ಪುಷ್ಪಕ ವಿಮಾನ ಮತ್ತು ಮಾನ್ಸೂನ್ ರಾಗ ಸಿನಿಮಾ ನಿರ್ಮಾಪಕ ವಿಖ್ಯಾತ್ ಎ ಆರ್, ನಟರಾದ ರಮೇಶ್ ಅರವಿಂದ್ ಮತ್ತು ಗಣೇಶ್ ಅವರನ್ನು ಒಳಗೊಂಡ ಚೊಚ್ಚಲ ಸಿನಿಮಾ ನಿರ್ದೇಶನವನ್ನು ಮಾಡುವ ತಮ್ಮ ದಶಕದ ಕನಸನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ಇಮ್ಮೂ ಹೆಸರಿಡದ ಚಿತ್ರದ ಪೋಸ್ಟರ್ ಈಗಾಗಲೇ ಆಸಕ್ತಿಯನ್ನು ಹುಟ್ಟುಹಾಕಿದೆ.
ಗಣೇಶ್ ಮತ್ತು ರಮೇಶ್ ಅವರ ಸಿನಿಮಾದ ಹೆಸರು ಇನ್ನು ಇಟ್ಟಿಲ್ಲ. ಪ್ರೊಡಕ್ಷನ್ ನಂಬರ್-6 ಅನ್ನೋದನ್ನ ಮಾತ್ರ ಈಗ ಇಟ್ಟಿದ್ದಾರೆ. ಆದರೆ, ಗಣೇಶ್ ಮತ್ತು ರಮೇಶ್ ಅರವಿಂದ್ ಅವರ ಪಾತ್ರ ಒಂದು ಸಣ್ಣ ಝಲಕ್ ಈಗಾಗಲೇ ರಿವೀಲ್ ಆಗಿದೆ. ವಿದೇಶದಲ್ಲಿ ಸೈನಿಕರಾಗಿ ರಮೇಶ್ ಅರವಿಂದ್ ಮತ್ತು ಗಣೇಶ್ ನಟಿಸಿದ್ದಾರೆ. ಸರ್ಕಸ್ ಹಿನ್ನೆಲೆಯೂ ಪೋಸ್ಟರ್ ನಲ್ಲಿದೆ. ಅದ್ಭುತ ಕಥೆಯೊಂದಿಗೆ ಭಾವನಾತ್ಮಕ ಪ್ರಯಾಣವು ಚಿತ್ರದಲ್ಲಿದೆ. ಸತ್ಯ ರಾಯಲ ನಿರ್ಮಾಣದ ಈ ಚಿತ್ರವು ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಸೆಪ್ಟೆಂಬರ್ 6 ರಂದು ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಚಿತ್ರದ ಮುಹೂರ್ತ ನಡೆಯಲಿದ್ದು ಫಸ್ಟ್ರ್ ಟೀಸರ್ ಬಿಡುಗಡೆಯಾಗಲಿದೆ.
ಚಿತ್ರವು ಘೋಷಣೆಯಾದಾಗಿನಿಂದ ಭಾರೀ ನಿರೀಕ್ಷೆ ಹುಟ್ಟುಹಾಕುವುದರೊಂದಿಗೆ, ಚಿತ್ರ ನಿರ್ಮಾಣ ಪ್ರಾರಂಭಿಸುವ ಮೊದಲೇ ಚಿತ್ರದ ಆಡಿಯೊ ಹಕ್ಕುಗಳನ್ನು ಆನಂದ್ ಆಡಿಯೊಗೆ ದಾಖಲೆ ಬೆಲೆಗೆ ಮಾರಾಟ ಮಾಡಲಾಗಿದೆ. ಕೃಷ್ಣಂ ಪ್ರಣಯ ಸಖಿ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಬಂದಿದೆ. ಬಾಕ್ಸ್ ಆಫೀಸ್‌ನಲ್ಲಿ ಚೆನ್ನಾಗಿಯೇ ಕಲೆಕ್ಷನ್ ಕೂಡ ಮಾಡಿ, ಇದೇ ರೀತಿಯೇ ಈ ಸಿನಿಮಾವು ಇರಲಿದೆ ಎಂದು ಭರವಸೆ ಮೂಡಿಸಿದೆ. ಪ್ರಸ್ತುತ ಕೃಷ್ಣಂ ಪ್ರಣಯ ಸಖಿ ಚಿತ್ರದ ಯಶಸ್ಸನ್ನು ಆನಂದಿಸುತ್ತಿರುವ ಗಣೇಶ್, ಈ ತಿಂಗಳು ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಲು ನಿರ್ಧರಿಸಿದ್ದಾರೆ. ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಸಂಯೋಜಿಸಲಿದ್ದು, ನವೀನ್ ಕುಮಾರ್ ಛಾಯಾಗ್ರಹಣವನ್ನು ನಿಭಾಯಿಸಲಿದ್ದಾರೆ. ನಾಯಕಿ ಸೇರಿದಂತೆ ಉಳಿದ ಪಾತ್ರವರ್ಗವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ.
Advertisement