
ತಮಿಳು ಸೂಪರ್‌ಸ್ಟಾರ್ ಧನುಷ್ ಅಭಿನಯದ ಕುಬೇರ ಚಿತ್ರದ ನಿರ್ಮಾಪಕರು ಭಾನುವಾರ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಿದ್ದಾರೆ.
ತಮಿಳಿನಲ್ಲಿ ಪೊಯಿವಾ ನನ್ಬಾ ಮತ್ತು ತೆಲುಗಿನಲ್ಲಿ ಪೊಯಿರಾ ಮಾಮಾ ಎಂದು ಹೆಸರಿಸಲಾದ ಈ ಹಾಡನ್ನು ಧನುಷ್ ಎರಡೂ ಭಾಷೆಗಳಲ್ಲಿ ಹಾಡಿದ್ದಾರೆ. ಜಾಕೆ ಆನಾ ಯಾರಾ ಎಂಬ ಶೀರ್ಷಿಕೆಯ ಹಿಂದಿ ಆವೃತ್ತಿಯನ್ನು ನಕಾಶ್ ಅಜೀಜ್ ಅವರು ಹಾಡಿದ್ದಾರೆ.
ದೇವಿ ಶ್ರೀ ಪ್ರಸಾದ್ ಅವರು ಸಂಗೀತ ಸಂಯೋಜಿಸಿದ್ದು, "ನಾವು ಮೂವರು ಒಟ್ಟಿಗೆ ಬಂದಾಗ ಸಂಗೀತ, ಮಸ್ತಿ ಮತ್ತು ಮ್ಯಾಜಿಕ್ ನಿರೀಕ್ಷಿಸಿ" ಎಂದು ಚಿತ್ರದ ನಿರ್ದೇಶಕ ಶೇಖರ್ ಕಮ್ಮುಲಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇತ್ತೀಚಿಗೆ ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದ್ದು, ಸಿನಿಮಾ ತೀವ್ರ ಕುತೂಹಲ ಮೂಡಿಸಿದೆ. ಧನುಷ್ ಭಿಕ್ಷುಕನಾಗಿ, ನಾಗಾರ್ಜುನ ಶ್ರೀಮಂತನಾಗಿ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾ ಬಿಡುಗಡೆಗೆ ಪ್ರೇಕ್ಷಕರು ಕಾಯುತ್ತಿರುವ ಹೊತ್ತಿನಲ್ಲೇ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ.
ಕುಬೇರ ಚಿತ್ರದಲ್ಲಿ ನಾಗಾರ್ಜುನ, ಕೃತಿ ಸನೋನ್, ರಶ್ಮಿಕಾ ಮಂದಣ್ಣ ಮತ್ತು ಜಿಮ್ ಸರ್ಭ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಈ ಚಿತ್ರಕ್ಕೆ ಶ್ರೀ ವೆಂಕಟೇಶ್ವರ ಸಿನಿಮಾಸ್ ಎಲ್‌ಎಲ್‌ಪಿ ಮತ್ತು ಅಮಿಗೋಸ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ . ಈ ಚಿತ್ರ ಜೂನ್ 20 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
Advertisement