Vijay Varma And Tamannaah
ತಮನ್ನಾ ಮತ್ತು ವಿಜಯ್ ವರ್ಮಾ

ಸಂಬಂಧಗಳು ಐಸ್ ​​​ಕ್ರೀಮ್​ನಂತೆ, ಆಸ್ವಾದಿಸಿ ಮುಂದೆ ಸಾಗಬೇಕು: ತಮನ್ನಾ ಜೊತೆಗಿನ ಬ್ರೇಕಪ್ ಬಳಿಕ ವಿಜಯ್ ವರ್ಮ ಮಾತು

ನೀವು ಸಂಬಂಧಗಳ ಬಗ್ಗೆ ಮಾತನಾಡುತ್ತಿದ್ದೀರಿ, ಸರಿಯೇ? ನೀವು ಐಸ್ ಕ್ರೀಮ್ ತಿನ್ನುವಂತೆ ಸಂಬಂಧಗಳನ್ನು ಆನಂದಿಸಿದರೆ, ನೀವು ಸಂತೋಷವಾಗಿರುತ್ತೀರಿ ಎಂದು ನಾನು ಭಾವಿಸುತ್ತೇನೆ. ನೀವು ಪಡೆಯುವ ಐಸ್ ಕ್ರೀಂನ ತಿಂದು ಮುಂದುವರಿಯಬೇಕು’.
Published on

ಮುಂಬಯಿ: ಬಾಲಿವುಡ್ ನಟ ವಿಜಯ್ ವರ್ಮಾ ಹಾಗೂ ತಮನ್ನಾ ಭಾಟಿಯಾ ನಡುವೆ ಬ್ರೇಕಪ್ ಆಗಿರೋದ್ಯಾಕೆ ಎಂಬುದಕ್ಕೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಈ ಬೆನ್ನಲ್ಲೇ ಸಂಬಂಧವನ್ನು ಐಸ್‌ಕ್ರೀಮ್‌ನಂತೆ ಆಸ್ವಾದಿಸಬೇಕು ಎಂದು ವಿಜಯ್ ವರ್ಮಾ ಹೇಳಿರುವ ಹೇಳಿಕೆ ಇದೀಗ ಚರ್ಚೆಗೆ ಗ್ರಾಸವಾಗಿದೆ.

ಸಂದರ್ಶನವೊಂದರಲ್ಲಿ ಮಾತನಾಡಿದ ವಿಜಯ್ ವರ್ಮಾ ಅವರು ಸಂಬಂಧವನ್ನು ಐಸ್‌ಕ್ರೀಮ್‌ಗೆ ಹೋಲಿಸಿದ್ದಾರೆ. ‘ನೀವು ಸಂಬಂಧಗಳ ಬಗ್ಗೆ ಮಾತನಾಡುತ್ತಿದ್ದೀರಿ, ಸರಿಯೇ? ನೀವು ಐಸ್ ಕ್ರೀಮ್ ತಿನ್ನುವಂತೆ ಸಂಬಂಧಗಳನ್ನು ಆನಂದಿಸಿದರೆ, ನೀವು ಸಂತೋಷವಾಗಿರುತ್ತೀರಿ ಎಂದು ನಾನು ಭಾವಿಸುತ್ತೇನೆ. ನೀವು ಪಡೆಯುವ ಐಸ್ ಕ್ರೀಂನ ತಿಂದು ಮುಂದುವರಿಯಬೇಕು’ ಎಂದು ಅವರು ಹೇಳಿದರು.

ಇತ್ತೀಚೆಗೆ ವಿಜಯ್ ಹಾಗೂ ತಮನ್ನಾ ಬ್ರೇಕಪ್ ಮಾಡಿಕೊಂಡಿದ್ದಾರೆ. ಇದುವರೆಗೂ ಇಬ್ಬರೂ ಬ್ರೇಕಪ್ ಬಗ್ಗೆ ಅಧಿಕೃತವಾಗಿ ಮಾತನಾಡಿಲ್ಲ. ಬ್ರೇಕಪ್‌ಗೆ ಕಾರಣವೇನು ಎಂಬುದನ್ನು ತಿಳಿಸಿಲ್ಲ. ಮುಂದಿನ ದಿನಗಳಲ್ಲಿ ಬ್ರೇಕಪ್‌ ಬಗ್ಗೆ ಅಸಲಿ ಕಾರಣ ಬಿಚ್ಚಿಡುತ್ತಾರಾ? ಎಂಬುದನ್ನು ಕಾದುನೋಡಬೇಕಿದೆ.

ಈ ಹಿಂದೆ, ತಮನ್ನಾ ಸಂದರ್ಶನವೊಂದರಲ್ಲಿ, ‘ನನ್ನ ಜೀವನದಲ್ಲಿ ನಾನು ಆಯ್ಕೆ ಮಾಡಿಕೊಂಡಿರುವ ಯಾವುದೇ ವಿಷಯದಲ್ಲಿ ನಾನು ಸಂತೋಷವಾಗಿದ್ದೇನೆ. ನನಗೆ ಹೊಸ ಜನರನ್ನು ಭೇಟಿಯಾಗುವುದು ಇಷ್ಟ ಮತ್ತು ಅನಿರೀಕ್ಷಿತ ಸಂದರ್ಭಗಳು ನನ್ನ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ. ನನಗೆ ಖುಷಿ ಕೊಡುವ ವಿಷಯಗಳನ್ನು ಮಾತ್ರ ನಾನು ಜನರಿಗೆ ಹೇಳಬಲ್ಲೆ. ಇದು ನನ್ನ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ’ ಎಂದಿದ್ದರು.

Vijay Varma And Tamannaah
ವರ್ಷಗಳ ಡೇಟಿಂಗ್ ನಂತರ ದೂರ ದೂರ: ತಮನ್ನಾ ಭಾಟಿಯಾ-ವಿಜಯ್ ವರ್ಮಾ ಸಂಬಂಧಕ್ಕೆ ತಿಲಾಂಜಲಿ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com