ಮಹೇಶ್ ಬಾಬು ಬರ್ತ್​ಡೇ ದಿನ ರಾಜಮೌಳಿಯಿಂದ ಪೋಸ್ಟರ್ ಬಿಡುಗಡೆ; ನವೆಂಬರ್‌ನಲ್ಲಿ ಪ್ರಮುಖ ಅಪ್ಡೇಟ್​​

ರಾಜಮೌಳಿ ಅವರು ಶನಿವಾರ ತಮ್ಮ ಎಕ್ಸ್ ಖಾತೆಯಲ್ಲಿ ತಾತ್ಕಾಲಿಕವಾಗಿ SSMB29 ಎಂದು ಹೆಸರಿಸಲಾದ ತಮ್ಮ ಮುಂದಿನ ಚಿತ್ರದ ಕುತೂಹಲಕಾರಿ ಪೋಸ್ಟರ್ ಹಂಚಿಕೊಂಡಿದ್ದಾರೆ.
Rajamouli announces title of his next film with Mahesh Babu
ರಾಜಮೌಳಿ - ಮಹೇಶ್ ಬಾಬು
Updated on

ಹೈದರಾಬಾದ್: ತೆಲುಗು ಸೂಪರ್‌ಸ್ಟಾರ್ ಮಹೇಶ್ ಬಾಬು ಅವರು 50ನೇ ಹುಟ್ಟಹಬ್ಬದ ಸಂಭ್ರಮದಲ್ಲಿದ್ದು, ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರು ಟಾಲಿವುಡ್ ಪ್ರಿನ್ಸ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ ತಮ್ಮ ಮುಂಬರುವ ಚಿತ್ರದ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ.

ರಾಜಮೌಳಿ ಅವರು ಶನಿವಾರ ತಮ್ಮ ಎಕ್ಸ್ ಖಾತೆಯಲ್ಲಿ ತಾತ್ಕಾಲಿಕವಾಗಿ SSMB29 ಎಂದು ಹೆಸರಿಸಲಾದ ತಮ್ಮ ಮುಂದಿನ ಚಿತ್ರದ ಕುತೂಹಲಕಾರಿ ಪೋಸ್ಟರ್ ಹಂಚಿಕೊಂಡಿದ್ದು, ಅದರಲ್ಲಿ "ನವೆಂಬರ್ 2025ರಲ್ಲಿ ಫಸ್ಟ್​ ರಿವೀಲ್. #GlobeTrotter" ಎಂದು ಬರೆಯಲಾಗಿದೆ.

ಮುಖವನ್ನು ರಿವೀಲ್ ಮಾಡದೇ ಒಂದು ಪೋಸ್ಟರ್ ರಿವೀಲ್ ಮಾಡಲಾಗಿದೆ. ಈ ಪೋಸ್ಟರ್​​ನಲ್ಲಿ ಈ ಚಿತ್ರದ ಬಗ್ಗೆ ನವೆಂಬರ್​ನಲ್ಲಿ ಮಾಹಿತಿ ನೀಡೋದಾಗಿ ರಾಜಮೌಳಿ ಹೇಳಿದ್ದಾರೆ. ಅಲ್ಲದೆ ಗ್ಲೋಬ್‌ಟ್ರಾಟರ್ ಎಂಬ ಹ್ಯಾಷ್ ಟ್ಯಾಗ್ ಬಳಸಿದ್ದು, ಇದು ಚಿತ್ರದ ಅಧಿಕೃತ ಟೈಟಲ್ ಇರಬಹುದು ಎನ್ನಲಾಗಿದೆ.

Rajamouli announces title of his next film with Mahesh Babu
ನನ್ನ ಸಾವಿಗೆ ರಾಜಮೌಳಿ ಕಾರಣ: ಡೆತ್ ನೋಟ್ ಬರೆದಿಟ್ಟು ನಿರ್ದೇಶಕನ ಆಪ್ತ ಸ್ನೇಹಿತ ಆತ್ಮಹತ್ಯೆ?

ಪೋಸ್ಟರ್‌ ನಲ್ಲಿ ಮಹೇಶ್ ಬಾಬು ಅವರ ರಕ್ತಸಿಕ್ತ ದೇಹದ ಕ್ಲೋಸ್​ ಅಪ್​ ಲುಕ್, ಕಪ್ಪು ಮಣಿಗಳ ಸರ, ಅದರಲ್ಲಿ ತ್ರಿಶೂಲ ಮತ್ತು ನಂದಿಯನ್ನು ಒಳಗೊಂಡಿರುವ ಬೆಳ್ಳಿಯ ಪೆಂಡೆಂಟ್ ನೋಡುಗರ ಗಮನ ಸೆಳೆದಿದೆ.

ಚಿತ್ರದ ಕಥಾವಸ್ತು ಮತ್ತು ತಾರಾಗಣದ ಬಗ್ಗೆ ಚಿತ್ರ ತಯಾರಕರು ಯಾವುದೇ ವಿವರಗಳನ್ನು ಹಂಚಿಕೊಂಡಿಲ್ಲ. ಚಿತ್ರದ ಬಿಡುಗಡೆ ದಿನಾಂಕವನ್ನೂ ಘೋಷಿಸಿಲ್ಲ.

ಈ ಹಿಂದೆ, ಪ್ರಿಯಾಂಕಾ ಚೋಪ್ರಾ ಅವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ವರದಿಗಳಿದ್ದವು. ಆದರೆ ಅದನ್ನು ಚಿತ್ರ ತಯಾರಕರು ದೃಢಪಡಿಸಿಲ್ಲ.

SSMB29 ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದ್ದು, ಮಹೇಶ್ ಬಾಬು ಮತ್ತು ಎಸ್.ಎಸ್. ರಾಜಮೌಳಿ ಕಾಂಬಿನೇಶನ್​​ನ ಮೊದಲ ಸಿನಿಮಾ ಇದಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com