ಬಹುಭಾಷೆಯಲ್ಲಿ ಮೂಡಿ ಬರಲಿದೆ 'ಗದಾಧಾರಿ ಹನುಮಾನ್'

ಕನ್ನಡ, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಸಿದ್ದಗೊಳ್ಳುತ್ತಿರುವ ಈ ಚಿತ್ರಕ್ಕೆ ರೋಹಿತ್ ಕೊಲ್ಲಿ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ವಿರಭ್ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಬಸವರಾಜ್ ಹುರಕಡ್ಲಿ ಮತ್ತು ರೇಣುಕ ಪ್ರಸಾದ್.ಕೆ.ಆರ್ ಜಂಟಿಯಾಗಿ ಬಂಡವಾಳ ಹೂಡುತ್ತಿದ್ದಾರೆ.
ನಟ ರವಿ
ನಟ ರವಿ
Updated on

ಹನುಮಂತನ ಸಾಹಸಗಾಥೆಯನ್ನು ಹೊಂದಿರುವ ‘ಗದಾಧಾರಿ ಹನುಮಾನ್ ’ ಚಿತ್ರದ ಶೀರ್ಷಿಕೆ ಮತ್ತು ಪೋಸ್ಟರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಕನ್ನಡ, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಸಿದ್ದಗೊಳ್ಳುತ್ತಿರುವ ಈ ಚಿತ್ರಕ್ಕೆ ರೋಹಿತ್ ಕೊಲ್ಲಿ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ವಿರಭ್ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಬಸವರಾಜ್ ಹುರಕಡ್ಲಿ ಮತ್ತು ರೇಣುಕ ಪ್ರಸಾದ್.ಕೆ.ಆರ್ ಜಂಟಿಯಾಗಿ ಬಂಡವಾಳ ಹೂಡುತ್ತಿದ್ದಾರೆ.

ಹಲವು ಯುಗಗಳಲ್ಲಿ ವಿವಿಧ ರಾಕ್ಷಸರನ್ನು ಸಂಹಾರ ಮಾಡಲಾಗಿದೆ. ಆದರೆ ರಾಕ್ಷಸ ಶಕ್ತಿ ಜೀವಂತವಾಗಿದ್ದು, ಸಾಮಾನ್ಯ ಮನುಷ್ಯನೊಬ್ಬ ಅದನ್ನು ಸದೆಬಡಿಯುವ ಕತೆ ಇದೆ. ಒಟ್ಟಾರೆ ಸಿನಿಮಾವು ಸಾಹಸ, ಡ್ರಾಮಾ, ಹಾರರ್, ಥ್ರಿಲ್ಲರ್, ಕಾಮಿಡಿ ಹಾಗೂ ದೈವತ್ವದ ಸನ್ನಿವೇಶಗಳನ್ನು ಹೊಂದಿದೆ’ ಎಂದರು ನಿರ್ದೇಶಕರು.

‘ತಾರಕಾಸುರ’ ಖ್ಯಾತಿಯ ರವಿ ಈ ಚಿತ್ರದ ನಾಯಕ. ಹೊಸ ಪ್ರತಿಭೆ ಹರ್ಷಿತಾ ನಾಯಕಿ. ಕಲ್ಯಾಣ್ ಕೃಷ್ಣ, ರಮೇಶ್ ಪಂಡಿತ್, ಸುನಂದ ಕಲ್ಬುರ್ಗಿ, ನಾಗೇಶ್ ಮಯ್ಯ ಮುಂತಾದವರು ನಟಿಸುತ್ತಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತ, ಅರುಣ್ ಗೌಡ ಛಾಯಾಚಿತ್ರಗ್ರಹಣ , ಸಿ.ಎನ್.ಕಿಶೋರ್ ಸಂಕಲನ ಚಿತ್ರಕ್ಕಿದೆ. ಬೆಂಗಳೂರು, ಚಿತ್ರದುರ್ಗ, ಗಂಗಾವತಿ, ಹಂಪಿ, ಅಂಜನಾದ್ರಿಬೆಟ್ಟ, ಕಿತ್ತೂರು ಮೊದಲಾದೆಡೆ ನಾಲ್ಕು ಹಂತಗಳಲ್ಲಿ ಚಿತ್ರೀಕರಣಗೊಳ್ಳಲಿದೆ. 2024ರ ಜನವರಿಗೆ ತೆಲುಗಿನ ‘ಹನುಮಾನ್​’ ಸಿನಿಮಾ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿ ಧೂಳೆಬ್ಬಿಸಿತು. ಆ ಸಿನಿಮಾದಲ್ಲಿ ಸೂಪರ್​ ಹೀರೋ ಕಹಾನಿ ಇತ್ತು. ಈಗ ‘ಗದಾಧಾರಿ ಹನುಮಾನ್’ ಸಿನಿಮಾ ಕೂಡ ಅದೇ ರೀತಿ ಒಂದು ಡಿಫರೆಂಟ್​ ಕಥೆಯನ್ನು ಹೊಂದಿರಲಿದೆ.

ನಟ ರವಿ
'ಪಾರು ಪಾರ್ವತಿ' ಪಾತ್ರವು ನನ್ನ ಜೀವನದೊಂದಿಗೆ ಹೊಂದಿಕೊಳ್ಳುತ್ತದೆ: ಕಮ್ ಬ್ಯಾಕ್ ಸಿನಿಮಾ ಬಗ್ಗೆ ದೀಪಿಕಾ ಮಾತು

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com