
ಯಶ್ ತಾಯಿ, ನಿರ್ಮಾಪಕಿ ಪುಷ್ಪಾ ಅರುಣ್ ಕುಮಾರ್ ಅವರು ‘ಕೊತ್ತಲವಾಡಿ’ ಸಿನಿಮಾ ಬಿಡುಗಡೆಗೆ ಮುನ್ನ ಸುದ್ದಿವಾಹಿನಿಗಳು ಸೇರಿದಂತೆ ಯೂಟ್ಯೂಬ್ ಗಳಿಗೆ ಸಂದರ್ಶನ ನೀಡುತ್ತಲೇ ಬಂದಿದ್ದಾರೆ. ಇತ್ತೀಚೆಗೆ ಅಶ್ವವೇಗ ಎಂಬ ಯೂಟ್ಯೂಬ್ ಚಾನೆಲ್ ವೊಂದಕ್ಕೆ ಸಂದರ್ಶನ ನೀಡುವಾಗ ಅವರ ತಂಗಿ ಮಗಳು ನಟಿ ದೀಪಿಕಾ ದಾಸ್ ಬಗ್ಗೆ ಸಂದರ್ಶಕಿ ಪ್ರಶ್ನೆ ಕೇಳಿದರು.
ಪುಷ್ಪಾ ಹೇಳಿದ್ದೇನು?
ದೀಪಿಕಾ ದಾಸ್ ಅವರಿಗೆ ನಿಮ್ಮ ಪ್ರೊಡಕ್ಷನ್ ಹೌಸ್‌ನಲ್ಲಿ ಅವಕಾಶ ಕೊಡ್ತೀರಾ? ಎಂದು ಪ್ರಶ್ನೆ ಕೇಳಲಾಗಿತ್ತು. ಸಂದರ್ಶಕಿಯ ಪ್ರಶ್ನೆಗೆ ಕೂಡಲೇ ಕೋಪದಿಂದ ಯಶ್ ತಾಯಿ ಪುಷ್ಪಾ, ‘ದೀಪಿಕಾ ದಾಸ್ ಹಾಗೂ ನಮಗೆ ಆಗಿ ಬರಲ್ಲ. ಅವಳು ಯಾವ ಹೀರೋಯಿನ್ ಅಂತ ಆಯ್ಕೆ ಮಾಡಿಕೊಳ್ಳಬೇಕು? ಅವಳು ಏನು ಸಾಧನೆ ಮಾಡಿದ್ದಾಳೆ? ಅವರನ್ನು ನಾವು ದೂರದಲ್ಲೇ ಇಟ್ಟಿದ್ದೇವೆ, ಅವರ ಬಗ್ಗೆ ಯಾಕೆ ಕೇಳ್ತೀರಾ? ನನ್ನ ಮಗ ಬೈಯಲ್ವಾ? ಬೇರೆ ಹೀರೋಯಿನ್ಸ್ ಇಲ್ವಾ? ಅವರ ಬಗ್ಗೆ ಕೇಳಿ ಎಂದರು.
ದೀಪಿಕಾ ದಾಸ್ ಪ್ರತಿಕ್ರಿಯೆ
ಈ ಸಂದರ್ಶನವನ್ನು ನಟಿ ದೀಪಿಕಾ ದಾಸ್ ನೋಡಿದ್ದಾರೆ ಎನಿಸುತ್ತದೆ. ಇದಕ್ಕೆ ತಮ್ಮ ಇನ್ಸ್ಟಾಗ್ರಾಂ ಅಕೌಂಟ್ ನಲ್ಲಿ ಖಾರವಾಗಿಯೇ ದೊಡ್ಡಮ್ಮನಿಗೆ ನಟಿ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರೋ ದೀಪಿಕಾ ದಾಸ್, ‘ಹೊಸ ಕಲಾವಿದರನ್ನು ಬೆಳೆಸೋ ಜನರು ಕಲಾವಿದರಿಗೆ ಬೆಲೆ ಕೊಡೋದ್ದನ್ನು ಕಲಿತಿರಬೇಕು. ಇಲ್ಲಿವರೆಗೂ ಯಾರ ಹೆಸರನ್ನು ಹೇಳಿಕೊಂಡು ಬಂದಿಲ್ಲ ಮುಂದೇನೂ ಬರಲ್ಲ. ಕೆಲವರಿಗೆ ಬೆಲೆಕೊಟ್ಟ ಮಾತ್ರಕ್ಕೆ ಯಾರಿಗೂ ಯಾರ ಮೇಲೂ ಭಯ ಇದೆ ಅಂತ ಅಲ್ಲ. ಅದು ಅಮ್ಮ ಆದರೂ ಸರಿ, ದೊಡ್ಡಮ್ಮ ಆದರೂ ಸರಿ ಅಥವಾ ಪುಷ್ಪಮ್ಮ ಆದರೂ ಸರಿ. ವಿಥ್ ಡ್ಯೂ ರೆಸ್ಪೆಕ್ಟ್ ಸ್ಟಾರ್ ಆಫ್ ಅವರ್ ಇಂಡಸ್ಟ್ರಿ. ನಾನು ಯಾವ ದೊಡ್ಡ ನಟಿ ಅಲ್ಲದಿದ್ದರೂ, ಏನು ಸಾಧನೆ ಮಾಡದಿದ್ದರೂ ನನ್ನ ಬಗ್ಗೆ ಹೀನಾಯವಾಗಿ ಮಾತನಾಡುವ ಯೋಗ್ಯತೆ ಯಾರಿಗೂ ಇಲ್ಲ’ ಎಂದು ದೀಪಿಕಾ ಎಚ್ಚರಿಸಿದ್ದಾರೆ.
ದೀಪಿಕಾ ದಾಸ್ ಅವರು ಕನ್ನಡ ಕಿರುತೆರೆ ನಟಿಯಾಗಿ ಗಮನ ಸೆಳೆದಿದ್ದಾರೆ. ಅವರು ‘ನಾಗಿಣಿ’ ಧಾರಾವಾಹಿಯಲ್ಲಿ ಕಾಣಿಸಿಕೊಂಡು ಸಾಕಷ್ಟು ಗಮನ ಸೆಳೆದರು. ಅಲ್ಲದೆ, ಬಿಗ್ ಬಾಸ್ ಶೋಗೆ ಅವರು ಎರಡು ಬಾರಿ ಆಗಮಿಸಿದ್ದರು. ಈ ಮೂಲಕ ದೊಡ್ಡ ಹೆಸರು ಮಾಡಿದ್ದಾರೆ. ಅವರು ಈಗ ವಿವಾಹ ಆಗಿ ಸಂಸಾರದ ಕಡೆ ಗಮನ ಹರಿಸಿದ್ದಾರೆ. ಹೀಗಿರುವಾಗಲೇ ದೀಪಿಕಾ ಬಗ್ಗೆ ಪುಷ್ಪಾ ಈ ರೀತಿಯ ಹೇಳಿಕೆ ನೀಡಿದ್ದರು.
ದೀಪಿಕಾ ದಾಸ್ಗೆ ಪುಷ್ಪಾ ಅವರು ದೊಡ್ಡಮ್ಮ ಆಗಬೇಕು. ಪುಷ್ಪಾ ಹಾಗೂ ದೀಪಿಕಾ ದಾಸ್ ತಾಯಿ ಸೋದರಿಯರು. ಹೀಗಾಗಿ, ಸಂಬಂಧದಲ್ಲಿ ಯಶ್ ಹಾಗೂ ದೀಪಿಕಾ ಅಣ್ಣ-ತಂಗಿ.
Advertisement