ಸೆನ್ಸೇಷನಲ್ ಸ್ಟಾರ್ ಕೋಮಲ್ ‘ಯಲಾಕುನ್ನಿ’ ಎನ್ನುತ್ತಾ ‘ವಜ್ರಮುನಿ’ಯಾಗಿ ತೆರೆಗೆ ಬರಲು ಸಜ್ಜಾಗುತ್ತಿದ್ದಾರೆ. ಯಲಾ ಕುನ್ನಿ ಸಿನಿಮಾ ಬಿಡುಗಡೆ ದಿನಾಂಕವನ್ನು ಚಿತ್ರ ತಂಡ ಘೋಷಿಸಿದೆ.
ಸೌಂದರ್ಯ ಸಿನಿ ಕಂಬೈನ್ಸ್ ಮತ್ತು ನರಸಿಂಹ ಸಿನಿಮಾಸ್ ನಿರ್ಮಿಸಿರುವ ಹಾಗೂ ಎನ್.ಆರ್. ಪ್ರದೀಪ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಸಿನಿಮಾ ಅಕ್ಟೋರ್ 25 ರಂದು ಥಿಯೇಟರ್ ಗಳಲ್ಲಿ ರಿಲೀಸ್ ಆಗಲಿದೆ. ಕೋಮಲ್ ಕುಮಾರ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾ ಟೈಟಲ್ ಅಡಿಯಲ್ಲಿ "ಮೇರಾ ನಾಮ್ ವಜ್ರಮುನಿ, ಎಂದು ಬರೆಯಲಾಗಿದ್ದು ಪ್ರೇಕ್ಷಕರನ್ನು, ವಿಶೇಷವಾಗಿ ವಜ್ರಮುನಿಯವರ ಅಭಿಮಾನಿಗಳನ್ನು ಸೆಳೆಯುವುದು ಖಚಿತ ಎಂದು ಹೇಳಲಾಗುತ್ತಿದೆ.
ಹಳ್ಳಿಗಾಡಿನ ಹಿನ್ನಲೆಯಲ್ಲಿ ಮೂಡಿಬಂದಿರುವ ಯಲಾ ಕುನ್ನಿ ಚಿತ್ರಕ್ಕೆ ಧರ್ಮ ವಿಶ್ ಅವರ ಸಂಗೀತ, ದೀಪು ಎಸ್ ಕುಮಾರ್ ಅವರ ಸಂಕಲನ ಮತ್ತು ಹಾಲೇಶ್ ಭದ್ರಾವತಿಯವರ ಛಾಯಾಗ್ರಹಣವಿದೆ. ಮುರಳಿ ಮಾಸ್ತರ್ ನೃತ್ಯ ನಿರ್ದೇಶನ ಮಾಡಿದ್ದು, ನರಸಿಂಹ ಮಾಸ್ಟರ್ ಸಾಹಸ ದೃಶ್ಯ ನಿರ್ವಹಿಸಿದ್ದಾರೆ. ತಾರಾಗಣದಲ್ಲಿ ಬಹುಮುಖ ಮತ್ತು ಅನುಭವಿ ನಟರಾದ ದತ್ತಣ್ಣ, ಸಾಧು ಕೋಕಿಲ, ಮಿತ್ರ, ಮತ್ತು ಸುಚೇಂದ್ರ ಪ್ರಸಾದ್, ಶಿವರಾಜ್ ಕೆ ಆರ್ ಪೇಟೆ, ತಬಲಾ ನಾಣಿ, ರಾಜು ತಾಳಿಕೋಟೆ, ಸುಮನ್ ನಗರ್ಕರ್, ಮಾನಸಿ ಸುಧೀರ್, ಯತಿರಾಜ್ ಜಗ್ಗೇಶ್, ಜಯಸಿಂಹ ಮುಸುರಿ, ರಘು ರಮಣಕೊಪ್ಪ, ಮಹಾಂತೇಶ್ ಮುಂತಾದವರು ನಟಿಸಿದ್ದಾರೆ. ಇವರ ಜೊತೆಗೆ, ವಜ್ರಮುನಿಯವರ ಮೊಮ್ಮಗ ಆಕರ್ಶ್, ನಟ ಮಯೂರ್ ಪಟೇಲ್ ಅಭಿನಯಿಸಿದ್ದಾರೆ.
Advertisement