
ಬೆಂಗಳೂರು: ರಾಪರ್ ಚಂದನ್ ಶೆಟ್ಟಿ ವಿರುದ್ಧ ಟ್ಯೂನ್ ಕದ್ದಿರುವ ಆರೋಪ ಕೇಳಿಬಂದಿದೆ.
Cotton Candy music album ಗಾಗಿ ಮಾಡಿರುವ ಟ್ಯೂನ್ ಚಂದನ್ ಶೆಟ್ಟಿ ಅವರ ಸ್ವಂತದ್ದಲ್ಲ ಎಂದು Rock Star Yuvaraj ಆರೋಪ ಮಾಡಿದ್ದಾರೆ.
Candy music album ನಲ್ಲಿರುವ ಈ ಟ್ಯೂನ್ ನ್ನು ತಾವು 6 ವರ್ಷಗಳ ಹಿಂದೆಯೇ ವೈ ಬುಲ್ ಪಾರ್ಟಿ (Y Bull Party)' ಎಂಬ ಹಾಡಿನಲ್ಲಿ ಬಳಸಿದ್ದೇನೆ. ಕಾಟನ್ ಕ್ಯಾಂಡಿ ಟ್ಯೂನ್ ನನ್ನ ಪಾರ್ಟಿ ಸಾಂಗ್ ನ ನಕಲಿಯಂತೆಯೇ ಇದೆ ಎಂದು Yuvaraj ಆರೋಪಿಸಿದ್ದು ಚಂದನ್ ಶೆಟ್ಟಿ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.
ಮ್ಯೂಸಿಕ್ ವಿಡಿಯೋ 'ಕಾಟನ್ ಕ್ಯಾಂಡಿ' ಸದ್ಯ ಟ್ರೆಂಡ್ ಸೃಷ್ಟಿಸಿದೆ. ಈ ಆಲ್ಬಮ್ ನಲ್ಲಿ ಚಂದನ್ ಶೆಟ್ಟಿಗೆ ಸುಷ್ಮಿತಾ ಗೋಪಿನಾಥ್ ಜೋಡಿಯಾಗಿದ್ದಾರೆ.
ಕಳೆದ ತಿಂಗಳು, ಅಂದರೆ 27 ಡಿಸೆಂಬರ್ 2024ರಂದು ಈ ಕಾಟನ್ ಕ್ಯಾಂಡಿ ರಿಲೀಸ್ ಆಗಿದೆ. ಈ ಮ್ಯೂಸಿಕ್ ಆಲ್ಬಮ್ ನ್ನು ಸ್ವತಃ ಚಂದನ್ ಶೆಟ್ಟಿಯವರೇ ನಿರ್ದೇಶಿಸಿದ್ದಾರೆ ಎನ್ನುವುದು ಗಮನಾರ್ಹ. ಚಂದನ್ ಶೆಟ್ಟಿ 2011 ರಿಂದ ರ್‍ಯಾಪ್ ಹಾಡುಗಳ ಮೂಲಕ ಮೂಲಕ ಖ್ಯಾತಿ ಪಡೆದಿದ್ದಾರೆ.
ತಮ್ಮ ವಿರುದ್ಧದ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಂದನ್ ಶೆಟ್ಟಿ, ನಾನು ಕಾಪಿ ಮಾಡಿಲ್ಲ, ಅಂತಹ ಪ್ರಮೇಯವೇ ಇಲ್ಲ. ಬೇರೆಯವರ ಟ್ಯೂನ್ ಕಾಪಿ ಮಾಡಬಾರದೆಂಬ ಜ್ಞಾನ ಇದೆ. ಅವರ ಹಾಡನ್ನೂ ನಾನು ನೋಡಿಲ್ಲ. ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇನೆ ಎಂದು ಹೇಳಿದ್ದಾರೆ.
Advertisement