
ಬೆಂಗಳೂರು: ಕಳೆದ ಕೆಲ ವರ್ಷಗಳಿಂದಲೂ ಅನಾರೋಗ್ಯ ಸಮಸ್ಯೆದಿಂದ ಬಳಲುತ್ತಿದ್ದ ಕನ್ನಡ ಚಲನಚಿತ್ರ ರಂಗದ ಯಶಸ್ವಿ ನಿರ್ದೇಶಕ ಎಸ್.ಉಮೇಶ್ ನಿಧನ ಹೊಂದಿದ್ದಾರೆ.
ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಉಮೇಶ್ ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನ ಹೊಂದಿದ್ದಾರೆ. ಅವರ ಅಂತ್ಯಕ್ರಿಯೆ ಇಂದು ಬನಶಂಕರಿಯ ಚಿತಾಗಾರದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ನಿರ್ದೇಶಕ ಎನಿಸಿಕೊಂಡಿದ್ದ ಉಮೇಶ್ ಅವರು, ‘ಅವನೇ ನನ್ನ ಗಂಡ’, ‘ನನಗೂ ಹೆಂಡತಿ ಬೇಕು’, ‘ತುಂಬಿದ ಮನೆ’, ‘ರಾಜ ಕೆಂಪು ರೋಜ’, ‘ಅವಳೆ ನನ್ನ ಹೆಂಡ್ತಿ’, ಎಲ್ಲರಂಥಲ್ಲ ನನ್ನ ಗಂಡ ಇನ್ನೂ ಕೆಲವು ಸಿನಿಮಾಗಳನ್ನ ನಿರ್ದೇಶಿಸಿದ್ದರು.
ಎಸ್ ಉಮೇಶ್ ಅವರು ಕಳೆದ ಕೆಲ ವರ್ಷಗಳಿಂದಲೂ ಕಿಡ್ನಿಗೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದರು. ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿದ್ದ ಎಸ್ ಉಮೇಶ್ ಅವರು 2021 ರಲ್ಲಿ ತಮಗೆ ಆರ್ಥಿಕ ಸಹಾಯದ ಅವಶ್ಯಕತೆ ಇದೆಯೆಂದು ಮನವಿ ಮಾಡಿದ್ದರು. ವಿಡಿಯೋ ಮೂಲಕ ತಮ್ಮ ನೋವು ತೋಡಿಕೊಂಡಿದ್ದ ಉಮೇಶ್, ಸಹಾಯಕ್ಕಾಗಿ ಎಲ್ಲರ ಬಳಿ ಮನವಿ ಮಾಡಿಕೊಂಡಿದ್ದರು.
Advertisement