
ಮೆಗಾಸ್ಟಾರ್ ಚಿರಂಜೀವಿ ಹಾಗೂ ಸುರೇಖಾ ಕೊಣಿಡೆಲ ದಾಂಪತ್ಯ ಜೀವನಕ್ಕೆ 46 ವರ್ಷಗಳ ಸಂಭ್ರಮ. ದುಬೈಗೆ ತೆರಳುವ ಮಾರ್ಗ ಮಧ್ಯದಲ್ಲಿ ವಿಮಾನದಲ್ಲಿ ವಿವಾಹ ವಾರ್ಷಿಕೋತ್ಸವ ಆಚರಿಸಿದ್ದಾರೆ.
ಇವರೊಂದಿಗೆ ನಟ ನಾಗಾರ್ಜುನ ಹಾಗೂ ಮಹೇಶ್ ಬಾಬು ಅವರ ಪತ್ನಿ ನಮ್ರತಾ ಶಿರೋಡ್ಕರ್ ಇದ್ದಾರೆ. ಈ ಸಂಭ್ರಮದ ಫೋಟೋಗಳನ್ನು ಸ್ವತಃ ಚಿರಂಜೀವಿ ಅವರೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ದುಬೈಗೆ ಪ್ರಯಾಣಿಸುತ್ತಾ ತಮ್ಮ ಆಪ್ತ ಸ್ನೇಹಿತರ ಜೊತೆ ವೆಡ್ಡಿಂಗ್ ವಿವಾಹ ವಾರ್ಷಿಕೋತ್ಸವ ಆಚರಣೆ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ.
ಸುರೇಖಾ ನನ್ನ ಜೀವನಕ್ಕೆ ಬಂದಿದ್ದಕ್ಕೆ ನಾನು ಯಾವಾಗಲೂ ಅದೃಷ್ಟವಂತ ಅಂತ ಅಂದುಕೊಳ್ಳುತ್ತೇನೆ. ಆಕೆ ನನ್ನ ಬಲ, ನನ್ನನ್ನು ನಡೆಸುವ ಶಕ್ತಿ. ಆಕೆಯ ಮಾತುಗಳು ಜೀವನದಲ್ಲಿ ಮುಂದೆ ಹೋಗಲು ನನಗೆ ಪ್ರೋತ್ಸಾಹ ನೀಡುತ್ತವೆ. ಥ್ಯಾಂಕ್ಯೂ ಸೋಲ್ ಮೇಟ್ ಅಂತ ಚಿರಂಜೀವಿ ಬರೆದುಕೊಂಡಿದ್ದಾರೆ.
ಚಿರಂಜೀವಿ ಸದ್ಯ ಸಾಮಾಜಿಕ-ಪೌರಾಣಿಕ ಚಿತ್ರವಾದ 'ವಿಶ್ವಂಭರ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇದರಲ್ಲಿ ತ್ರಿಶಾ ಕೃಷ್ಣನ್ ಮತ್ತು ಆಶಿಕಾ ರಂಗನಾಥ್ ಕೂಡ ನಟಿಸಿದ್ದಾರೆ. ಇದನ್ನು ವಶಿಸ್ತಾ ಅವರು ನಿರ್ದೇಶಿಸಿದ್ದು, ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಲಿದೆ.
Advertisement