'ಕಾಂತಾರ: ಚಾಪ್ಟರ್ 1' ಚಿತ್ರದ ನಾಯಕಿ ರಿವೀಲ್: ಕನಕವತಿ ಪೋಸ್ಟರ್ ರಿಲೀಸ್

ಇಂದು ವರಮಹಾಲಕ್ಷ್ಮಿಯ ಶುಭದಿನ ಕಾಂತಾರಾ ಚಾಪ್ಟರ್ 1 ಚಿತ್ರದ ನಾಯಕಿಯ ಪಾತ್ರ ಕನಕವತಿ ಎಂದು ಚಿತ್ರತಂಡ ಪೋಸ್ಟರ್ ರಿಲೀಸ್ ಮಾಡಿದೆ.
Kantara chapter 1 poster
ಕಾಂತಾರ ಚಾಪ್ಟರ್ 1 ಪೋಸ್ಟರ್
Updated on

‘ಕಾಂತಾರ ಚಾಪ್ಟರ್ 1' ಚಿತ್ರ ಅಕ್ಟೋಬರ್ 2ಕ್ಕೆ ತೆರೆಕಾಣುವುದಕ್ಕೆ ಚಿತ್ರಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಕಾಂತಾರ ಚಿತ್ರಕ್ಕೆ ಸಪ್ತಮಿ ಗೌಡ ನಾಯಕಿ ಆಗಿದ್ದರು. ಇದೀಗ ಈ ಚಿತ್ರದ ಪ್ರೀಕ್ವೆಲ್ ‘ಕಾಂತಾರ: ಚಾಪ್ಟರ್ 1’ (Kantara: Chapter 1) ಸಿನಿಮಾ​ಗೆ ನಾಯಕಿ ಯಾರು ಎಂಬ ವಿಚಾರವನ್ನು ಚಿತ್ರತಂಡ ರಿವೀಲ್ ಮಾಡಿದೆ.

ಇಂದು ವರಮಹಾಲಕ್ಷ್ಮಿಯ ಶುಭದಿನ ಕಾಂತಾರಾ ಚಾಪ್ಟರ್ 1 ಚಿತ್ರದ ನಾಯಕಿಯ ಪಾತ್ರ ಕನಕವತಿ ಎಂದು ಚಿತ್ರತಂಡ ಪೋಸ್ಟರ್ ರಿಲೀಸ್ ಮಾಡಿದೆ.

‘ಕಾಂತಾರ: ಚಾಪ್ಟರ್ 1’ ಇನ್ನು ಒಂದೂವರೆ ತಿಂಗಳು ಬಾಕಿಯಿದೆ. ಹೀಗಾಗಿ, ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಪ್ರಚಾರ ಆರಂಭಿಸಲು ತಂಡ ಸಿದ್ದವಾಗಿದೆ. ಅದರ ಭಾಗವಾಗಿ ಸಿನಿಮಾದ ನಾಯಕಿ ಪಾತ್ರದ ಪರಿಚಯವನ್ನು ನೀಡಲಾಗಿದೆ. ರುಕ್ಮಿಣಿ ವಸಂತ್ ಈ ಚಿತ್ರದ ನಾಯಕಿ ಎಂಬ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿದೆ.

ರುಕ್ಮಿಣಿ ವಸಂತ್ ಅವರು ಚಿತ್ರದಲ್ಲಿ ಯುವರಾಣಿ ರೀತಿ ಕಾಣಿಸಿದ್ದಾರೆ. ಅವರ ಪಾತ್ರದ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ. ಪೋಸ್ಟರ್ ಹಿಂಭಾಗ ನೋಡಿದರೆ ಅದು ರಾಜರ ಆಸ್ಥಾನದ ರೀತಿಯೇ ಕಾಣಿಸುತ್ತದೆ. ಈ ಖುಷಿಯ ವಿಚಾರವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಸಂಸ್ಥೆ ಸೇರಿದಂತೆ ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್ ಹಂಚಿಕೊಂಡಿದ್ದಾರೆ.

‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕೆ ಅರವಿಂದ್ ಎಸ್. ಕಶ್ಯಪ್ ಅವರ ಛಾಯಾಗ್ರಹಣ, ಬಿ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಇದೆ. ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ವಿಜಯ್ ಕಿರಗಂದೂರು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರಿಷಬ್ ಅವರು ಈ ಚಿತ್ರದಲ್ಲಿ ನಟಿಸುವುದರ ಜೊತೆಗೆ ನಿರ್ದೇಶನ ಕೂಡ ಮಾಡಿದ್ದಾರೆ. ಅಕ್ಟೋಬರ್ 2ರಂದು ಈ ಸಿನಿಮಾ ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ, ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

Kantara chapter 1 poster
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ: ಚಾಪ್ಟರ್ 1' ಚಿತ್ರೀಕರಣ ಪೂರ್ಣ; ಮೇಕಿಂಗ್ ವಿಡಿಯೋ ಇಲ್ಲಿದೆ ನೋಡಿ..

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com