

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಇಂದು ಹಬ್ಬ. ತಮ್ಮ ನೆಚ್ಚಿನ ತಾರೆ ಕೊಲೆ ಆರೋಪದಲ್ಲಿ ಜೈಲುಸೇರಿರುವ ಬೇಸರ ಸಂಗತಿ ಮಧ್ಯೆ ಅವರ ಅಭಿನಯದ ಡೆವಿಲ್ ಚಿತ್ರ ಇಂದು ತೆರೆಕಂಡಿದೆ.ರಾಜ್ಯದ ನಾನಾ ಕಡೆಗಳಲ್ಲಿ ಸಂಭ್ರಮ ಮುಗಿಲುಮುಟ್ಟಿದೆ.
ಇಂದು ಮುಂಜಾನೆ 6.30ರಿಂದ ಶೋಗಳು ಆರಂಭ ಆಗಿವೆ. ಎಲ್ಲಾ ಶೋಗಳು ಹೌಸ್‌ಫುಲ್ ಆಗಿವೆ. ಮಲ್ಟಿಪ್ಲೆಕ್ಸ್ಗಳಲ್ಲಿಯೂ ಸಿನಿಮಾನ ದೊಡ್ಡ ಸಂಖ್ಯೆಯಲ್ಲಿ ವೀಕ್ಷಣೆ ಮಾಡುತ್ತಿದ್ದಾರೆ. ಬೆಳ್ಳಂಬೆಳಗ್ಗೆ ಹಲವು ಕಡೆ ಫ್ಯಾನ್ಸ್ ಶೋ ಇಡಲಾಗಿತ್ತು.
ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ, ಮಗ ವಿನೀಶ್, ನಟ ಧನ್ವೀರ್, ರಚಿತಾ ರಾಮ್ ಕೂಡ ಥಿಯೇಟರ್‌ಗೆ ಬಂದು, ಫ್ಯಾನ್ಸ್ ಜೊತೆ ಸಿನಿಮಾ ನೋಡುತ್ತಿದ್ದಾರೆ.
ಸಿನಿಮಾ ಭರ್ಜರಿ ಗಳಿಕೆ
‘ದಿ ಡೆವಿಲ್’ ಸಿನಿಮಾ ರಿಲೀಸ್‌ಗೂ ಮುನ್ನವೇ ಅಂದಾಜು 3.5 ಕೋಟಿ ರೂಪಾಯಿಗೂ ಅಧಿಕವಾಗಿ ಸಂಗ್ರಹಣೆ ಮಾಡಿದೆ. ಜೈ ಮಾತಾ ಮಾತಾ ಕಂಬೈನ್ಸ್ ಶನಿವಾರ ಡೆವಿಲ್ ಸಿನಿಮಾ ನಿರ್ಮಾಣ ಸಂಸ್ಥೆ ಈ ಕುರಿತು ಪೋಸ್ಟರ್ ಬಿಡುಗಡೆ ಮಾಡಿದೆ. ‘ಒಂದು ಐಕಾನ್, ಒಂದು ಅತ್ಯುತ್ಸಾಹದ ಫ್ಯಾನ್ಸ್ ಬಳಗದಿಂದ ಸಂಗ್ರಹವಾದ ಮೊತ್ತ 2 ಕೋಟಿ 52 ಲಕ್ಷ ರೂಪಾಯಿ’ ಎಂದು ತಿಳಿಸಿತ್ತು.
ಥಿಯೇಟರ್‌ನಲ್ಲಿ ಶೋ ಮೇಲೆ ಶೋ ಬುಕ್ಕಿಂಗ್
ಜೈಲುಪಾಲಾಗಿರುವ ದರ್ಶನ್ ಅಭಿಮಾನಿಗಳು ಈ ಸಿನಿಮಾವನ್ನು ಗೆಲ್ಲಿಸಲೇಬೇಕು ಎಂದು ಹಠಕ್ಕೆ ಬಿದ್ದಿದ್ದಾರೆ. ಇವರ ಅಭಿಮಾನಿಗಳಿಂದಾಗಿ ಫಸ್ಟ್ ಡೇ ಫಸ್ಟ್ ಶೋ ಹೌಸ್‌ಫುಲ್ ಆಗಿದೆ. ಹೀಗಾಗಿ ಶೋಗಳ ಸಂಖ್ಯೆ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಕೆಲವು ಮಲ್ಟಿಫ್ಲೆಕ್ಟ್‌ನಲ್ಲಿ ಒಂದೇ ದಿನ 30 ಶೋಗಳು ಬುಕ್ ಆಗಿವೆ. ಟಿಕೆಟ್ ದರ ಕೂಡ ಏರಿಕೆಯಾಗಿದೆ, ಗರಿಷ್ಠ ಟಿಕೆಟ್ ದರ 900 ರೂಪಾಯಿವರೆಗೆ ಏರಿಕೆಯಾಗಿದೆ. ಬಹುತೇಕ ಕಡೆ 500 ರೂಪಾಯಿಯಿಂದ 600 ರೂಪಾಯಿವರೆಗೂ ಟಿಕೆಟ್ ದರವಿದೆ.
ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಹಾಗೂ ಟ್ರೇಲರ್ನಿಂದಲೇ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿವೆ. ಸೂರ್ಯನಿಗೆ ಜಾಸ್ತಿ ಹೊತ್ತು ಗ್ರಹಣ ಹಿಡಿಯೋಲ್ಲ ಚಿನ್ನ ಎಂಬ ಡೈಲಾಗ್ ಅಭಿಮಾನಿಗಳ ಉತ್ಸಾಹ ಹೆಚ್ಚಿಸಿದ್ದು, ಈ ವಾರಾಂತ್ಯ ಕ್ರೇಜ್ ಇನ್ನಷ್ಟು ಜಾಸ್ತಿಯಾಗುವ ನಿರೀಕ್ಷೆಯಿದೆ.
Advertisement