
ಹೈದರಾಬಾದ್: ತೆಲುಗು ಸೂಪರ್‌ಸ್ಟಾರ್ ಜೂನಿಯರ್ ಎನ್‌ಟಿಆರ್ ಅಭಿನಯದ 'ದೇವರ: ಭಾಗ 1' ಚಿತ್ರ ಮಾರ್ಚ್ 28 ರಂದು ಜಪಾನ್‌ನಲ್ಲಿ ಬಿಡುಗಡೆಯಾಗಲಿದೆ.
ಈ ಹಿಂದೆ ಎನ್‌ಟಿಆರ್ ನಟಿಸಿದ 2022 ರ 'ಆರ್‌ಆರ್‌ಆರ್' ಚಿತ್ರ ಜಪಾನ್ ನಲ್ಲಿ ಬಿಡುಗಡೆಯಾಗಿದ್ದು, ಇದು ಚಲನಚಿತ್ರ ಪ್ರೇಕ್ಷಕರಿಂದ ಹೆಚ್ಚಿನ ಪ್ರಶಂಸೆ ಪಡೆದಿತ್ತು.
ಇದೀಗ 'ದೇವರ' ಚಿತ್ರ ಬಿಡುಗಡೆಯಾಗುತ್ತಿದ್ದು, ಇದಕ್ಕು ಮೊದಲು, ನಟ ಜೂ. ಎನ್ ಟಿ ಆರ್ ಅವರು ಮಾರ್ಚ್ 22 ರಂದು ಚಿತ್ರದ ಪ್ರಚಾರಕ್ಕಾಗಿ ಜಪಾನ್‌ಗೆ ಪ್ರಯಾಣಿಸಲಿದ್ದಾರೆ.
ಕೊರಟಾಲ ಶಿವ ನಿರ್ದೇಶನದ 'ದೇವರ' ಚಿತ್ರದಲ್ಲಿ ಜಾನ್ವಿ ಕಪೂರ್ ಮತ್ತು ಸೈಫ್ ಅಲಿ ಖಾನ್ ಕೂಡ ನಟಿಸಿದ್ದಾರೆ. ಸೈಫ್ ಹಾಗೂ ಜಾನ್ವಿ ಅವರ ಮೊದಲ ಪ್ಯಾನ್-ಇಂಡಿಯಾ ತೆಲುಗು ಚಿತ್ರ ಇದಾಗಿದೆ.
ಈ ಚಿತ್ರ ಕಳೆದ ಸೆಪ್ಟೆಂಬರ್ 27 ರಂದು ಭಾರತದಾದ್ಯಂತ ಬಿಡುಗಡೆಯಾಗಿದ್ದು, ಚಿತ್ರವನ್ನು ಯುವಸುಧಾ ಆರ್ಟ್ಸ್ ಮತ್ತು ಎನ್‌ಟಿಆರ್ ಆರ್ಟ್ಸ್ ನಿರ್ಮಿಸಿದ್ದು, ನಂದಮೂರಿ ಕಲ್ಯಾಣ ರಾಮ್ ಪ್ರಸ್ತುತಪಡಿಸಿದ್ದಾರೆ.
Advertisement