ಕರಾವಳಿ ಪ್ರೇಮಕತೆ 'ಮಾರ್ನಮಿ'ಯಲ್ಲಿ ನಟ ರಿತ್ವಿಕ್‌ ಮಠದ್‌ಗೆ ಚೈತ್ರಾ ಆಚಾರ್‌ ಜೋಡಿ

ರಾಷ್ಟ್ರಪ್ರಶಸ್ತಿ ಪಡೆದಿರುವ ಪ್ರೀತಂ ಆರ್ ಶೆಟ್ಟಿ ಗರಡಿಯಲ್ಲಿ ಪಳಗಿರುವ ರಿಷಿತ್ ಶೆಟ್ಟಿ ನಿರ್ದೇಶನದ ಈ ಕರಾವಳಿ ಪ್ರೇಮಕಥೆಗೆ ಚರಣ್ ರಾಜ್ ಸಂಗೀತವಿದೆ. ಅಕ್ಟೋಬರ್ 1 ರಂದು ಮಂಗಳೂರಿನಲ್ಲಿ ಚಿತ್ರದ ಶೂಟಿಂಗ್ ಪ್ರಾರಂಭವಾಗಲಿದೆ.
ರಿತ್ವಿಕ್‌ ಮಠ್ ಮತ್ತು ಚೈತ್ರಾ ಆಚಾರ್‌
ರಿತ್ವಿಕ್‌ ಮಠ್ ಮತ್ತು ಚೈತ್ರಾ ಆಚಾರ್‌
Updated on

ರಿತ್ವಿಕ್ ಮತ್ತು ಚೈತ್ರ ಆಚಾರ್ ಮುಖ್ಯ ಭೂಮಿಕೆಯಲ್ಲಿರುವ ಮಾರ್ನಮಿ ಚಿತ್ರದ ಟೈಟಲ್ ಟೀಸರ್ ಇದೀಗ ಬಿಡುಗಡೆಯಾಗಿದೆ.

ರಾಷ್ಟ್ರಪ್ರಶಸ್ತಿ ಪಡೆದಿರುವ ಪ್ರೀತಂ ಆರ್ ಶೆಟ್ಟಿ ಗರಡಿಯಲ್ಲಿ ಪಳಗಿರುವ ರಿಷಿತ್ ಶೆಟ್ಟಿ ನಿರ್ದೇಶನದ ಈ ಕರಾವಳಿ ಪ್ರೇಮಕಥೆಗೆ ಚರಣ್ ರಾಜ್ ಸಂಗೀತವಿದೆ. ಅಕ್ಟೋಬರ್ 1 ರಂದು ಮಂಗಳೂರಿನಲ್ಲಿ ಚಿತ್ರದ ಶೂಟಿಂಗ್ ಪ್ರಾರಂಭವಾಗಲಿದೆ. ಈ ಹೊಸ ತಂಡದ ಭಾಗವಾಗಲು ನಾನು ಥ್ರಿಲ್ ಆಗಿದ್ದೇನೆ" ಎಂದು ಚರಣ್ ರಾಜ್ ಹಂಚಿಕೊಂಡಿದ್ದಾರೆ."ಈ ಚಿತ್ರದ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಒಂದು ಕಥೆ. ಚೆನ್ನಾಗಿ ಎಳೆದುಕೊಂಡು ಬಂದಿದ್ದು ರಿಶಿತ್ ಶೆಟ್ಟಿ. ನಮಗೆ ಬೇಕು ಅಂದಿದೆಲ್ಲ ಕೊಡುತ್ತಿರುವುದು, ನಮಗೆ ಸಪೋರ್ಟ್ ಮಾಡುತ್ತಿರುವುದು ನಿರ್ಮಾಪಕ ನಿಶಾಂತ್ ಸರ್. ಇಂತಹ ನಿರ್ಮಾಪಕರು ಅಪರೂಪ. ಈ ರೀತಿ ನಿರ್ಮಾಪಕರು ಇಂಡಸ್ಟ್ರೀಗೆ ಸಿಗಬೇಕು. ಇವರು ಗೆದ್ದರೆ ಮತ್ತಷ್ಟು ಸಿನಿಮಾಗಳು ಮಾಡುತ್ತಾರೆ. ಕಥೆ ಚೆನ್ನಾಗಿದೆ. ಕರಾವಳಿ ಭಾಗದಲ್ಲಿ ನಡೆಯುವ ಅದ್ಭುತ ಲವ್ ಸ್ಟೋರಿ. ದಸರಾ ದಿನವನ್ನು ಮಾರ್ನಮಿ ಎಂದು ಕರೆಯುತ್ತಾರೆ ಎಂದರು ರಿತ್ವಿಕ್.

ಹೊಸ ತಂಡ ಹೊಸ ನಿರ್ದೇಶಕರು. ಈ ತಂಡದಲ್ಲಿ ನನ್ನ ಅಚ್ಚುಮೆಚ್ಚಿನ ನಟರು ಎಲ್ಲಾ ಇದ್ದಾರೆ. ತುಂಬಾ ಒಳ್ಳೆ ಕಥೆ. ನನಗೂ ಒಳ್ಳೆ ಅವಕಾಶ ಇದೆ ಎನಿಸಿತು. ನನಗೂ ಅವಕಾಶ ಪಡೆದುಕೊಂಡಿದ್ದೇನೆ. ಸಂಗೀತದ ಕೆಲಸ ಶುರು ಮಾಡಿದ್ದೇವೆ. ಟೈಟಲ್ ಟೀಸರ್ ಮಾಡಿದ್ದೇವೆ. ಹಾಡುಗಳ ಕಂಪೋಸ್ ಮಾಡಲು ಶುರು ಮಾಡಿದ್ದೇವೆ. ಇಷ್ಟೇ ಸಾಂಗ್ ಇದೆ ಅಂತಾ ಡಿಸೈಡ್ ಮಾಡಿಲ್ಲ. ಆದರೆ ಐದು ಹಾಡುಗಳು ಇರುತ್ತವೆ ಎಂದು ಸಂಗೀತ ನಿರ್ದೇಶಕ ಚರಣ್ ರಾಜ್ ತಿಳಿಸಿದ್ದಾರೆ. ಚಿತ್ರದ ಟೈಟಲ್ ಟೀಸರ್ ಗುನಾಧ್ಯ ಪ್ರೊಡಕ್ಷನ್ಸ್ ಯೂಟ್ಯೂಬ್ ಚಾನೆಲ್ ಬಿಡುಗಡೆಯಾಗಿದ್ದು, ಟೀಸರ್ ಪ್ರಾಮಿಸಿಂಗ್ ಆಗಿದೆ. ಕರಾವಳಿ ಭಾಗದ ಹುಲಿವೇಷದ ಹಿನ್ನೆಲೆ ಹಾಗೂ ಹುಲಿವೇಷ ಸಂಸ್ಕೃತಿಯ ಎಳೆ ಚಿತ್ರದಲ್ಲಿ ಇರಲಿದೆ. ಚೆಂದದ ಲವ್ ಸ್ಟೋರಿ ಜೊತೆಗೆ ಆಕ್ಷನ್, ಎಮೋಷನ್, ಕಾಮಿಡಿ ಮಿಶ್ರಣದ ಮಾರ್ನಮಿ ಚಿತ್ರವನ್ನು ಶಿಲ್ಪಾ ನಿಶಾಂತ್ ನಿರ್ಮಾಣ ಮಾಡುತ್ತಿದ್ದಾರೆ.

ಮಾರ್ನಮಿ ಸಿನಿಮಾದಲ್ಲಿ ರಿತ್ವಿಕ್ ಹಾಗೂ ಚೈತ್ರಾ ಜೆ ಆಚಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಪ್ರಕಾಶ್ ತುಮಿನಾಡು, ಸೋನು ಗೌಡ, ಜ್ಯೋತೀಶ್ ಶೆಟ್ಟಿ, ರೋಚಿತ್, ಯಶ್ ಶೆಟ್ಟಿ, ಮೈಮ್ ರಾಮದಾಸ್ ಹಾಗೂ ಚೈತ್ರ ಶೆಟ್ಟಿ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ನಿರ್ದೇಶನವಿದ್ದು, ಶಿವಸೇನ ಛಾಯಾಗ್ರಹಣ ನಿರ್ವಹಿಸುತ್ತಿದ್ದಾರೆ.

ರಿತ್ವಿಕ್‌ ಮಠ್ ಮತ್ತು ಚೈತ್ರಾ ಆಚಾರ್‌
ರಾಧಿಕಾ ಕುಮಾರಸ್ವಾಮಿ ನಟನೆಯ 'ಭೈರಾದೇವಿ' ಸಿನಿಮಾ ರಿಲೀಸ್ ಗೆ ದಿನಾಂಕ ಫಿಕ್ಸ್

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com