
ಕನ್ನಡ ಕಿರುತೆರೆಯಲ್ಲಿ ವಿಭಿನ್ನವಾಗಿ ಮೂಡಿ ಬರುತ್ತಿದ್ದ ಸೀತಾ ವಲ್ಲಭ ಧಾರಾವಾಹಿ ಮೂಲಕ ಸಖತ್ ಫೇಮಸ್ ಆಗಿದ್ದ ನಟಿ ಸುಪ್ರೀತಾ ಸತ್ಯನಾರಾಯಣ್ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಕಿರುತೆರೆ ನಟಿ ಸುಪ್ರೀತಾ ಸತ್ಯನಾರಾಯಣ್ ಸೀತಾ ವಲ್ಲಭ ಧಾರಾವಾಹಿಯಲ್ಲಿ ಮೈಥಲಿ ಪಾತ್ರದ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದಿದ್ದರು. ಅಲ್ಲದೇ ಗಿರೀಶ್ ವೈರಮುಡಿ ನಿರ್ದೇಶನದ ರಹದಾರಿ ಚಿತ್ರದ ಮೂಲಕ ಸಾಂಡಲ್ವುಡ್ಗೆ ಪಾದಾರ್ಪಣೆ ಮಾಡಿದ್ದರು.
ಇದೀಗ ನಟಿ ಸುಪ್ರೀತಾ ಸತ್ಯನಾರಾಯಣ್ ಗುಟ್ಟಾಗಿ ಎಂಗೇಜ್ ಆಗಿದ್ದಾರೆ. ಈ ವಿಚಾರವನ್ನು ಖುದ್ದು ಕೆಲವು ದಿನಗಳ ಬಳಿಕ ಸುಪ್ರೀತಾ ಸತ್ಯನಾರಾಯಣ್ ಅವರೇ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋ ಶೇರ್ ಮಾಡಿಕೊಳ್ಳುವ ಮೂಲಕ ಬಹಿರಂಗಪಡಿಸಿದ್ದಾರೆ. ಕಳೆದ ಮಾರ್ಚ್ ತಿಂಗಳಿನಲ್ಲಿ ಸುಪ್ರೀತಾ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಹೊಸ ಚಾಪ್ಟರ್ ಇಲ್ಲಿಂದ ಶುರು. ಹಲೋ ಎನ್ನುವ ನಿನ್ನ ಧ್ವನಿಯಿಂದಲೇ ಪ್ರೀತಿ ಶುರುವಾದ ಬಗ್ಗೆ ಹೇಳಲಾ? ಅಥವಾ ನಿನ್ನ ನಗು ನೋಡಿದಾಗ ನನ್ನ ಹೊಟ್ಟೆಯೊಳಗಡೆ ಚಿಟ್ಟೆ ಹಾರಾಟ ಮಾಡೋ ಬಗ್ಗೆ ಹೇಳಲಾ? ನಿನ್ನ ನಗು ಅಂದ್ರೆ ತುಂಬ ಇಷ್ಟ. ಆ ನಗುವಿಗೋಸ್ಕರ ನಾನು ಏನು ಬೇಕಿದ್ರೂ ಮಾಡುವೆ. ಖುಷಿಗೋಸ್ಕರ ನಾನು ದೇವರ ಬಳಿ ಪ್ರಾರ್ಥಿಸಿದೆ. ಅವನು ನನಗೆ ನಿಮ್ಮನ್ನು ಕೊಟ್ಟ. ನನ್ನ ಜೀವನಕ್ಕೆ ಬಂದಿದ್ದಕ್ಕೆ, ನಿಜವಾದ ಲವ್ ಏನು ಎಂದು ಅರ್ಥ ಮಾಡಿಸಿದ್ದಕ್ಕೆ, ನನ್ನ ಜೀವನವನ್ನು ಸುಂದರ ಮಾಡಿದ್ದಕ್ಕೆ ಥ್ಯಾಂಕ್ಯೂ. ನಿನ್ನ ನಗು, ಶಾಂತಿ, ಖುಷಿಗೋಸ್ಕರ ನಾನು ಪ್ರಾಮೀಸ್ ಮಾಡುವೆ. ನಿನ್ನ ಜೀವನದುದ್ದಕ್ಕೂ ಇರುವೆ ಎಂದು ಮಾತುಕೊಡ್ತೀನಿ. ಇಬ್ಬರೂ ಒಟ್ಟಿಗೆ ಜೀವನ ಕಳೆಯೋಣ. ಐ ಲವ್ ಯು ಕಂದ. ನನ್ನ ಹೃದಯ ನಿನ್ನದು ಎಂದು ಬರೆದುಕೊಂಡಿದ್ದಾರೆ.
ನಟಿ ಸುಪ್ರೀತಾ ಸತ್ಯನಾರಾಯಣ್ ಅವರು ಚಂದನ್ ಶೆಟ್ಟಿ ಎನ್ನುವವರ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಚಂದನ್ ಶೆಟ್ಟಿ ಅವರು ಇನ್ಸ್ಟಾಗ್ರಾಮ್ನಲ್ಲಿ ಡಿಜಿಟಲ್ ಕ್ರಿಯೇಟರ್, ಸಾಫ್ಟ್‌ವೇರ್ ಉದ್ಯೋಗಿ ಎಂದು ಬರೆದುಕೊಂಡಿದ್ದಾರೆ.
Advertisement