
ಬಿಗ್ ಬಾಸ್ ಕನ್ನಡ 11 ಕಾರ್ಯಕ್ರಮದಲ್ಲಿ ಮೂರನೇ ವಾರವೇ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ‘ಬಿಗ್ ಬಾಸ್’ ಮನೆಯಲ್ಲಿ ಜಗಳ ತಾರಕಕ್ಕೇರಿದೆ. ಸ್ಪರ್ಧಿಗಳ ತಾಳ್ಮೆ, ಸಹನೆಯ ಮಿತಿ ಮೀರಿದ ಪರಿಣಾಮ ಜಗದೀಶ್ ಹೊರಬಿದ್ದಿದ್ದಾರೆ ಎನ್ನಲಾಗಿದೆ. ವಕೀಲ ಜಗದೀಶ್ ಜೊತೆಗೆ ಮತ್ತೋರ್ವ ಸ್ಪರ್ಧಿಯೂ ಔಟ್ ಆಗಿದ್ದಾರಂತೆ.‘ಶನಿ’ ಸೀರಿಯಲ್‌ನ ಸೂರ್ಯದೇವ ಖ್ಯಾತಿಯ ರಂಜಿತ್ ಕೂಡ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ ಎನ್ನಲಾಗಿದೆ.
ಬಿಗ್ ಬಾಸ್’ ಮನೆಯಲ್ಲಿ ಜಗದೀಶ್ ಮತ್ತು ರಂಜಿತ್ ಮಧ್ಯೆ ಮಾರಾಮಾರಿ ನಡೆದಿದ್ಯಂತೆ. ಪರಿಣಾಮ, ರೂಲ್ಸ್ ಅನ್ವಯ ಇಬ್ಬರನ್ನೂ ಹೊರದಬ್ಬಲಾಗಿದೆ ಅಂತ ಹೇಳಲಾಗುತ್ತಿದೆ. ಶಿಶಿರ್ ಮನೆ ಕ್ಯಾಪ್ಟನ್ ಆದ ಕ್ಷಣದಿಂದ ಲಾಯರ್ ಜಗದೀಶ್ ಮೂಲೆ ಗುಂಪಾಗಿದ್ದರು.
ಇತರೆ ಸ್ಪರ್ಧಿಗಳ ಒಂದು ಗುಂಪು ಮಾಡಿಕೊಂಡು, ಸಣ್ಣ ಪುಟ್ಟ ವಿಚಾರಕ್ಕೂ ಜಗಳವಾಡುತ್ತಿದ್ದರು. ಎರಡು ಮೂರು ಸಲ ರಂಜಿತ್ ಕೂಡ ಪರೋಕ್ಷವಾಗಿ ಬೆದರಿಕೆ ಹಾಕಿದ್ದರು. ಮಾನಸ ಅವರ ವಿಚಾರದಲ್ಲಿ ಜಗದೀಶ್ ಅವರು ಮಧ್ಯ ಮಾತನಾಡಿದ ಸಂದರ್ಭದಲ್ಲಿ ರಂಜಿತ್, ಜಗದೀಶ್ ನಡುವೆ ಮಾತಿನ ಚಕಮಕಿ ನಡೆದಿದೆ. ಇದು ಹಲ್ಲೆ ಮಾಡುವವರೆಗೂ ಹೋಗಿದೆ. ಇಬ್ಬರು ಈ ಸಂದರ್ಭದಲ್ಲಿ ಹೊಡೆದಾಡಿಕೊಂಡಿದ್ದು, ನಿಯಮದ ಉಲ್ಲಂಘನೆ ಆದ ಕಾರಣ ಇಬ್ಬರನ್ನೂ ಮನೆಯಿಂದ ಆಚೆ ಕಳುಹಿಸಲಾಗಿದೆ ಎನ್ನಲಾಗುತ್ತಿದೆ.
ಆದರೆ ರಂಜಿತ್ ಮತ್ತು ಜಗದೀಶ್ ಹೊರ ಬಂದಿರುವ ಫೋಟೋ ಅಥವಾ ವಿಡಿಯೋ ಸಾಕ್ಷಿಯೂ ಸಿಕ್ಕಿಲ್ಲ. ವಾಹಿನಿಯವರು ಕೂಡ ಯಾವುದೇ ಸ್ಪಷ್ಟನೆ ನೀಡಿಲ್ಲ, ಹೀಗಾಗಿ ಹೊರಗಿನಿಂದ ಪಬ್ಲಿಸಿಟಿ ಸಿಗಬೇಕು ಎಂದು ಜಗದೀಶ್ ತಂಡದವರು ಈ ಗೇಮ್ ಪ್ಲ್ಯಾನ್ ಮಾಡಿರಬಹುದು ಎಂಬ ಗೊಂದಲವಿದೆ.
Advertisement