ಸ್ಯಾಂಡಲ್‌ವುಡ್‌ನಲ್ಲಿ ಇಂದು ಎರೆಡೆರಡು ಮದುವೆ: ಹಸೆಮಣೆ ಏರಿದೆ ಜಯಮಾಲಾ ಪುತ್ರಿ, ರಕ್ಷಿತ ಸಹೋದರ ರಾಣಾ!

ಬೆಂಗಳೂರು ಅರಮನೆ ಮೈದಾನದ ಚಾಮರ ವಜ್ರದಲ್ಲಿ ರಕ್ಷಿತಾ ಸಹೋದರ ನಟ ರಾಣಾ ಮದುವೆ ನಡೆಯಿತು. ಬಹುಕಾಲದ ಗೆಳತಿ ರಕ್ಷಿತಾ ಜೊತೆ ರಾಣಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲಿ ಇಂದು ಎರೆಡೆರಡು ಮದುವೆ: ಹಸೆಮಣೆ ಏರಿದೆ ಜಯಮಾಲಾ ಪುತ್ರಿ, ರಕ್ಷಿತ ಸಹೋದರ ರಾಣಾ!
Updated on

ಸ್ಯಾಂಡಲ್‌ವುಡ್‌ನಲ್ಲಿ ಮದುವೆ ಸೀಸನ್ ನಡೆಯುತ್ತಿದೆ. ಹೌದು... ಹಿರಿಯ ನಟಿ ಜಯಮಾಲಾ ಪುತ್ರಿ ಹಸೆಮಣೆ ಏರಿದ್ದರೆ, ಮತ್ತೊಂದೆಡೆ ನಟಿ ರಕ್ಷಿತಾ ಸಹೋದರ ರಾಣಾ ಸಹ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಬೆಂಗಳೂರು ಅರಮನೆ ಮೈದಾನದ ಚಾಮರ ವಜ್ರದಲ್ಲಿ ರಕ್ಷಿತಾ ಸಹೋದರ ನಟ ರಾಣಾ ಮದುವೆ ನಡೆಯಿತು. ಬಹುಕಾಲದ ಗೆಳತಿ ರಕ್ಷಿತಾ ಜೊತೆ ರಾಣಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ಮೂರು ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ರಾಣಾ ಮದುವೆ ಅದ್ದೂರಿಯಾಗಿ ನೆರೆವೇರಿದ್ದು, ಚಿತ್ರರಂಗದ ಸೆಲೆಬ್ರಿಟಿಗಳು ಮಗುವೆ ಆಗಮಿಸಿ ನವಜೋಡಿಗೆ ಶುಭಾಶಯ ತಿಳಿಸಿದರು. ಸುದೀಪ್ ಮತ್ತು ಪ್ರಿಯಾ, ಹಿರಿಯ ನಟಿಯರಾದ ಶ್ರುತಿ, ಮಾಳವಿಕ, ಸುಧಾರಾಣಿ, ವಿನಯ ಪ್ರಸಾದ್ ಸಮಾರಂಭದಲ್ಲಿ ಭಾಗಿಯಾಗಿದ್ದರು.

ಮತ್ತೊಂದೆಡೆ, ಸ್ಯಾಂಡಲ್‌ವುಡ್‌ನ ಹಿರಿಯ ನಟಿ ಜಯಮಾಲಾ ಅವರ ಪುತ್ರಿ ಸೌಂದರ್ಯ ಅವರು ರುಷಭ್ ಎಂಬುವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಗಾಯಿತ್ರಿ ವಿಹಾರದಲ್ಲಿ ಅದ್ಧೂರಿಯಾಗಿಯೇ ಇವರ ಮದುವೆ ನಡೆಯಿತು. ಸೌಂದರ್ಯಾ ಮದುವೆಗೆ ಕನ್ನಡ ಚಿತ್ರರಂಗದ ಅನೇಕ ಗಣ್ಯರು ಸಾಕ್ಷಿ ಆಗಿದ್ದಾರೆ. ಈ ಮದುವೆಗೆ ಯಶ್-ರಾಧಿಕಾ ಪಂಡಿತ್, ಕಿಚ್ಚ ಸುದೀಪ್ ಮತ್ತು ಪತ್ನಿ, ಉಪೇಂದ್ರ ಸೇರಿದಂತೆ ಹಲವರು ಬಂದು ವಧು-ವರರಿಗೆ ಆಶೀರ್ವಾದಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com