'ಕೆಡಿ ದಿ ಡೇವಿಲ್' ಗೆ ವಿಜಯ್ ಸೇತುಪತಿ ಸೇರ್ಪಡೆ?

ಧ್ರುವ ಸರ್ಜಾ ಅಭಿನಯದ ನಿರ್ದೇಶಕ ಪ್ರೇಮ್ ಅವರ ಚಿತ್ರ ಕೆಡಿ-ದಿ ಡೆವಿಲ್ ಪ್ರಸ್ತುತ ನಿರ್ಮಾಣ ಹಂತದಲ್ಲಿದೆ. ಇತ್ತೀಚೆಗೆ, ತಂಡವು ಹೊಸ ವರ್ಷದ ಟೀಸರ್ ಬಿಡುಗಡೆ ಮಾಡಿತು, ಸಾಮಾಜಿಕ ಮಾಧ್ಯಮದಲ್ಲಿ ಟೀಸರ್ ಭಾರೀ ಸದ್ದು ಮಾಡಿತ್ತು.
ವಿಜಯ್ ಸೇತುಪತಿ
ವಿಜಯ್ ಸೇತುಪತಿ
Updated on

ಧ್ರುವ ಸರ್ಜಾ ಅಭಿನಯದ ನಿರ್ದೇಶಕ ಪ್ರೇಮ್ ಅವರ ಚಿತ್ರ ಕೆಡಿ-ದಿ ಡೆವಿಲ್ ಪ್ರಸ್ತುತ ನಿರ್ಮಾಣ ಹಂತದಲ್ಲಿದೆ. ಇತ್ತೀಚೆಗೆ, ತಂಡವು ಹೊಸ ವರ್ಷದ ಟೀಸರ್ ಬಿಡುಗಡೆ ಮಾಡಿತು, ಸಾಮಾಜಿಕ ಮಾಧ್ಯಮದಲ್ಲಿ ಟೀಸರ್ ಭಾರೀ ಸದ್ದು ಮಾಡಿತ್ತು. ಬಹುಭಾಷಾ ಚಲನಚಿತ್ರವು 2024 ರಲ್ಲಿ ವಿಶ್ವಾದ್ಯಂತ ಗ್ರ್ಯಾಂಡ್ ರಿಲೀಸ್ ಆಗಲಿದೆ ಎಂದು ಘೋಷಣೆ ಮಾಡಲಾಗಿದೆ.

ಈ ಸಹಯೋಗವು ಧ್ರುವ ಸರ್ಜಾ ಮತ್ತು ಕೆವಿಎನ್ ಪ್ರೊಡಕ್ಷನ್ಸ್‌ನೊಂದಿಗಿನ ಪ್ರೇಮ್‌ನ ಮೊದಲ ಸಿನಿಮಾವಾಗಿದೆ. ಅದರ ಸ್ಟಾರ್-ಸ್ಟಡ್ಡ್ ಕ್ಯಾಸ್ಟ್‌ನಿಂದಾಗಿ ಸಾಕಷ್ಟು ನಿರೀಕ್ಷೆ ಸೃಷ್ಟಿಸಿದೆ. ಈ ಚಿತ್ರದಲ್ಲಿ ರವಿಚಂದ್ರನ್ ಮತ್ತು ರಮೇಶ್ ಅರವಿಂದ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಶಿಲ್ಪಾ ಶೆಟ್ಟಿ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ. ಈ ಚಿತ್ರದಲ್ಲಿ ಸಂಜಯ್ ದತ್  ಕೂಡ ಅಭಿನಯಿಸಿದ್ದಾರೆ.

ಕೆಡಿ ಸಿನಿಮಾ ಬಗೆಗ್ಗಿನ  ಹೊಸ ವಿಷವೆಂದರೆ ವಿಜಯ್ ಸೇತುಪತಿ ಕೆಡಿ ಸಿನಿಮಾ ತಂಡ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಅವರು KD ಭಾಗ 1 ರ ಕ್ಲೈಮ್ಯಾಕ್ಸ್‌ನಲ್ಲಿ ಒಂದು ಪಾತ್ರ ನಿರ್ವಗಿಸಲಿದ್ದಾರೆ  ಭಾಗ 2 ರಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಹೇಳಲಾಗುತ್ತಿದೆ.

ನಿರ್ದೇಶಕ ಪ್ರೇಮ್, ತಮ್ಮ ವೈವಿಧ್ಯಮಯ ಪಾತ್ರಗಳ ಆಯ್ಕೆಗಳಿಗೆ ಹೆಸರುವಾಸಿಯಾಗಿದ್ದಾರೆ, ವಿಜಯ್ ಸೇತುಪತಿ ಅವರನ್ನು ಭೇಟಿ ಮಾಡಿದ್ದರು, ಮೊದಲ ತಮಿಳು ಆವೃತ್ತಿಗೆ ತಮ್ಮ ಧ್ವನಿ ನೀಡಿದ್ದರು. ಕೆಡಿ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸುತ್ತಿದ್ದರೆ, ವಿಲಿಯಂ ಡೇವಿಡ್ ಮತ್ತು ಶ್ರೀನಿವಾಸ್ ಪಿ ಪ್ರಭು ಕ್ರಮವಾಗಿ ಛಾಯಾಗ್ರಹಣ ಮತ್ತು ಸಂಕಲನವನ್ನು ನಿರ್ವಹಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com