

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ರಾಜ್ ಬಿ ಶೆಟ್ಟಿ ಅಬಿನಯದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನದ ಚಿತ್ರ '45' ಇದೇ ಕ್ರಿಸ್ ಮಸ್ ಗೆ ತೆರೆಗೆ ಬರುತ್ತಿದೆ. ಈ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು ಅದರಲ್ಲಿ ನಟ ಶಿವರಾಜ್ ಕುಮಾರ್ ಅವರ ಲೇಡಿ ಗೆಟಪ್ ಗಮನ ಸೆಳೆದಿದೆ.
‘45’ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದ ಮೂಲಕ ಸಂಗೀತ ಸಂಯೋಜಕ ಅರ್ಜುನ್ ಜನ್ಯ ಅವರು ಡೈರೆಕ್ಟರ್ ಆಗಿದ್ದಾರೆ. ಅವರು ಪ್ರಥಮ ಸಿನಿಮಾದಲ್ಲೇ ಗೆಲ್ಲುವ ಸೂಚನೆ ನೀಡಿದ್ದಾರೆ. ಈ ಚಿತ್ರದ ಟ್ರೇಲರ್ ಅದ್ಭುತವಾಗಿ ಮೂಡಿ ಬಂದಿದೆ. ಹುಟ್ಟು ಹಾಗೂ ಸಾವಿನ ನಡುವಿನ ಕಥೆ ಇದು ಎನ್ನಲಾಗುತ್ತಿದೆ.
ರಾಜ್ ಬಿ ಶೆಟ್ಟಿ, ಶಿವರಾಜ್ಕುಮಾರ್ ಹಾಗೂ ಉಪೇಂದ್ರ ಪಾತ್ರಗಳು ಟ್ರೇಲರ್ನಲ್ಲಿ ಹೈಲೈಟ್ ಆಗಿವೆ. ಗೋರಿ ಮೇಲೆ ಹುಟ್ಟಿದ ದಿನಾಂಕ, ಹಾಗೂ ಸಾಯುವ ದಿನಾಂಕ ಬರೆದಿರುತ್ತಾರೆ. ಮಧ್ಯದಲ್ಲಿ ಒಂದು ಸಣ್ಣ ಗೆರೆ. ಅದುವೇ ಜೀವನ ಎಂದು ಉಪೇಂದ್ರ ಹೇಳುವ ಡೈಲಾಗ್ ಗಮನ ಸೆಳೆದಿದೆ.
ಟ್ರೇಲರ್ ಕೊನೆಯಲ್ಲಿ ಶಿವರಾಜ್ಕುಮಾರ್ ತಾಳುವ ಅವತಾರ ಮೆಚ್ಚುಗೆ ಪಡೆದಿದೆ. ಈಗಾಗೇ ‘ಮಾರ್ಕ್’ ಸಿನಿಮಾ ಟ್ರೇಲರ್ ಭರ್ಜರಿ ಮೆಚ್ಚುಗೆ ಪಡೆದಿದೆ. ಈ ಚಿತ್ರ ಕೂಡ ಡಿಸೆಂಬರ್ 25ರಂದು ಬರುತ್ತಿದೆ. ಅದರ ಜೊತೆಗೆ ‘45’ ಸಿನಿಮಾ ಕೂಡ ಟ್ರೇಲರ್ ಮೂಲಕ ಗಮನ ಸೆಳೆದಿದೆ.
ಈ ವರ್ಷ ಕಡಿಮೆ ಬಜೆಟ್ ನಲ್ಲಿ ತೆರೆಕಂಡು ಭಾರೀ ಯಶಸ್ಸು ಗಳಿಸಿದ ಕನ್ನಡದ ಚಿತ್ರ ‘ಸು ಫ್ರಮ್ ಸೋ’, ಈ ಸಿನಿಮಾದಲ್ಲಿ ಕಥಾ ನಾಯಕ ಜೆಪಿ ತುಮ್ಮಿನಾಡು ಅವರು ಸೀರೆ ಉಟ್ಟು ಬರುತ್ತಾರೆ. ಈ ದೃಶ್ಯ ಸಾಕಷ್ಟು ಗಮನ ಸೆಳೆದಿತ್ತು. ಈಗ ಕನ್ನಡದ ಖ್ಯಾತ ನಟ ಶಿವರಾಜ್ಕುಮಾರ್ ಅವರು ‘45’ ಚಿತ್ರಕ್ಕಾಗಿ ಹೆಣ್ಣಿನ ವೇಷ ಧರಿಸಿದ್ದಾರೆ.
Advertisement