ಅಭಿಷೇಕ್ ಪತ್ನಿ ಅವಿವಾಗೆ ಸೀಮಂತ ಶಾಸ್ತ್ರ: ಅಂಬಿ ಕುಟುಂಬದಲ್ಲಿ ಸಂಭ್ರಮ

ತುಂಬು ಗರ್ಭಿಣಿಯಾಗಿರುವ ಅವಿವಾ ಬಿದ್ದಪ್ಪರಿಗೆ ಅಂಬಿ ನಿವಾಸದಲ್ಲಿಯೇ ಸರಳವಾಗಿ ಸೀಮಂತ ಶಾಸ್ತ್ರ ಮಾಡಲಾಗಿದ್ದು, ಅಂಬಿ ಕುಟುಂಬದ ಆಪ್ತರು, ನಟ ನಟಿಯರು ಭಾಗಿಯಾಗಿದ್ದರು. ಪ್ರಿಯಾಂಕ ಉಪೇಂದ್ರ ಸೇರಿದಂತೆ ಚಲನಚಿತ್ರದ ಹಲವು ಗಣ್ಯರು ಅವಿವಾ ಬಿದ್ದಪ್ಪ ಸೀಮಂತ ಶಾಸ್ತ್ರಕ್ಕೆ ಸಾಕ್ಷಿಯಾಗಿದ್ದರು.
ಅವಿವಾ ಬಿದ್ದಪ್ಪ ಸೀಮಂತ ಶಾಸ್ತ್ರ
ಅವಿವಾ ಬಿದ್ದಪ್ಪ ಸೀಮಂತ ಶಾಸ್ತ್ರ
Updated on

ಬೆಂಗಳೂರು: ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಜೊಡಿ ಸದ್ಯದಲ್ಲಿಯೇ ಮಗುವಿನ ಆಗಮನ ನಿರೀಕ್ಷೆಯಲ್ಲಿದ್ದಾರೆ. ಅಂಬರೀಶ್ ಕುಟುಂಬ ಅವಿವಾ ಬಿದ್ದಪ್ಪಗೆ ಸೀಮಂತ ಶಾಸ್ತ್ರ ಮಾಡಿದ್ದಾರೆ.

ತುಂಬು ಗರ್ಭಿಣಿಯಾಗಿರುವ ಅವಿವಾ ಬಿದ್ದಪ್ಪರಿಗೆ ಅಂಬಿ ನಿವಾಸದಲ್ಲಿಯೇ ಸರಳವಾಗಿ ಸೀಮಂತ ಶಾಸ್ತ್ರ ಮಾಡಲಾಗಿದ್ದು, ಕುಟುಂಬದ ಆಪ್ತರು, ನಟ ನಟಿಯರು ಭಾಗಿಯಾಗಿದ್ದರು. ಪ್ರಿಯಾಂಕ ಉಪೇಂದ್ರ ಸೇರಿದಂತೆ ಚಲನಚಿತ್ರದ ಹಲವು ಗಣ್ಯರು ಅವಿವಾ ಬಿದ್ದಪ್ಪ ಸೀಮಂತ ಶಾಸ್ತ್ರಕ್ಕೆ ಸಾಕ್ಷಿಯಾಗಿದ್ದರು.

ಅವಿವಾ ಬಿದ್ದಪ್ಪ ಸೀಮಂತ ಶಾಸ್ತ್ರ
ಅಭಿಷೇಕ್ ಅಂಬರೀಷ್- ಅವಿವಾ ಸಂಗೀತ್ ಕಾರ್ಯಕ್ರಮ; ಯಶ್, ದರ್ಶನ್ ಸೇರಿ ತಾರೆಯರು ಭಾಗಿ

ಕಾರ್ಯಕ್ರಮದಲ್ಲಿ ಹಸಿರು ಮತ್ತು ಚಿನ್ನದ ಬಣ್ಣದ ಸೀರೆಯಲ್ಲಿ ಅವಿವಾ ಮಿಂಚುತ್ತಿದ್ದರು. ಕೆಲವೇ ಕೆಲವು ಅತಿಥಿಗಳು ಕಾರ್ಯಕ್ರಮದಲ್ಲಿ ಹಾಜರಾಗಿದ್ದು ಕೆಲವು ಫೋಟೋಗಳು ವೈರಲ್ ಆಗಿವೆ. ಅಕ್ಟೋಬರ್ ವೇಳೆಗೆ ಅಭಿ ಹಾಗೂ ಅವಿವಾ ಬಾಳಿನಲ್ಲಿ ಪುಟ್ಟ ಮಗುವಿನ ಆಗಮನವಾಗಲಿದೆ.

'ರೆಬೆಲ್ ಸ್ಟಾರ್' ಅಂಬರೀಶ್ ಅವರ ಪುತ್ರ ಹಾಗೂ ನಟ ಅಭಿಷೇಕ್ ಅಂಬರೀಶ್ ಅವರು ಕಳೆದ ವರ್ಷ ಜೂನ್ 7ರದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಪುತ್ರಿ ಅವಿವಾ ಬಿದ್ದಪ್ಪ ಜೊತೆಗೆ ವಿವಾಹವಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com