ಬಹುಮುಖಿ ನಟ ಮತ್ತು ಕೃಷಿಕ, ಕನ್ನಡ ಚಿತ್ರರಂಗದ ಜೊತೆಗೆ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಕಿಶೋರ್ ಅವರು ಬಾಲಿವುಡ್‌ನತ್ತ ದಾಪುಗಾಲು ಹಾಕಲು ಪ್ರಾರಂಭಿಸಿದ್ದಾರೆ.
ಬಹು ಭಾಷೆಗಳಲ್ಲಿ ತಯಾರಾದ ಡ್ರೈವ್ ಎಂಬ ಹಿಂದಿ ಚಲನಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ ನಂತರ, ಅವರು ನವಾಜುದ್ದೀನ್ ಸಿದ್ದಿಕಿ ಅವರೊಂದಿಗೆ ಮತ್ತೊಂದು ಹಿಂದಿ ಪ್ರಾಜೆಕ್ಟ್ ನಲ್ಲಿ ಭಾಗಿಯಾಗಿದ್ದಾರೆ. ಆ ಸಿನಿಮಾ ಇನ್ನೂ ಬಿಡುಗಡೆಯಾಗಬೇಕಿದೆ. ಕಿಶೋರ್ ಅವರು AR ಮುರುಗದಾಸ್ ಅವರ ಬಹು ನಿರೀಕ್ಷಿತ ಚಿತ್ರ ಸಿಕಂದರ್‌ನ ಭಾಗವಾಗಿದ್ದಾರೆ, ಇದನ್ನು ಸಾಜಿದ್ ನಾಡಿಡ್ವಾಲಾ ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಕಿಶೋರ್ ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ.
ಮೂಲಗಳ ಪ್ರಕಾರ ಕಿಶೋರ್ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ. ಈಗಾಗಲೇ ಅವರ ದೃಶ್ಯಗಳ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ, ಆದರೆ ಈ ಸಂಬಂಧ ಚಲನಚಿತ್ರ ನಿರ್ದೇಶಕರಿಂದ ಅಧಿಕೃತ ದೃಢೀಕರಣ ಇನ್ನೂ ಬಾಕಿ ಉಳಿದಿದೆ. ಸಿಕಂದರ್‌ನ ಸಮಗ್ರ ಪಾತ್ರವರ್ಗದಲ್ಲಿ ಸುನೀಲ್ ಶೆಟ್ಟಿ, ಪ್ರತೀಕ್ ಬಬ್ಬರ್, ಚೈತನ್ಯ ಚೌಧರಿ ಮತ್ತು ನವಾಬ್ ಶಾ ಕೂಡ ಇದ್ದಾರೆ. ಜೈಲರ್ ಮತ್ತು ವೆಟ್ಟೈಯಾನ್‌ನಂತಹ ಮನರಂಜನಾ ಚಿತ್ರಗಳು ಸೇರಿದಂತೆ ರಜನಿಕಾಂತ್ ಅವರ ಹಲವು ಸಿನಿಮಾಗಳಲ್ಲಿ ಕಿಶೋರ್ ಕಾಣಿಸಿಕೊಂಡಿದ್ದಾರೆ. ಲೋಕೇಶ್ ಕನಕರಾಜ್ ನಿರ್ದೇಶನದ ಮುಂಬರುವ ಕೂಲಿ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ. ನಟ ವಿಕ್ರಮ್ ನಿರ್ದೇಶನದ 5 ಎಂಬ ಹಾರರ್ ಚಲನಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಯಕ್ಷಗಾನ ಆಧರಿಸಿದ ಸಿನಿಮಾವಾಗಿದೆ.
Advertisement