ಸಂಗೀತಾ ಶೃಂಗೇರಿ
ಸಂಗೀತಾ ಶೃಂಗೇರಿ

ಭಾರತ ಟ್ರೆಂಡ್ ನಲ್ಲಿ 'ವಿಜಯೀ ಭವ ಸಂಗೀತಾ ಶೃಂಗೇರಿ; ಐದು ಲಕ್ಷಕ್ಕೂ ಹೆಚ್ಚು ಟ್ವೀಟ್!

ಕಲರ್ಸ್ ಕನ್ನಡದಲ್ಲಿ ಮೂಡಿಬರುತ್ತಿರುವ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ ಸೀಸನ್ 10' ರ ಗ್ರ್ಯಾಂಡ್ ಫಿನಾಲೆಗೆ ಇನ್ನೂ ಕೆಲವೇ ದಿನಗಳು ಬಾಕಿಯಿರುವಂತೆಯೇ, ಈ ಬಾರಿ ಯಾರು ಗೆಲ್ಲಬಹುದು  ಎಂಬ ಕುತೂಹಲ ವೀಕ್ಷಕರಲ್ಲಿ ಹೆಚ್ಚಾಗಿದೆ. ದೊಡ್ಮನೆಯಲ್ಲಿ ಈಗ ಏಳು ಮಂದಿ ಉಳಿದಿದ್ದಾರೆ.
Published on

ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ ಸೀಸನ್ 10' ರ ಗ್ರ್ಯಾಂಡ್ ಫಿನಾಲೆಗೆ ಇನ್ನೂ ಕೆಲವೇ ದಿನಗಳು ಬಾಕಿಯಿರುವಂತೆಯೇ, ಈ ಬಾರಿ ಯಾರು ಗೆಲ್ಲಬಹುದು  ಎಂಬ ಕುತೂಹಲ ವೀಕ್ಷಕರಲ್ಲಿ ಹೆಚ್ಚಾಗಿದೆ. ದೊಡ್ಮನೆಯಲ್ಲಿ ಈಗ ಏಳು ಮಂದಿ ಉಳಿದಿದ್ದಾರೆ.

ಈ ಪೈಕಿ ಸಂಗೀತಾ ಶೃಂಗೇರಿ, ವರ್ತೂರು ಸಂತೋಷ್, ತುಕಾಲಿ ಸಂತೋಷ್ ಮೂವರು ಫೈನಲ್ ಪ್ರವೇಶಿಸಿದ್ದಾರೆ. ಇನ್ನೂ ನಾಮಿನೇಟ್ ಪಟ್ಟಿಯಲ್ಲಿರುವ ಪ್ರತಾಪ್, ವಿನಯ್, ಕಾರ್ತಿಕ್ ಹಾಗೂ ನಮ್ರತಾ ಅವರ ಪೈಕಿ ಇವತ್ತು ಒಬ್ಬರು ಮನೆಗೆ ಹೋಗಲಿದ್ದು, ವಾರದ ಮಧ್ಯದಲ್ಲಿ ಮತ್ತೋರ್ವರು ದೊಡ್ಮನೆಯಿಂದ ಹೊರಬರುವ ಸಾಧ್ಯತೆಯಿದೆ.

ಈ ಮಧ್ಯೆ ಸಂಗೀತಾ ಶೃಂಗೇರಿ ಅವರ ಹೆಸರು ಟ್ವಿಟರ್​ನಲ್ಲಿ ಭಾರಿ ಟ್ರೆಂಡ್ ಆಗಿದೆ. ಆರಂಭದಲ್ಲಿ ಬಳೆ ವಿಚಾರದಲ್ಲಿ ವಿನಯ್ ಗೆ ಟಕ್ಕರ್ ನೀಡಿ ರಾಜ್ಯಾದ್ಯಂತ ವೀಕ್ಷಕರ ಮನಗೆದ್ದಿದ್ದ ಸಂಗೀತಾ, ನಂತರ ಏರಿಳಿತ ಕಾಣುತ್ತಾ, ದೊಡ್ಮನೆಯಲ್ಲಿ ಉತ್ತಮ ಪ್ರದರ್ಶನ ತೋರುತ್ತಾ ಬಂದಿದ್ದು, ಎರಡು ಬಾರಿ ಕ್ಯಾಪ್ಟನ್ ಆಗಿದ್ದಾರೆ. ಅಲ್ಲದೇ, ಇಡೀ ಜರ್ನಿಯನ್ನು ಗಮನಿಸಿ ಸುದೀಪ್ ಅವರು ಸಂಗೀತಾ ಹಾಗೂ ವಿನಯ್​ಗೆ ಕಿಚ್ಚನ ಚಪ್ಪಾಳೆ ನೀಡಿದ್ದಾರೆ. ನೀವಿಬ್ಬರು ಇಲ್ಲದೆ ಇದ್ದರೆ ಬಿಗ್ ಬಾಸ್​ನ ಈ ಜರ್ನಿ ಅಪೂರ್ಣ ಆಗುತ್ತಿತ್ತು’ ಎಂದು ಸುದೀಪ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 

ಇದು ಸಂಗೀತಾ ಗೆ ಆತ್ಮವಿಶ್ವಾಸ ಇಮ್ಮಡಿಗೊಳಿಸಿದೆ. ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಅವರನ್ನು ಹೊರಗಿನಿಂದ ಬೆಂಬಲಿಸುವ ಕಾರ್ಯ ನಡೆಯುತ್ತಿದೆ. ಸಂಗೀತಾ ಪರ ಟ್ವಿಟರ್​ನಲ್ಲಿ ಟ್ವೀಟ್ ಮಾಡುತ್ತಿದ್ದಾರೆ. ‘VIJAYIBHAVA SANGEETHA SRINGERI’ ಎಂಬ ಹೆಸರಿನಲ್ಲಿ ಟ್ವೀಟ್ ಮಾಡಲಾಗುತ್ತಿದೆ.

5ಲಕ್ಷಕ್ಕೂ ಹೆಚ್ಚು ಟ್ವೀಟ್ ನೊಂದಿಗೆ ಭಾರತದ ಟ್ರೆಂಡ್​​ನಲ್ಲಿ ಅವರ ಹೆಸರು ಅಗ್ರ ಸ್ಥಾನದಲ್ಲಿದೆ ಈ ಮೊದಲು ರೂಪೇಶ್ ಶೆಟ್ಟಿ (ಬಿಗ್ ಬಾಸ್ ಸೀಸನ್ 9ರ ವಿಜೇತ), ಕಾರ್ತಿಕ್ ಮಹೇಶ್ ಹಾಗೂ ಡ್ರೋನ್ ಪ್ರತಾಪ್ ಹೆಸರು ಭಾರತದ ಟ್ರೆಂಡ್ ನಲ್ಲಿ ಕಾಣಿಸಿಕೊಂಡಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com