವಕೀಲರೆಂದು ಬಿಂಬಿಸದಂದೆ ಮನವಿ ಮಾಡುತ್ತೇವೆ ಹಾಗೂ ಈ ವಿಷಯ ಕುರಿತಂತೆ ತಮ್ಮ ವಾಹಿನಿಯಲ್ಲಿ ಬಿಗ್ ಬಾಸ್ ಸೀಸನ್ 11ರಲ್ಲಿ ಭಾಗವಹಿಸಿರುವವರಿಗೂ ಸೂಕ್ತ ರೀತಿಯ ತಿಳುವಳಿಕೆ ನೀಡಬೇಕೆಂದು ಹಾಗೂ ಇದನ್ನು ಸರಿಪಡಿಸದೆ ಇದ್ದ ಪಕ್ಷದಲ್ಲಿ ನೊಂದ ವಕೀಲರ ಪರವಾಗಿ, ಬೆಂಗಳೂರು ವಕೀಲರ ಸಂಘವು ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳಲು ಮುಂದಾಗುತ್ತದೆ ಎಂದು ಈ ಮೂಲಕ ತಿಳಿಯಪಡಿಸಿದೆ ಎಂದು ಪತ್ರ ಬರೆಯಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com