ಪ್ಯಾನ್ ಇಂಡಿಯಾ ಸಿನಿಮಾವಾಗಿ ತಯಾರಾಗುತ್ತಿದೆ 'ಗಾಂಗೇಯ'!

ತೆಲುಗು ಸಿನೆಮಾ ರಂಗದಲ್ಲಿ ಈಗಾಗಲೇ 10ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿರುವ ಗಗನ್ 'ಗಾಂಗೇಯ' ಸಿನೆಮಾದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ರಣಧೀರ್, ತೇಜಾಂಕ್, ಸುಮನ್ ಪ್ರಮುಖ ತಾರಾಗಣದಲ್ಲಿದ್ದಾರೆ.
ಪ್ಯಾನ್ ಇಂಡಿಯಾ ಸಿನಿಮಾವಾಗಿ ತಯಾರಾಗುತ್ತಿದೆ 'ಗಾಂಗೇಯ'!
Updated on

ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಏಕಕಾಲಕ್ಕೆ 'ಗಾಂಗೇಯ' ಸಿನೆಮಾ ತಯಾರಾಗುತ್ತಿದ್ದು, ಚಿತ್ರೀಕರಣ ಭರದಿಂದ ಸಾಗಿದೆ. ಇತ್ತೀಚಿಗೆ ನಡೆದ ಸಮಾರಂಭದಲ್ಲಿ ಸಿನೆಮಾದ ಹಾಡುಗಳನ್ನು ಬಿಡುಗಡೆ ಮಾಡಲಾಯಿತು. ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್ ಎಂ ಸುರೇಶ್,ಕನ್ನಡ ಅವತರಣಿಕೆಯ ಹಾಡುಗಳನ್ನು ಬಿಡುಗಡೆ ಮಾಡಿ ಶುಭಕೋರಿದರು.

ತೆಲುಗು ಸಿನೆಮಾ ರಂಗದಲ್ಲಿ ಈಗಾಗಲೇ 10ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿರುವ ಗಗನ್ 'ಗಾಂಗೇಯ' ಸಿನೆಮಾದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ರಣಧೀರ್, ತೇಜಾಂಕ್, ಸುಮನ್ ಪ್ರಮುಖ ತಾರಾಗಣದಲ್ಲಿದ್ದಾರೆ. ವಿಜಯಶೇಖರ್ ರೆಡ್ಡಿ, ರಾಮಚಂದ್ರ ಶ್ರೀನಿವಾಸಕುಮಾರ್ ನಿರ್ಮಾಣ ಮಾಡಿದ್ದಾರೆ. ರಾಪ್ ರಾಕ್ ಶಕೀಲ್ ಸಂಗೀತ, ಅದುಸುಮಿಲಿ ವಿಜಯ್ ಕುಮಾರ್ ಛಾಯಾಗ್ರಹಣ,ಕೋಟಗಿ ವೆಂಕಟೇಶ ರಾವ್ ಸಂಕಲನ ಸಿನೆಮಾಕ್ಕಿದೆ. ಪ್ರಸಕ್ತ ದಿನಗಳಲ್ಲಿ ಸಮಾಜದಲ್ಲಿ ಜಾತಿ,ಧರ್ಮಗಳ ಸಂಘರ್ಷ ಹೆಚ್ಚುತ್ತಿದೆ. ಸರ್ವ ಜಾತಿ,ಧರ್ಮಗಳ ಸಮನ್ವಯತೆ ಸಾರುವ ಉದ್ದೇಶದಿಂದ 'ಗಾಂಗೇಯ' ಸಿನೆಮಾ ಮಾಡಲಾಗಿದೆ ಎಂದು ನಿರ್ದೇಶಕ ಎಂ.ರಾಮಚಂದ್ರ ಶ್ರೀನಿವಾಸಕುಮಾರ್ ಹೇಳಿದ್ದಾರೆ. ಗ್ರಾಮೀಣ ಪ್ರದೇಶದ ಯುವಕರು ಕೆಲಸ ಮಾಡಲು ನಗರಕ್ಕೆ ಬಂದಾಗ ಸಂಭವಿಸುವ ಘಟನೆಗಳೇ ಸಿನೆಮಾದ ಕಥಾವಸ್ತು. ಕರ್ನಾಟಕ, ಆಂದ್ರ, ಕೇರಳದಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಏಕಕಾಲಕ್ಕೆ ಎಲ್ಲಾ ಭಾಷೆಗಳಲ್ಲೂ ಬಿಡುಗಡೆ ಮಾಡುವ ಯೋಜನೆಯಿದೆ ಎಂದರು.

ನಿರ್ದೇಶಕ ಎಂ ರಾಮಚಂದ್ರ ಶ್ರೀನಿವಾಸ್ ಕುಮಾರ್ ಅವರು ಗಣಿತಶಾಸ್ತ್ರದ ಮಾಜಿ ಪ್ರಾಧ್ಯಾಪಕರು ಮತ್ತು ಪ್ರಸಿದ್ಧ ಜ್ಯೋತಿಷಿಗಳಾಗಿದ್ದಾರೆ, ಅವರು 56 ಶಾಸಕರು, 13 ಸಚಿವರು ಮತ್ತು ಇಬ್ಬರು ಮಾಜಿ ಮುಖ್ಯಮಂತ್ರಿಗಳ ಬಗ್ಗೆ ಭವಿಷ್ಯ ನುಡಿದ ಖ್ಯಾತಿ ಹೊಂದಿದ್ದಾರೆ. ಯುವಕಲಾವಿದರು ಹಾಗೂ ತಂತ್ರಜ್ಞರಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಸಂಸ್ಥೆ ಹುಟ್ಟುಹಾಕಲಾಗಿದೆ.ನಮ್ಮ ವಿಜಯ ಗೌತಮಿ ಆರ್ಟ್ ಮೂವೀಸ್ ಸಂಸ್ಥೆವತಿಯಿಂದ ವರ್ಷಕ್ಕೆ 10ಸಿನೆಮಾ ಮಾಡುವುದಾಗಿ ನಿರ್ದೇಶಕ, ನಿರ್ಮಾಪಕ, ರಾಮಚಂದ್ರ ಶ್ರೀನಿವಾಸ ಕುಮಾರ್ ಘೋಷಿಸಿದ್ದಾರೆ.

ಪ್ಯಾನ್ ಇಂಡಿಯಾ ಸಿನಿಮಾವಾಗಿ ತಯಾರಾಗುತ್ತಿದೆ 'ಗಾಂಗೇಯ'!
ಚಂದನ್ ಶೆಟ್ಟಿ - ನಿವೇದಿತಾ ಗೌಡ ಸಿನಿಮಾಗೆ ಟೈಟಲ್ 'ಮುದ್ದು ರಾಕ್ಷಸಿ'!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com