
ನಾಯಕನಾಗಿ ನಟಿಸಿರುವ ನಿರ್ದೇಶಕ ಮತ್ತು ನಿರ್ಮಾಪಕ ಮಹೇಶ್ ಗೌಡ ಅವರು ಬಿಳಿಚುಕ್ಕಿ ಹಳ್ಳಿಹಕ್ಕಿ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದು, ಪೋಸ್ಟ್ ಪ್ರೊಡಕ್ಷನ್‌ನ ಅಂತಿಮ ಹಂತಕ್ಕೆ ಪ್ರವೇಶಿಸುತ್ತಿದ್ದಾರೆ.
ಚರ್ಮದ ಕಾಯಿಲೆ ತೊನ್ನು(vitiligo)ಸುತ್ತ ಸುತ್ತುವರೆಯುವ ಈ ವಿಶಿಷ್ಟ ಸಿನಿಮಾದ ಮೂಲಕ ಗಮನ ಸೆಳೆದಿರುವ ಮಹೇಶ್ ಗೌಡ ಅವರು ದಸರಾ ಹಬ್ಬದ ಸಂಭ್ರಮದಲ್ಲಿ ವಿಶೇಷ ಪೋಸ್ಟರ್ ಅನ್ನು ಸಹ ಬಿಡುಗಡೆ ಮಾಡಿದ್ದು, ಪ್ರೇಕ್ಷಕರ ಗಮನ ಸೆಳೆದಿದೆ.
ಈ ಚಿತ್ರವು ಭಾರತೀಯ ಚಿತ್ರರಂಗದಲ್ಲಿ ಒಂದು ಮಹತ್ವದ ಮೈಲಿಗಲ್ಲು ಎಂದು ಗುರುತಿಸಿಕೊಳ್ಳಲಿದೆ. ಏಕೆಂದರೆ ಇದು ವಿಟಲಿಗೋ ಅಂದರೆ, ತೊನ್ನಿನ ಭೂಮಿಕೆಯಲ್ಲಿ ತಯಾರಾದ ಚಿತ್ರ. "ಮೊದಲ ಬಾರಿಗೆ, ನಾವು ಈ ನಿರೂಪಣೆಯನ್ನು ಸತ್ಯಾಸತ್ಯತೆಯೊಂದಿಗೆ ಪ್ರತಿಧ್ವನಿಸುವ ರೀತಿಯಲ್ಲಿ ಚಿತ್ರೀಕರಿಸಿದ್ದೇವೆ" ಎಂದು ಪತ್ರಿಕಾ ಪ್ರಕಟಣೆಯಲ್ಲಿ ಮಹೇಶ್ ವಿವರಿಸಿದ್ದಾರೆ.
ವಿಟಲಿಗೋ ಸಮಸ್ಯೆ ಎದುರಿಸುತ್ತಿರುವವರು ಸಾಮಾಜಿಕ, ಕೌಟುಂಬಿಕ ಮತ್ತು ವೈಯಕ್ತಿಕ ಸವಾಲುಗಳನ್ನು ತೋರಿಸಲಾಗಿದೆ ಎಲ್ಲವೂ ಆಕರ್ಷಕ ಮತ್ತು ಮನರಂಜನೆಯ ರೋಮ್-ಕಾಮ್ ಅನುಭವವನ್ನು ನೀಡುತ್ತದೆ ಎಂದು ಅವರು ಹೇಳಿದ್ದಾರೆ.
ಸ್ವತಃ ವಿಟಲಿಗೋ ಸಮಸ್ಯೆಯಿಂದ ಬಳಲುವ ಮಹೇಶ್ ಅವರು, "ಬಿಳಿಚುಕ್ಕಿ ಹಳ್ಳಿಹಕ್ಕಿಯು ನಮ್ಮ ಜೀವನದೊಳಗಿನ ಸಂಬಂಧಗಳ ಮೇಲೆ ತಾಜಾತನವನ್ನನು ನೀಡುತ್ತದೆ. ಹಾಸ್ಯದೊಂದಿಗೆ ಸೂಕ್ಷ್ಮತೆಯನ್ನು ಸಮತೋಲನಗೊಳಿಸುತ್ತದೆ" ಎಂದು ಅವರು ಹಂಚಿಕೊಂಡಿದ್ದಾರೆ.
ರೊಮ್ಯಾಂಟಿಕ್ ಶೈಲಿಯಲ್ಲಿ ಸಾಗುವ ಈ ಚಿತ್ರದಲ್ಲಿ ಹಾಸ್ಯಕ್ಕೂ ಕೊರತೆ ಇಲ್ಲ. ನಿಖರವಾಗಿ ಹೇಳಬೇಕೆಂದರೆ ನಗಿಸುತ್ತಲೇ ಅಳಿಸುವ, ಬಹುಕಾಲ ಕಾಡುವ, ಎಲ್ಲ ವಯೋಮಾನದ, ಅಭಿರುಚಿಗಳ ಪ್ರೇಕ್ಷಕರಿಗೂ ಪಥ್ಯವಾಗುವಂತೆ ಈ ಚಿತ್ರವನ್ನು ಮಹೇಶ್ ಗೌಡ ರೂಪಿಸಿದ್ದಾರಂತೆ. ಎರಡು ಪಾತ್ರಗಳ ನಡುವಿನ ಬಂಧದ ಸುತ್ತಾ ಸಾಗೋ ಈ ಕಥನ ಪ್ರೇಕ್ಷಕರಿಗೆ ಬೇರೆಯದ್ದೇ ಥರದ ಫೀಲ್ ಕೊಡಲಿದೆ ಎಂಬ ನಂಬಿಕೆ ಮಹೇಶ್ ಗೌಡ ಅವರಲ್ಲಿದೆ.
ಹೊನುಡಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ರಿಯೋ ಆಂಟೋನಿ ಅವರ ಸಂಗೀತ ಮತ್ತು ಕಿರಣ್ ಸಿಎಚ್‌ಎಂ ಅವರ ಛಾಯಾಗ್ರಹಣವಿದೆ.
Advertisement