
ಉತ್ತರಾಖಂಡ್ : ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರ ಪುತ್ರಿ ಆರುಷಿ ನಿಶಾಂಕ್ ಅವರಿಗೆ ಹಿರೋಯಿನ್ ಮಾಡುತ್ತೇವೆಂದು ಖದೀಮರು 4 ಕೋಟಿ ರೂಪಾಯಿ ಹಣವನ್ನು ಪಡೆದು ಎಸ್ಕೇಪ್ ಆಗಿರುವ ಘಟನೆ ನಡೆದಿದೆ.
ಮುಂಬೈನ ಜುಹು ಪ್ರದೇಶದ ಇಬ್ಬರು ವ್ಯಕ್ತಿಗಳು ಚಲನಚಿತ್ರ ನಿರ್ಮಾಪಕರೆಂದು ಹೇಳಿಕೊಂಡು ಆಕೆಯಿಂದ 4 ಕೋಟಿ ರೂ. ಸುಲಿಗೆ ಮಾಡಿದ್ದಾರೆ. ಆರುಷಿ ನಿಶಾಂಕ್ ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರ ಪುತ್ರಿ. ಆರುಷಿ ಗೆ ಮೊದಲಿನಿಂದಲೂ ನಟನೆ ಅಂದ್ರೆ ತುಂಬಾ ಇಷ್ಟ. ಅವರು ಈಗಾಗಲೇ ಹಲವಾರು ಸಣ್ಣ ಚಿತ್ರಗಳಲ್ಲಿ ನಟಿಸಿದ್ದಾರೆ. ಆರುಷಿ ಚಲನಚಿತ್ರಗಳಲ್ಲಿ ನಟಿಸಲು ಮತ್ತು ಸ್ವಂತ ಚಲನಚಿತ್ರಗಳನ್ನು ನಿರ್ಮಿಸಲು ಹಿಮಶ್ರೀ ಫಿಲ್ಮ್ಸ್ ಎಂಬ ಕಂಪನಿಯನ್ನು ನಡೆಸುತ್ತಿದ್ದಾರೆ.
ಮುಂಬೈನ ಮಾನ್ಸಿ ವರುಣ್ ಬಾಗ್ಲಾ ಮತ್ತು ವರುಣ್ ಪ್ರಮೋದ್ ಕುಮಾರ್ ಬಾಗ್ಲಾ ಎನ್ನುವವರು ಚಿತ್ರ ನಿರ್ಮಾಪಕರು ಎಂದು ಹೇಳಿಕೊಂಡು ಆರುಷಿ ನಿಶಾಂಕ್ ಮನೆಗೆ ಬಂದು ಆಕೆಯನ್ನು ಭೇಟಿಯಾಗಿದ್ದಾರೆ. ಇಬ್ಬರು ವ್ಯಕ್ತಿಗಳು ತಮ್ಮ ಮುಂಬರುವ ಚಿತ್ರ ‘ಆಂಖೋಂ ಕಿ ಗುಸ್ತಖಿಯಾ’ದಲ್ಲಿ ಪ್ರಮುಖ ನಾಯಕಿ ಪಾತ್ರದಲ್ಲಿ ನಟಿಸಲು ಆರುಷಿಯನ್ನು 5 ಕೋಟಿ ರೂ. ಕೇಳಿದರು. ಚಿತ್ರ ಬಿಡುಗಡೆಯಾದ ನಂತರ, ಶೇ. 20 ರಷ್ಟು ಬಡ್ಡಿಯೊಂದಿಗೆ 15 ಕೋಟಿ ರೂ.ಗಳನ್ನು ಹಿಂದಿರುಗಿಸಲಾಗುವುದು ಎಂದು ಅವರಿಗೆ ಭರವಸೆ ನೀಡಲಾಯಿತು. ಆರುಷಿ ಒಪ್ಪಿಕೊಂಡು ಅವರಿಗೆ ನಾಲ್ಕು ಕಂತುಗಳಲ್ಲಿ ಒಟ್ಟು 4 ಕೋಟಿ ರೂ.ಗಳನ್ನು ನೀಡಿದ್ದಾರೆ.
ನನ್ನ ಸ್ಕ್ರೀಪ್ಟ್ ಅನ್ನು ತಾವೇ ಫೈನಲ್ ಮಾಡುವುದಕ್ಕೂ ಅವಕಾಶವಿದೆ. ಜೊತೆಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ಮಾಡಲು ಅವಕಾಶ ನೀಡುವುದಾಗಿ ಹೇಳಿದ್ದರು. ಈ ವರ್ಷ ಫೆಬ್ರವರಿ 2ರಂದು ಭಾರತದಲ್ಲಿ ಆಗಬೇಕಾದ ಸಿನಿಮಾದ ಶೂಟಿಂಗ್ ಪೂರ್ಣಗೊಳಿಸಲಾಗಿದ್ದು, ಉಳಿದ ಭಾಗವನ್ನು ಯುರೋಪಿನಲ್ಲಿ ಚಿತ್ರೀಕರಿಸುವ ಯೋಜನೆ ಮಾಡಲಾಗಿದೆ. ಆದರೆ ನನ್ನನ್ನು ಆಯ್ಕೆ ಮಾಡಿದ್ದ ಸ್ಥಾನದಲ್ಲಿ ಬೇರೆ ನಟಿಯನ್ನು ಆಯ್ಕೆ ಮಾಡಲಾಗಿದೆ. ತನ್ನ ಹಣ ಹಿಂದಿರುಗಿಸಿ ಕೊಡುವಂತೆ ಕೇಳಿದಕ್ಕೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
Advertisement